Get Updates
Get notified of breaking news, exclusive insights, and must-see stories!

Air Strike: ವಿಶ್ವದ ಮುಂದೆ "ಪಾಕ್‌ ಬಣ್ಣ" ಬಟಾಬಯಲು, ಇಲ್ಲಿದೆ ವೈರಲ್ ವಿಡಿಯೋ!

Funeral of Pakistani Terrorists: ಭಾರತದ ದಾಳಿ ಬೆನ್ನಲ್ಲೇ ಪಾಕಿಸ್ತಾನದ ಬಣ್ಣ ಬಯಲಾಗಿದ್ದು. ಇಡೀ ವಿಶ್ವದ ಮುಂದೆ ಪಾಕಿಸ್ತಾನ ಏನು ಎನ್ನುವುದು ಇದೀಗ ತಿಳಿಯುತ್ತಿದೆ. ಪಾಕಿಸ್ತಾನವು ನಮಗೂ ಉಗ್ರರಿಗೂ ಸಂಬಂಧಿವೇ ಇಲ್ಲ. ನಮ್ಮ ದೇಶದಲ್ಲಿ ಯಾವುದೇ ಉಗ್ರರ ನೆಲೆಗಳು ಇಲ್ಲ ಬೇಕಾದರೆ ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ಅಥವಾ ಯಾವುದೇ ದೇಶದ ಪ್ರತಿನಿಧಿಗಳಾದರೂ ಪಾಕಿಸ್ತಾನಕ್ಕೆ ಬಂದು ಪರಿಶೀಲನೆ ಮಾಡಬಹುದು ಅಂತ ಹೇಳಿದ್ದ ಪಾಕಿಸ್ತಾನದ ಬಣ್ಣವು ಇದೀಗ ಬಯಲಾಗಿದೆ. ಪಾಕ್‌ ತನ್ನ ಕಾಲುಗಳ ಮೇಲೆ ತಾನೇ ಕಲ್ಲು ಎತ್ತಿಹಾಕಿಕೊಂಡಿದೆ. ತನ್ನ ದೇಶದಲ್ಲಿ ಯಾವುದೇ ಉಗ್ರರು ಇಲ್ಲ. ಉಗ್ರರ ನೆಲೆಗಳು ನಾಶವಾಗಿವೆ. ಉಗ್ರರಿಗೂ ಪಾಕಿಸ್ತಾನಕ್ಕೂ ಸಂಬಂಧವೇ ಇಲ್ಲ ಎನ್ನುತ್ತಿದ್ದ ಪಾಕಿಸ್ತಾನದಲ್ಲಿ ಇದೀಗ ರಾಶಿ.. ರಾಶಿ ಉಗ್ರರ ಹೆಣಗಳು ಬಿದ್ದಿವೆ.

ಹೌದು ಪಾಕಿಸ್ತಾನವು ಇದೀಗ ವಿಶ್ವದ ಮುಂದೆ ತಲೆ ತಗ್ಗಿಸುವಂತಹ ಕೆಲಸವನ್ನು ಮಾಡಿದೆ. ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ದಲ್ಲಿ ಭಾರತೀಯರ ಮೇಲೆ ನಡೆದಿರುವ ದಾಳಿಗೆ ಪ್ರತೀಕಾರವನ್ನು ತೆಗೆದುಕೊಂಡಿದೆ. ಪಾಕ್‌ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದಲ್ಲೂ ಉಗ್ರರ 9 ಅಡಗುತಾಣಗಳ ಮೇಲೆ ಭಾರೀ ಕ್ಷಿಪಣಿ ದಾಳಿಯನ್ನು ನಡೆಸಿದೆ. ಇದರಲ್ಲಿ 70ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದು. 60ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಉಗ್ರರ ಶವ ಸಂಸ್ಕಾರ ಮಾಡುವಾಗ ಪಾಕಿಸ್ತಾನ ಸರ್ಕಾರವು ಭಾರೀ ದೊಡ್ಡ ಎಡವಟ್ಟೊಂದನ್ನು ಮಾಡಿಕೊಂಡಿದೆ.

Air Strike Pakistan Gave Full Government Honors to Terrorists Video Goes Viral

ಪಾಕ್‌ನಲ್ಲಿ ಯಾವುದೇ ಉಗ್ರರು ಇಲ್ಲ. ಉಗ್ರರ ನೆಲೆಗಳು ನಾಶವಾಗಿವೆ. ಉಗ್ರರಿಗೂ ಪಾಕಿಸ್ತಾನಕ್ಕೂ ಸಂಬಂಧವೇ ಇಲ್ಲ ಎನ್ನುತ್ತಿದ್ದ ಪಾಕಿಸ್ತಾನದಲ್ಲಿ ಇದೀಗ ರಾಶಿ.. ರಾಶಿ ಉಗ್ರರ ಹೆಣಗಳು ಬಿದ್ದಿವೆ. ಆ ಉಗ್ರರ ಮೃತದೇಶವನ್ನು ಅಂತ್ಯಸಂಸ್ಕಾರವನ್ನು ಮಾಡುವಾಗ ಭಾರೀ ದೊಡ್ಡ ತಪ್ಪನ್ನು ಪಾಕ್‌ ಮಾಡಿದ್ದು. ಪಾಕ್‌ನ ಗುಳ್ಳೆ ನರಿ ಬುದ್ಧಿ ಇದೀಗ ವಿಶ್ವದ ಮುಂದೆ ಬಟಾಬಯಲಾಗಿದೆ.

ಅದೆಲ್ಲ ಏನು ಇಲ್ಲ ಕಣ್ರಿ.. ಈ ಭಾರತದವರು ಸುಮ್ಮ ಸುಮ್ಮನೆ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಅಂತ ಬಾಯಿ ಬಡೆದುಕೊಳ್ಳುತ್ತಿದ್ದ ಪಾಕಿಸ್ತಾನವು ಇದೀಗ ತಾನೇ ಮುಂದೆ ನಿಂತು ಉಗ್ರರ ಅಂತ್ಯ ಸಂಸ್ಕಾರವನ್ನು ಮಾಡಿದೆ! ಭಾರತ ನಡೆಸಿದ ವೈಮಾನಿಕ ದಾಳಿಯಲ್ಲಿ (ಏರ್‌ ಸ್ಟ್ರೈಕ್ / ಕ್ಷಿಪಣಿ ದಾಳಿ) ಮೃತಪಟ್ಟಿರು ಉಗ್ರರು ಮತ್ತು ಉಗ್ರರ ಕುಟುಂಬದವರ ಅಂತ್ಯಕ್ರಿಯೆ ನಡೆದಿದೆ.

ಭಾರತದ ದಾಳಿಯಲ್ಲಿ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಅಲ್ಲಿನ ಸರ್ಕಾರವೇ ಮುಂದೆ ನಿಂತು ಸಕಲ ಸರ್ಕಾರಿ ಗೌರವಗಳನ್ನು ನೀಡಿ ಅಂತ್ಯ ಸಂಸ್ಕಾರ ಮಾಡಿದೆ.! ಉಗ್ರರು ಹಾಗೂ ಉಗ್ರರ ಕುಟುಂಬದವರ ಅಂತ್ಯ ಸಂಸ್ಕಾರದಲ್ಲಿ ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಗಳು ಭಾಗವಹಿಸಿರುವುದು ಭಾರೀ ಚರ್ಚೆಗೆ ಕಾರಣವಾದರೆ. ಅವರಿಗೆ ಪಾಕಿಸ್ತಾನದ ಧ್ವಜವನ್ನು ಸುತ್ತಿ ಸಕಲ ಸರ್ಕಾರಿ ಗೌರವ ಕೊಟ್ಟಿರುವುದು ಸಹ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

Air Strike Pakistan Gave Full Government Honors to Terrorists Video Goes Viral

ವಿಶ್ವಕ್ಕೆ ಮೋಸ್ಟ್ ವಾಂಟೆಡ್ ಉಗ್ರ ಎನಿಸಿಕೊಂಡಿರುವ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಕುಟುಂಬಸ್ಥರ ಶವದ ಪೆಟ್ಟಿಗೆಗಳ ಮೇಲೆ ಪಾಕಿಸ್ತಾನದ ಧ್ವಜವನ್ನು ಸುತ್ತಿರುವ ಪೋಟೋಗಳು ವೈರಲ್ ಆಗಿವೆ. ಈ ಮೂಲಕ ಪಾಕ್‌ ಸರ್ಕಾರಿ ಗೌರವ ನೀಡಿದೆ. ಇದೀಗ ಈ ವಿಡಿಯೋ ಪಾಕಿಸ್ತಾನದ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು. ಪಾಕ್‌ ಬಣ್ಣ ಬಯಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+