ಕೊರೊನಾದಿಂದ ಮೃತಪಟ್ಟಿದ್ದ ಮಹಿಳೆ ವಾರಗಳ ಬಳಿಕ ಬದುಕಿ ಬಂದಿದ್ಹೇಗೆ?

ಗ್ವಾಯಾಕ್ವಿಲ್, ಏಪ್ರಿಲ್ 27: ಕೊರೊನಾವೈರಸ್‌ನಿಂದ ಮೃತಪಟ್ಟಿದ್ದ ಮಹಿಳೆಯ ಅಂತ್ಯಕ್ರಿಯೆ ನಡೆದು ವಾರಗಳ ಬಳಿಕ ಬದುಕಿಬಂದಿರುವ ಘಟನೆ ಈಕ್ವೇಡರ್‌ನಲ್ಲಿ ನಡೆದಿದೆ.

74 ವರ್ಷದ ಆಲ್ಬಾ ಮರೂರಿ ಅವರಿಗೆ ಕೊರೊನಾ ವೈರಸ್ ದೃಢಪಟ್ಟಿತ್ತು. ಆವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಇಲಾಖೆಯು ಆಕೆ ಮೃತಪಟ್ಟಿರುವುದಾಗಿ ಕುಟುಂಬಕ್ಕೆ ಮಾಹಿತಿ ನೀಡಿದ್ದರು. ಅವರ ಅಂತ್ಯಕ್ರಿಯೆಯನ್ನೂ ನೆರವೇರಿಸಲಾಗಿತ್ತು.

ಆದರೆ ಅಂತ್ಯಕ್ರಿಯೆ ನಡೆದು ವಾರಗಳ ಬಳಿಕ ಆಕೆ ಮನೆಗೆ ಬಂದಿದ್ದು, ಆಕೆ ಸಹೋದರಿಯು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ತಾವು ಅಂತ್ಯಕ್ರಿಯೆ ನೆರವೇರಿಸಿದ್ದು ತನ್ನ ಸಹೋದರಿಯದ್ದಲ್ಲ ಎಂದು ತಿಳಿದು ಸಂತಸಗೊಂಡಿದ್ದಾರೆ.

After Cremating Wrong Body Ecuador Woman Learns Sister Is Alive

ಮನೆಯ ಮುಂದೆ ಆಂಬ್ಯುಲೆನ್ಸ್ ಬಂದು ನಿಂತಿತ್ತು, ಅದರಿಂದಿಳಿದ ವೈದ್ಯರು ನಿಮ್ಮ ಸಹೋದರಿ ಬದುಕಿದ್ದಾಳೆ ಎಂದು ಮಾಹಿತಿ ನೀಡಿದ್ದರು, ಆಗ ಶಾಕ್ ಜೊತೆಗೆ ಸಂತೋಷವೂ ಆಗಿತ್ತು ಎಂದು ಆರಾ ಮರೂರಿ ಹೇಳಿದ್ದಾರೆ.

ಆಲ್ಬಾ ಅವರಿಗೆ ಉಸಿರಾಟದ ತೊಂದರೆ ಇದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಅವರಿಗೆ ಕೊರೊನಾ ವೈರಸ್ ತಗುಲಿರಲಿಲ್ಲ. ಕರ್ಫ್ಯೂ ಇದ್ದ ಕಾರಣ ಆಸ್ಪತ್ರೆಗೆ ತೆರಳಿ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ.

ಈಗ ನಾವು ತೆಗೆದುಕೊಂಡು ಬಂದಿರುವ ಅಸ್ತಿಯನ್ನು ಏನು ಮಾಡುವುದ ಎಂದು ತಿಳಿಯುತ್ತಿಲ್ಲ ಎಂದು ಮಾಧ್ಯಮದವರ ಮುಂದೆ ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+