ಅಫ್ಘನ್ ರಾಯಭಾರಿಯ ಅಚ್ಚರಿಯ ನಡೆ: ಅಧ್ಯಕ್ಷರ ಭೇಟಿ ದಿನ ರಾಜೀನಾಮೆ!

ನವದೆಹಲಿ, ಸೆಪ್ಟೆಂಬರ್ 20: ಭಾರತಕ್ಕೆ ಭೇಟಿ ನೀಡಿರುವ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘಾನಿ ಅವರಿಗೆ ಅಚ್ಚರಿಯ ಸ್ವಾಗತ ಸಿಕ್ಕಂತಾಗಿದೆ. ಸೆಪ್ಟೆಂಬರ್ 19 ರಂದು ಭಾರತಕ್ಕೆ ಘಾನಿ ಆಗಮಿಸುತ್ತಿದ್ದಂತೆಯೇ ಅಫ್ಘಾನಿಸ್ತಾನದ ಭಾರತೀಯ ರಾಯಭಾರಿ ಡಾ.ಶೈದಾ ಮೊಹಮ್ಮದ್ ಅಬ್ದಾಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಆದರೆ ತಮ್ಮ ರಾಜೀನಾಮೆಗೆ ನಿಖರ ಕಾರಣಗಳನ್ನು ಅವರು ಎಲ್ಲಿಯೂ ತಿಳಿಸಿಲ್ಲ.

"ಭಾರತ ನನಗೆ ಕೇವಲ ಕೌಟುಂಬಿಕ ವಾತಾವರಣವನ್ನು ನೀಡಿಲ್ಲ, ನನಗೆ ಜ್ಞಾನದ ಗಣಿಯನ್ನೇ ನೀಡಿದೆ ಜೊತೆಗೆ ನನ್ನ ಎರಡು ದಶಕಗಳ ರಾಜಕೀಯ ಬದುಕಿಗೆ ಸಾಕಷ್ಟು ಅನುಭವಗಳನ್ನೂ ನೀಡಿದೆ" ಎಂದು ಟ್ವೀಟ್ ಮಾಡಿರುವ ಅಬ್ದಾಲಿ ತಮ್ಮ ರಾಜೀನಾಮೆ ಸಂಗತಿಯನ್ನೂ ತಿಳಿಸಿದ್ದಾರೆ.

Afghanistan ambassador to India resigns the day Afghan President Ghani met Modi

"ಭಾರತವು ನನಗೆ ನೀಡಿದ ಅನನ್ಯ ಆತಿಥ್ಯ ಮತ್ತು ಗೆಳೆತನಕ್ಕೆ ನನ್ನ ಹೃದಯಪೂರ್ವಕ ನಮನಗಳು. ನನ್ನ ರಾಜಕೀಯ ಬದುಕಿನ ಅವೀಸ್ಮರಣಿಯ ಕಾಲ ಇದು. ಇಷ್ಟು ದಿನ ಭಾರತದಲ್ಲಿದ್ದುಕೊಂಡು ನನ್ನ ದೇಶದ ಸೇವೆ ಮಾಡಲು ಅವಕಾಶ ನೀಡಿದ ಭಾರತೀಯ ಸರ್ಕಾರಕ್ಕೂ ನನ್ನ ನಮನ. ಈಗ ನನ್ನ ದೇಶದಲ್ಲೇ ಇದ್ದುಕೊಂಡು ದೇಶದ ಸೇವೆಗೆ ಮುಂದಾಗಲು ಬಯಸುತ್ತೇನೆ. ಎಲ್ಲರಿಗೂ ಧನ್ಯವಾದಗಳು" ಎಂದು ಮನಃಪೂರ್ವಕವಾಗಿ ಅವರು ಟ್ವೀಟ್ ಮಾಡಿದ್ದಾರೆ.

"ನನ್ನ ಅಧಿಕಾರದ ಅವಧಿಯಲ್ಲಿ ಅಫ್ಘಾನಿಸ್ತಾನ ಮತ್ತು ಭಾರತದ ಸಂಬಂಧ ವೃದ್ಧಿಸಿದ್ದಕ್ಕೆ ನಾನು ಸಾಕ್ಷಿಯಾಗಿದ್ದು ನನ್ನ ಭಾಗ್ಯ ಎಂದು ಭಾವಿಸಿದ್ದೇನೆ. ನನ್ನ ಸ್ಥಾನಕ್ಕೆ ಬರುವ ಉತ್ತರಾಧಿಕಾರಿಗೆ ನಾನು ಶುಭಾಶಯ ಕೋರುತ್ತೇನೆ. ಭಾರತ ಮತ್ತು ಅಫ್ಘಾನಿಸ್ತಾನದ ಸ್ನೇಹ ಸುದೀರ್ಘಕಾಲ ಬಾಳಲಿ ಎಂದು ಹಾರೈಸುತ್ತೇನೆ" ಎಂದು ಅವರು ಶುಭಹಾರೈಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+