• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಕ್ಕಳ ಹತ್ಯಾಕಾಂಡ : ಅಲ್-ಖೈದಾ ದುಃಖದಲ್ಲಿದೆಯಂತೆ..!

By Kiran B Hegde
|

ಪೇಶಾವರ, ಡಿ. 22: ಪಾಕಿಸ್ತಾನದ ಪೇಶಾವರದಲ್ಲಿ ತಾಲಿಬಾನ್ ಉಗ್ರರು ನಡೆಸಿದ ನೂರಾರು ಮಕ್ಕಳ ಮಾರಣಹೋಮದಿಂದ ಇಡೀ ಜಗತ್ತು ಕಂಗಾಲಾಗಿದೆ. ಇದುವರೆಗೆ ಉಗ್ರರನ್ನು ಪೋಷಿಸುತ್ತ ಬಂದಿದ್ದ ಪಾಕಿಸ್ತಾನ ಕೂಡ ಅಫ್ಘಾನಿಸ್ತಾನ ಜೊತೆಗೂಡಿ ತಾಲಿಬಾನ್ ವಿರುದ್ಧ ನಿರ್ಣಾಯಕ ಸಮರಕ್ಕಿಳಿದಿದೆ.

ಇದೀಗ ಅಲ್ ಖೈದಾ ಸರದಿ. ತಾಲಿಬಾನ್ ಸಹೋದರ ಸಂಸ್ಥೆಯಾಗಿರುವ ಅಲ್ ಖೈದಾ ಕೂಡ ಮಕ್ಕಳ ಹತ್ಯಾಕಾಂಡವನ್ನು ವಿರೋಧಿಸಿದೆ. "ತಾಲಿಬಾನ್‌ ನಡೆಸಿದ ಮಕ್ಕಳ ಹತ್ಯಾಕಾಂಡದಿಂದ ನಮ್ಮ ಹೃದಯ ನೋವು ಹಾಗೂ ದುಃಖದಿಂದ ಒಡೆದುಹೋಗಿದೆ" ಎಂದು ಅಲ್ ಖೈದಾ ಸಂಘಟನೆಯ ದಕ್ಷಿಣ ಏಷ್ಯಾ ವಕ್ತಾರ ಒಸಾಮಾ ಮೆಹಮೂದ್ ನಾಲ್ಕು ಪುಟಗಳ ಹೇಳಿಕೆ ನೀಡಿದ್ದಾನೆ. [ತಾಲಿಬಾನ್ ದಾಳಿ : ನೂರಾರು ಮಕ್ಕಳ ಬಲಿ]

ಮುಸ್ಲಿಮರ ಮೇಲೆ ಸೇಡು ಬೇಡ : "ಪಾಕಿಸ್ತಾನ ಸೈನ್ಯ ನಡೆಸುತ್ತಿರುವ ದೌರ್ಜನ್ಯ ಮಿತಿಮೀರಿದೆ ಎಂಬುದರಲ್ಲಿ ಅನುಮಾನವಿಲ್ಲ. ಪಾಕಿಸ್ತಾನಿ ಸೈನ್ಯ ಅಮೆರಿಕದ ಗುಲಾಮನಂತೆ ವರ್ತಿಸುತ್ತಿದೆ. ಆದರೆ, ನಾವು ಮುಸ್ಲಿಮರ ಮೇಲೆ ಸೇಡು ತೀರಿಸಿಕೊಳ್ಳಬಾರದು" ಎಂದು ಅಭಿಪ್ರಾಯಪಟ್ಟಿದೆ. [ಮುಲಾಯಂ ಹುಟ್ಟುಹಬ್ಬಕ್ಕೆ ತಾಲಿಬಾನ್ ಫಂಡ್]

"ನಾವು ಅಲ್ಲಾಹ್‌ನ ಶತ್ರುವಾದ ಅಮೆರಿಕದ ವಿರುದ್ಧ ಹೋರಾಡುತ್ತಿದ್ದೇವೆ. ಅಮೆರಿಕನ್ನರಿಗೆ ಗುರಿ ಇಟ್ಟಿರುವ ಗನ್‌ಗಳನ್ನು ಮಕ್ಕಳು, ಮಹಿಳೆಯರು ಹಾಗೂ ಮುಸ್ಲಿಮರತ್ತ ತಿರುಗಿಸಬಾರದು" ಎಂದು ಒಸಾಮಾ ಮೆಹಮೂದ್ ಹೇಳಿದ್ದಾನೆ.

ಮಯನ್ಮಾರ್, ಬಾಂಗ್ಲಾದೇಶ್ ಮತ್ತು ಭಾರತದಲ್ಲಿ ಜಿಹಾದ್ ನಡೆಸುವ ಉದ್ದೇಶದಿಂದ ಅಯ್ಮನ್ ಅಲ್ ಝವಾಹಿರಿ ಈಚೆಗಷ್ಟೇ ಅಲ್ ಖೈದಾದ ದಕ್ಷಿಣ ಏಶಿಯಾ ಘಟಕ ಆರಂಭಿಸಿದ್ದಾನೆ.

ಮಕ್ಕಳನ್ನು ಕೊಲ್ಲುವುದು ಇಸ್ಲಾಂಗೆ ವಿರುದ್ಧ : ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್ ನಡೆಸಿರುವ ಮಕ್ಕಳ ಮಾರಣಹೋಮವನ್ನು ಅಫ್ಘಾನ್ ತಾಲಿಬಾನ್ ಕೂಡ ವಿರೋಧಿಸಿದೆ. ಮುಗ್ಧ ಮಕ್ಕಳನ್ನು ಕೊಲ್ಲುವುದು ಇಸ್ಲಾಂಗೆ ವಿರುದ್ಧ ಎಂದೂ ಹೇಳಿದೆ. [ತಾಲಿಬಾನ್ ಅಟಾಕ್ : ಪಾಕ್ ಸುಸ್ತು]

ಪಾಕಿಸ್ತಾನವು ಮಕ್ಕಳ ಮಾರಣಹೋಮವನ್ನು "ಮಿನಿ 9/11" ಎಂದು ಘೋಷಿಸಿಕೊಂಡಿದೆ. ಈ ಪ್ರಕರಣವು ಉಗ್ರರ ವಿರುದ್ಧ ನಡೆಸುತ್ತಿರುವ ಹೋರಾಟದ ರೂಪುರೇಷೆಯನ್ನೇ ಬದಲಾಯಿಸಿದೆ. ಅಫ್ಘಾನಿಸ್ತಾನದೊಂದಿಗೆ ಹಂಚಿಕೊಂಡಿರುವ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಸೈನ್ಯವು ತಾಲಿಬಾನ್ ವಿರುದ್ಧ ಕಳೆದ ಆರು ತಿಂಗಳುಗಳಿಂದ ಹೋರಾಟನಿರತವಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Al-Qaeda's regional branch today said its heart was "bursting with pain" over the Taliban's massacre at a Pakistan school. "Our hearts are bursting with pain and grief over this incident," Osama Mehmood, spokesman for Al-Qaeda South Asia chapter said in a four-page emailed statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more