ನರೇಂದ್ರ ಮೋದಿ ತ್ರಿವರ್ಣ ಧ್ವಜದ ಮೇಲೆ ಸಹಿ ವಿವಾದ ಅಂತ್ಯ ?
ನ್ಯೂಯಾರ್ಕ್, ಸೆ. 25: ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರ ಧ್ವಜದ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಟ್ವಿಟ್ಟರ್ ನಲ್ಲಿ ಹಬ್ಬಿ ಟ್ರೆಂಡಿಂಗ್ ಶುರುವಾಗುತ್ತಿದ್ದಂತೆ ವಿವಾದಕ್ಕೆ ವಿದೇಶಾಂಗ ಇಲಾಖೆ ಅಂತ್ಯ ಹಾಡಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕೈ ಸೇರಬೇಕಿದ್ದ ತ್ರಿವರ್ಣ ಧ್ವಜವನ್ನು ಹಿಂಪಡೆಯಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಪ್ರಧಾನಿ ಮೋದಿ ಅವರು ತ್ರಿವರ್ಣ ಧ್ವಜದ ಮೇಲೆ ಗುರುವಾರ ತಮ್ಮ ಸಹಿ ಮಾಡಿದ್ದರು. ಖ್ಯಾತ ಬಾಣಸಿಗ ವಿಕಾಸ್ ಖನ್ನಾ ಅವರಿಗೆ ಈ ತ್ರಿವರ್ಣ ಧ್ವಜ ನೀಡಲಾಗಿತ್ತು. ಖನ್ನಾ ಅವರು ಒಬಾಮಾ ಅವರನ್ನು ಭೇಟಿಯಾಗಿ ಧ್ವಜವನ್ನು ನೀಡಬೇಕಾಗಿತ್ತು. ಅದರೆ, ತ್ರಿವರ್ಣ ಧ್ವಜದ ಮೇಲೆ ಸಹಿ ಹಾಕಿರುವುದು ರಾಷ್ಟ್ರ ಧ್ವಜದ ಸಂಹಿತೆ ಉಲ್ಲಂಘನೆಯಾಗಿದೆ ಎಂಬ ಕೂಗೆದ್ದಿತು.
ಗೌರವದ ಸಂಕೇತವಾಗಿ ಒಂದು ರಾಷ್ಟ್ರದ ಧ್ವಜವನ್ನು ಮತ್ತೊಂದು ರಾಷ್ಟ್ರದ ಪ್ರಮುಖರಿಗೆ ನೀಡುವುದು ರೂಢಿಯಲ್ಲಿದೆ. ಆದರೆ, ರಾಷ್ಟ್ರಧ್ವಜದ ಮೇಲೆ ಸಹಿ ಮಾಡುವುದು ಧ್ವಜಕ್ಕೆ ಹಾಗೂ ದೇಶಕ್ಕೆ ಅಪಮಾನಕರ.ಧ್ವಜ ಸಂಹಿತೆ 2002 ಪಾರ್ಟ್ II, ಸೆಕ್ಷನ್ 3 ಪ್ರಕಾರ ಕೇಸರಿ, ಬಿಳಿ, ಹಸಿರು ವರ್ಣಗಳು ನಡುವೆ ಅಶೋಕ ಚಕ್ರ ಹೊರತು ಪಡಿಸಿ ಬೇರೆ ಯಾವುದೇ ಬರಹ ಇರಬಾರದು.
ಅಮೆರಿಕ ಪ್ರವಾಸದಲ್ಲಿರುವ ಮೋದಿ ಅವರು ಸೋಮವಾರದಂದು ಒಬಾಮಾ ಅವರನ್ನು ಭೇಟಿಯಾಗಲಿದ್ದಾರೆ. ಈ ಹಿಂದೆ ವಿಶ್ವಯೋಗ ದಿನದಂದು ಪ್ರಧಾನಿ ಮೋದಿ ಅವರು ತ್ರಿವರ್ಣದ ಶಾಲಿನಿಂದ ಬೆವರು ಒರೆಸಿದ್ದು ದೊಡ್ಡ ಸುದ್ದಿಯಾಗಿತ್ತು. ಈಗಲೂ ಟ್ವಿಟ್ಟರ್ ನಲ್ಲಿ ಮೋದಿ ಆವರ ಪರ-ವಿರೋಧ ಹೇಳಿಕೆಗಳು ರಾಶಿಗಟ್ಟಲೇ ಬಂದಿವೆ.

ವಿಶ್ವಯೋಗ ದಿನದಂದು ಪ್ರಧಾನಿ ಮೋದಿ
ವಿಶ್ವಯೋಗ ದಿನದಂದು ಪ್ರಧಾನಿ ಮೋದಿ ಅವರು ತ್ರಿವರ್ಣ ಶಾಲಿನಿಂದ ಮುಖ ಒರೆಸಿಕೊಂಡಿದ್ದರು ಎಂದು ಪಾಂಡಿಚೇರಿಯ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ನೀಡಿದ್ದರು. ಅದರೆ, ದೂರಿನಲ್ಲಿ ಯಾವುದೇ ಹುರುಳಿಲ್ಲದ್ದರಿಂದ ಪ್ರಕರಣ ಬಿದ್ದು ಹೋಗಿತ್ತು.
|
ಮೋದಿ ಅವರಿಂದ ಪ್ರಮಾದಕ್ಕೆ ಆರೆಸ್ಸೆಸ್ ಪ್ರತಿಕ್ರಿಯೆ
ಮೋದಿ ಅವರಿಂದ ಪ್ರಮಾದಕ್ಕೆ ಆರೆಸ್ಸೆಸ್ ಪ್ರತಿಕ್ರಿಯೆ ಹೀಗಿರುತ್ತೆ.
|
ಮಾಧ್ಯಮಗಳಲ್ಲಿ ಸುದ್ದಿಯಾಗದ ವಿಷಯ
ಮಾಧ್ಯಮಗಳಲ್ಲಿ ಸುದ್ದಿಯಾಗದ ವಿಷಯವನ್ನು ಸಾಮಾಜಿಕ ಜಾಲ ತಾಣಗಳು ಎಚ್ಚರಿಸುತ್ತಿವೆ.
|
ಮೋದಿ ಅವರ ಸಹಿ ಸಮೇತ ಚಿತ್ರಗಳು
ಮೋದಿ ಅವರ ಸಹಿ ಸಮೇತ ಚಿತ್ರಗಳನ್ನು ಟ್ವೀಟ್ ಮಾಡಲಾಗುತ್ತಿದೆ.
|
ಧ್ವಜ ನೀತಿ ಸಂಹಿತೆ ಉಲ್ಲಂಘನೆಗೆ ಏನು ಶಿಕ್ಷೆ
ರಾಷ್ಟ್ರಧ್ವಜ ಸಂಹಿತೆ ಉಲ್ಲಂಘನೆಗೆ ಏನು ಶಿಕ್ಷೆ ಎಂಬುದರ ಬಗ್ಗೆ ಸಾರ್ವಜನಿಕರಿಂದ ಮಾಹಿತಿ.












Click it and Unblock the Notifications