ಕ್ಯಾಲಿಫೋರ್ನಿಯಾದಲ್ಲಿ ಮನೆಗಳ ಮೇಲೆ ಬಿದ್ದ ವಿಮಾನ: 4 ಸಾವು

ರಿವರ್ ಸೈಡ್ ಕೌಂಟಿಯ ನಗರಾಡಳಿತದ ವಿಮಾನ ನಿಲ್ದಾಣದಿಂದ ಗಗನಕ್ಕೆ ಹಾರಿದ ಕೆಲವೇ ನಿಮಿಷಗಳಲ್ಲಿ ಪತನಗೊಂಡ ವಿಮಾನ.

ರಿವರ್ ಸೈಡ್ ಕೌಂಟಿ, ಫೆಬ್ರವರಿ 28: ಕ್ಯಾಲಿಫೋರ್ನಿಯಾದ ರಿವರ್ ಸೈಡ್ ಕೌಂಟಿಯಲ್ಲಿನ ಎರಡು ಮನೆಗಳ ಮೇಲೆ ಮಂಗಳವಾರ ಲಘು ವಿಮಾನವೊಂದು ಬಂದು ಅಪ್ಪಳಿಸಿದ ಹಿನ್ನೆಲೆಯಲ್ಲಿ ನಾಲ್ವರು ಸಾವಿಗೀಡಾಗಿ, ಐವರು ನಾಪತ್ತೆಯಾಗಿದ್ದಾರೆ.

ರಿವರ್ ಸೈಡ್ ಕೌಂಟಿಯ ಮುನಿಸಿಪಲ್ ವಿಮಾನ ನಿಲ್ದಾಣದಿಂದ ಹೊರಟಿದ್ದ ಸ್ಯಾನ್ ಜೋಸ್ ನಗರ ಮೂಲದ ಸೆಸ್ನಾ 310 ಎಂಬ ಲಘು ವಿಮಾನವು, ಗಗನಕ್ಕೆ ಹಾರಿದ ಕೆಲವೇ ನಿಮಿಷಗಳಲ್ಲಿ ಇದ್ದಕ್ಕಿದ್ದಂತೆ ಪತನಗೊಂಡಿತು.

Aircraft crashes into Riverside county houses, kills 4

ವಿಮಾನದಲ್ಲಿ ಇಬ್ಬರು ಹದಿಹರೆಯದ ಬಾಲಕಿಯರು ಸೇರಿದಂತೆ ಪೈಲಟ್ ಸೇರಿ ಐವರು ಪ್ರಯಾಣ ಬೆಳೆಸುತ್ತಿದ್ದರೆಂದು ಹೇಳಲಾಗಿದೆ.

ಲಘು ವಿಮಾನವು ಕಟ್ಟಡಗಳಿಗೆ ಅಪ್ಪಳಿಸುತ್ತಿದ್ದಂತೆ ವಿಮಾನದಲ್ಲಿದ್ದ ಒಬ್ಬ ಬಾಲಕಿ ಕಿಟಕಿಯ ಗಾಜು ಒಡೆದುಕೊಂಡು ಬಂದು ಆಚೆ ಬಿದ್ದಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಏತನ್ಮಧ್ಯೆ, ವಿಮಾನದ ಅವಶೇಷಗಳಿಂದ ಮೂರ್ಛೆ ಹೋಗಿದ್ದ ವ್ಯಕ್ತಿಯೊಬ್ಬನನ್ನು ರಕ್ಷಿಸಲಾಗಿದ್ದು, ಆತನನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ವಿಮಾನ ಹಾಗೂ ಮನೆಗಳ ಅವಶೇಷಗಳ ನಡುವೆ ಕಾಣೆಯಾಗಿರುವ ವ್ಯಕ್ತಿಗಳಿಗಾಗಿ ಶೋಧ ಮುಂದುವರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+