70 ಆನೆಗಳ ಹತ್ಯೆಗೆ ಲೈಸೆನ್ಸ್ ಹರಾಜು ಹಾಕಿದ ಸರ್ಕಾರ

ಗ್ಯಾಬೋರೊನ್, ಫೆಬ್ರವರಿ 12: ಆನೆಗಳನ್ನು ಹತ್ಯೆ ಮಾಡಲು ಆಫ್ರಿಕಾದ ಬೋಟ್ಸ್ವಾನಾ ದೇಶ ಕಾನೂನುಬದ್ಧ ಅವಕಾಶ ನೀಡುವ ಕಳವಳಕಾರಿ ಕ್ರಮ ತೆಗೆದುಕೊಂಡಿದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ದೇಶವಾದ ಬೋಟ್ಸ್ವಾನಾದಲ್ಲಿ ಆನೆ-ಮಾನವ ಸಂಘರ್ಷ ತಡೆಯಲು ಅವುಗಳನ್ನು ಕೊಲ್ಲಲು ಅನುಮತಿ ನೀಡಲಾಗಿದೆ.

ಆನೆಗಳ ಹತ್ಯೆಯನ್ನು ಕಾನೂನುಬದ್ಧಗೊಳಿಸಿದ್ದ ಬೋಟ್ಸ್ವಾನಾ, ಅದರ ಹತ್ಯೆಯ ಮೇಲೆ ಹೇರಿದ್ದ ನಿಷೇಧವನ್ನು ತೆರವುಗೊಳಿಸಿದ್ದು, ಆನೆಗಳ ಹತ್ಯೆಗೆ ಪರವಾನಗಿ ನೀಡಲು ಹರಾಜು ನಡೆಸಲು ಮುಂದಾಗಿದೆ.

ಒಂದೂವರೆ ವರ್ಷದ ಬಳಿಕ ಮಾನವ-ವನ್ಯಜೀವಿ ಸಂಘರ್ಷವನ್ನು ಅಂತ್ಯಗೊಳಿಸಲು ಸುಮಾರು 70 ಆನೆಗಳ ಹತ್ಯೆಗೆ ಅಲ್ಲಿನ ಸರ್ಕಾರ ಪರವಾನಗಿ ನೀಡುತ್ತಿದೆ. ಆನೆಗಳ ಹತ್ಯೆಯ ಮೇಲೆ ಐದು ವರ್ಷಗಳ ನಿಷೇಧ ಹೇರಲಾಗಿತ್ತು. ಅದನ್ನು ಅಧ್ಯಕ್ಷ ಮೊಕ್‌ಗ್ವೀಟ್ಸಿ ಮಸಿಸಿ ಸರ್ಕಾರ ಕಳೆದ ವರ್ಷ ತೆರವುಗೊಳಿಸಿತ್ತು.

ಹೆಚ್ಚಿದ ಆನೆಗಳ ಸಂಖ್ಯೆ

ಹೆಚ್ಚಿದ ಆನೆಗಳ ಸಂಖ್ಯೆ

ಆಫ್ರಿಕಾದಲ್ಲಿ ಒಟ್ಟಾರೆ ಆನೆಗಳ ಸಂಖ್ಯೆಯಲ್ಲಿ ತೀವ್ರ ಇಳಿಕೆಯಾಗಿದೆ. ಆದರೆ ಜಿಂಬಾಬ್ವೆ ಮತ್ತು ಬೋಟ್ಸ್ವಾನಾಗಳಲ್ಲಿ ಆನೆಗಳ ಸಂಖ್ಯೆ ಮಿತಿ ಮೀರಿದೆ. ಬೋಟ್ಸ್ವಾನಾದಲ್ಲಿ 1,30,000ಕ್ಕೂ ಅಧಿಕ ಆನೆಗಳಿವೆ. 1990ರ ವೇಳೆ ಇಲ್ಲಿ 80,000 ಆನೆಗಳ ಸಂಖ್ಯೆ ಇತ್ತು. ಬೇಟೆ ನಿಯಂತ್ರಿತ ಪ್ರದೇಶ'ಗಳಲ್ಲಿ ಆನೆಗಳನ್ನು ಕೊಲ್ಲಲು ಏಳು ಪರವಾನಗಿಗಳನ್ನು ನೀಡಿದ್ದು, ಒಂದೊಂದು ಪರವಾನಗಿ ತಲಾ ಹತ್ತು ಆನೆಗಳ ಹತ್ಯೆಗೆ ಅವಕಾಶ ನೀಡುತ್ತದೆ.

ಆನೆಗಳಿಂದ ರೈತರಿಗೆ ಸಂಕಷ್ಟ

ಪ್ರಾಣಿ ಮತ್ತು ಮನುಷ್ಯರ ನಡುವಿನ ಸಂಘರ್ಷವನ್ನು ಕಡಿಮೆ ಮಾಡಲು ಆನೆಗಳ ಹತ್ಯೆ ಅತ್ಯಗತ್ಯವಾಗಿದೆ. ಆನೆಗಳಿಂದಾಗಿ ರೈತರು ತಮ್ಮ ಬೆಳೆಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಆನೆ ಫೀಡಿಂಗ್ ಝೋನ್‌ಗಳಿಂದಾಚೆ ಓಡಾಡುವ ಆನೆಗಳು ಮೂಲಸೌಕರ್ಯಗಳಿಗೆ ಹಾನಿಮಾಡಿವೆ. ಅನೇಕ ಜನರು ಆನೆ ದಾಳಿಗೆ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

272 ಆನೆಗಳ ಹತ್ಯೆಗೆ ಸೂಚನೆ

272 ಆನೆಗಳ ಹತ್ಯೆಗೆ ಸೂಚನೆ

ರಾಜಧಾನಿ ಗ್ಯಾಬೋರೊನ್‌ನಲ್ಲಿ ಶುಕ್ರವಾರ ಮಧ್ಯಾಹ್ನ ಏಳು ಪರವಾನಗಿಗಳನ್ನು ಹರಾಜು ಹಾಕಲಾಗಿದೆ. ಬೋಟ್ಸ್ವಾನಾದಲ್ಲಿ ನೋಂದಣಿ ಮಾಡಿಕೊಂಡಿರುವ ಕಂಪೆನಿಗಳಿಗೆ ಮಾತ್ರ ಪರವಾನಗಿ ನೀಡಲಾಗಿದೆ. ಬಿಡ್ಡರ್‌ಗಳು ರೀಫಂಡ್ ಆಗಬಲ್ಲ 2,00,000 ಪುಲಾ (18,000 ಡಾಲರ್) ಹಣ ಡೆಪಾಸಿಟ್ ಇಡಬೇಕು. 2020ರಲ್ಲಿ 272 ಆನೆಗಳನ್ನು ಕೊಲ್ಲಲು ಸರ್ಕಾರ ನಿರ್ದೇಶಿಸಿದೆ.

ಕೊಲ್ಲುವುದೇ ಮಾರ್ಗ ಎಂದ ಸ್ಥಳೀಯರು

ಬೋಟ್ಸ್ವಾನಾದ ಹಳ್ಳಿಗಳಲ್ಲಿ ಆನೆಗಳ ಕಾಟದಿಂದ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹಳ್ಳಿಗಳಿಗೆ ಆನೆಗಳು ನುಗ್ಗದಂತೆ ತಡೆಯಲು ಅವುಗಳನ್ನು ಕೊಲ್ಲುವುದು ಸೂಕ್ತ ಪರಿಹಾರ ಎಂದು ಭಾವಿಸಿದ್ದಾರೆ. ಅದು ಅವರಿಗೆ ವಾಣಿಜ್ಯಾತ್ಮಕ ಲಾಭವನ್ನೂ ನೀಡುತ್ತದೆ. ಆದರೆ ಆನೆಗಳ ಹತ್ಯೆ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ನೀಡುತ್ತಿದೆ.

ಪ್ರವಾಸೋದ್ಯಮದ ಆಕರ್ಷಣೆ

ಪ್ರವಾಸೋದ್ಯಮದ ಆಕರ್ಷಣೆ

ಆಫ್ರಿಕಾದ ಬೋಟ್ಸ್ವಾನಾಕ್ಕೆ ಪ್ರವಾಸೋದ್ಯಮ ಪ್ರಮುಖ ಆದಾಯದ ಮೂಲ. ಆನೆಗಳ ಛಾಯಾಚಿತ್ರ ತೆಗೆಯಲು 2.5 ಮಿಲಿಯನ್ ವಿದೇಶಿ ಪ್ರವಾಸಿಗರು ಬೋಟ್ಸ್ವಾನಾಕ್ಕೆ ಭೇಟಿ ನೀಡಿದ್ದಾರೆ. ದೇಶದ ಶೇ 11.5 ಪ್ರವಾಸೋದ್ಯಮ ಜಿಡಿಪಿಗೆ ಭಾರಿ ಕೊಡುಗೆ ನೀಡಿದೆ. 76,000 ಉದ್ಯೋಗಗಳನ್ನು ಸೃಷ್ಟಿಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+