'ಐಡಿಯಾ' ಅಲ್ಲ 'ವ್ಯಂಗ್ಯ': ಟೀಕೆಗೊಳಗಾದ ಬಳಿಕ ಎಚ್ಚೆತ್ತ ಡೊನಾಲ್ಡ್ ಟ್ರಂಪ್!

ವಾಷಿಂಗ್ಟನ್, ಏಪ್ರಿಲ್ 25: ''ಕೊರೊನಾ ವೈರಸ್ ಅನ್ನು ಕೊಲ್ಲಲು ಮನುಷ್ಯನ ದೇಹದೊಳಗೆ light, heat ಅಥವಾ disinfectant inject ಮಾಡಬಹುದಾ?'' ಎಂದು ಇತ್ತೀಚೆಗಷ್ಟೇ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಟ್ ಹೌಸ್ ಬ್ರೀಫಿಂಗ್ ವೇಳೆ ಟಾಪ್ ಎಕ್ಸ್ ಪರ್ಟ್ ಗಳನ್ನು ಪ್ರಶ್ನಿಸಿದ್ದರು. ಸಾಲದಕ್ಕೆ ''ಈ ಬಗ್ಗೆ ಗಮನ ಹರಿಸಿ'' ಎಂದೂ ಸೂಚಿಸಿದ್ದರು.

ಡೊನಾಲ್ಡ್ ಟ್ರಂಪ್ ಆಡಿದ ಈ ಮಾತು.. ಕೊಟ್ಟ ಐಡಿಯಾ ವ್ಯಾಪಕ ಟೀಕೆಗೆ ಗುರಿಯಾಯ್ತು. ಸೋಷಿಯಲ್ ಮೀಡಿಯಾದಲ್ಲಂತೂ ಸಿಕ್ಕಾಪಟ್ಟೆ ಟ್ರೋಲ್ ಆಯ್ತು. ''ಯಾವುದೇ ಕಾರಣಕ್ಕೂ ಸೋಂಕು ನಿವಾರಕ ದ್ರವಗಳನ್ನು ಸೇವಿಸಬೇಡಿ'' ಎಂದು ಡೆಟಾಲ್ ಮತ್ತು ಲೈಸೋಲ್ ಕಂಪನಿ ವಾರ್ನಿಂಗ್ ನೀಡಿತು.

ಇಷ್ಟೆಲ್ಲಾ ಆದ ಬಳಿಕ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚೆತ್ತುಕೊಂಡಿದ್ದಾರೆ. ತಮ್ಮ ಕಾಮೆಂಟ್ ಗಳು 'ವ್ಯಂಗ್ಯ'ದಿಂದ ಕೂಡಿದ್ದವು ಎಂದು ಹೇಳಿ ವಿವಾದಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

'ವ್ಯಂಗ್ಯ' ಎಂದ ಟ್ರಂಪ್

'ವ್ಯಂಗ್ಯ' ಎಂದ ಟ್ರಂಪ್

''ಏನಾಗಬಹುದು ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ನಾನು ವ್ಯಂಗ್ಯವಾಗಿ ಆ ಪ್ರಶ್ನೆಯನ್ನು ಕೇಳಿದ್ದೆ. Disinfectant ಬಗ್ಗೆ ಪತ್ರಕರ್ತರ ಮುಂದೆ ನಾನು ವ್ಯಂಗ್ಯವಾಗಿ ಪ್ರಶ್ನಿಸಿದ್ದೆ'' ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆ ಕೊಟ್ಟಿದ್ದಾರೆ.

ನ್ಯೂಸ್ ಬ್ರೀಫಿಂಗ್ ವೇಳೆ ಆಗಿದ್ದೇನು.?

ನ್ಯೂಸ್ ಬ್ರೀಫಿಂಗ್ ವೇಳೆ ಆಗಿದ್ದೇನು.?

ಡಿಪಾರ್ಟ್ಮೆಂಟ್ ಆಫ್ ಹೋಮ್ ಲ್ಯಾಂಡ್ ಸೆಕ್ಯೂರಿಟಿಯ ವಿಜ್ಞಾನ ಮತ್ತು ತಂತ್ರಜ್ಞಾನ ಸಲಹೆಗಾರ ವಿಲಿಯಂ ಬ್ರಿಯಾನ್, ''ಸೂರ್ಯನ ಬೆಳಕು, ಬಿಸಿಲು ಮತ್ತು ತೇವಾಂಶ ಇರುವ ಪ್ರದೇಶದಲ್ಲಿ ಕೊರೊನಾ ವೈರಸ್ ನಶಿಸಿ ಹೋಗುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ'' ಎಂದರು. ಜೊತೆಗೆ ''ವೈರಸ್ ಅನ್ನು Isopropyl Alcohal 30 ಸೆಕೆಂಡ್ ಗಳಲ್ಲಿ ಕೊಲ್ಲುತ್ತದೆ'' ಅಂತ ನ್ಯೂಸ್ ಬ್ರೀಫಿಂಗ್ ವೇಳೆ ಹೇಳಿದ್ದರು.

ಡೊನಾಲ್ಡ್ ಟ್ರಂಪ್ ಹೇಳಿದ್ದೇನು.?

ಡೊನಾಲ್ಡ್ ಟ್ರಂಪ್ ಹೇಳಿದ್ದೇನು.?

ವಿಲಿಯಂ ಬ್ರಿಯಾನ್ ಆಡಿದ ಮಾತುಗಳನ್ನು ಕೇಳಿದ ಕೂಡಲೆ, ''ಕೊರೊನಾ ವೈರಸ್ ನ ಕೊಲ್ಲಲು ಮನುಷ್ಯನ ದೇಹದೊಳಗೆ light, heat ಅಥವಾ disinfectant inject ಮಾಡಬಹುದಾ.? ಸೂರ್ಯನ ಬೆಳಕು ಮತ್ತು ಶಾಖದಿಂದ ರೋಗಿಗಳನ್ನು ಗುಣಮುಖಪಡಿಸುವ ಬಗ್ಗೆ ವೈದ್ಯರ ಬಳಿ ನಾನು ಮಾತನಾಡುತ್ತೇನೆ. ಅದು ವರ್ಕ್ ಆಗಬಹುದು, ಆಗದೆಯೂ ಇರಬಹುದು. ನಾನು ವೈದ್ಯ ಅಲ್ಲ'' ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು. ಡೊನಾಲ್ಡ್ ಟ್ರಂಪ್ ಕೊಟ್ಟ ಈ ಐಡಿಯಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.

ಯಾವುದೇ ಕಾರಣಕ್ಕೂ ಸೇವಿಸಬೇಡಿ

ಯಾವುದೇ ಕಾರಣಕ್ಕೂ ಸೇವಿಸಬೇಡಿ

''Disinfectant ಅಥವಾ ಸೋಂಕು ನಿವಾರಕ ದ್ರವಗಳನ್ನು ದೇಹದೊಳಗೆ ಯಾವುದೇ ಕಾರಣಕ್ಕೂ, ಯಾವುದೇ ಸನ್ನಿವೇಶದಲ್ಲೂ ಇಂಜೆಕ್ಟ್ ಮಾಡಬಾರದು, ಸೇವಿಸಲೂಬಾರದು'' ಎಂದು ಡೆಟಾಲ್ ಮತ್ತು ಲೈಸಾಲ್ ಮೇಕರ್ ರೆಕಿಟ್ ಬೆನ್ ಕಿಸರ್ ಸ್ಪಷ್ಟವಾಗಿ ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+