ಇರಾನ್ ಯುದ್ಧ: ಅಬುಧಾಬಿಯಲ್ಲಿ ಸಿಲುಕಿದ ಪ್ರವಾಸಿಗರ ವಾಸ್ತವ್ಯ ವ್ಯವಸ್ಥೆಗೆ ಹೊಟೆಲ್‌ಗಳಿಗೆ ಸರ್ಕಾರ ಸೂಚನೆ, ವೆಚ್ಚ ಭರಿಸುವ ಭರವಸೆ
ಇಸ್ರೇಲ್ ಇರಾನ್ ಮೇಲೆ ಕ್ಷಿಪಣಿ ದಾಳಿ ಬೆನ್ನಲ್ಲೇ ಹಲವು ದೇಶಗಳಲ್ಲಿ ವಿಮಾನ ಸೇವೆ ರದ್ದುಪಡಿಸಲಾಗಿದೆ. ಹಾಗೆಯೇ ಪ್ರಯಾಣ ನಿರ್ಬಂಧಗಳಿಂದಾಗಿ ಅಬುಧಾಬಿಯಲ್ಲಿ ಸಿಲುಕಿರುವ ಪ್ರವಾಸಿಗರಿಗೆ ಅಲ್ಲಿನ ಸರ್ಕಾರವು ನೆರವು ಘೋಷಿಸಿದೆ. ಚೆಕ್-ಔಟ್ ಅವಧಿ ಮುಗಿದಿದ್ದರೂ ಪ್ರಯಾಣಿಸಲು ಸಾಧ್ಯವಾಗದ ಅತಿಥಿಗಳ ವಾಸ್ತವ್ಯವನ್ನು ವಿಸ್ತರಿಸುವಂತೆ ಅಬುಧಾಬಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯು ಹೋಟೆಲ್‌ಗಳಿಗೆ ಸೂಚನೆ ನೀಡಿದೆ.
ಪ್ರಯಾಣ ನಿರ್ಬಂಧಗಳಿಂದಾಗಿ ತಮ್ಮ ದೇಶಗಳಿಗೆ ಮರಳಲು ಸಾಧ್ಯವಾಗದ ಅತಿಥಿಗಳು ಹೋಟೆಲ್‌ಗಳಿಂದ ನಿರ್ಗಮಿಸುವವರೆಗೆ ಅವರ ವಾಸ್ತವ್ಯವನ್ನು ವಿಸ್ತರಿಸಲು ಸೂಚಿಸಲಾಗಿದೆ. ಈ ರೀತಿ ವಿಸ್ತರಿಸಲಾದ ವಾಸ್ತವ್ಯದ ಸಂಪೂರ್ಣ ವೆಚ್ಚವನ್ನು ಅಬುಧಾಬಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯೇ ಭರಿಸಲಿದೆ. ಹೋಟೆಲ್ ಮ್ಯಾನೇಜರ್‌ಗಳು ಈ ಸಂಬಂಧಿತ ಬಿಲ್‌ಗಳನ್ನು [email protected] ಇಮೇಲ್‌ಗೆ ಕಳುಹಿಸಲು ತಿಳಿಸಿದೆ.

ಈ ಕ್ರಮವು ಪ್ರಯಾಣ ನಿರ್ಬಂಧಗಳಿಂದಾಗಿ ತಮ್ಮ ದೇಶದಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಮತ್ತು ಹೋಟೆಲ್ ಸಂಸ್ಥೆಗಳಿಗೆ ದೊಡ್ಡ ಮಟ್ಟದ ಸಮಾಧಾನ ತಂದಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ 026576283 ಸಂಖ್ಯೆಗೆ ಸಂಪರ್ಕಿಸಬಹುದು ಅಂತಲೂ ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆಯಿಂದಾಗಿ ಹಲವು ದೇಶಗಳಲ್ಲಿ ವಿಮಾನ ಸೇವೆ ರದ್ದಾಗಿದ್ದು, ಪ್ರಯಾಣಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದೀಗ ಅಬುಧಾಬಿಯಲ್ಲಿ ಹೋಟೆಲ್‌ನಿಂದ ನಿರ್ಗಮಿಸಲು ಸಾಧ್ಯವಾಗದ ಪ್ರತಿಯೊಬ್ಬ ಪ್ರವಾಸಿಗರಿಗೂ ವಾಸ್ತವ್ಯವನ್ನು ವಿಸ್ತರಿಸಲು ಹೋಟೆಲ್‌ಗಳಿಗೆ ಸೂಚಿಸಲಾಗಿದೆ.
ಇರಾನ್ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಸಾವು: ವರದಿ
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳ ಬಗ್ಗೆ ಗಂಭೀರ ವರದಿಗಳು ಹೊರಬಿದ್ದಿವೆ. ಕೆಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಹಾಗೂ ಸೈನಿಕ ತೀವ್ರತೆಯ ನಡುವೆ, ಇರಾನ್ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮನೇಯಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ.
ಅಮೆರಿಕ ಹಾಗೂ ಇರಾನ್ ನಡುವಿನ ಉದ್ವಿಗ್ನತೆ ಹೊಸದೇನಲ್ಲ. ಅಣು ಬಾಂಬ್ ವಿಚಾರವಾಗಿ ಹಲವು ವರ್ಷಗಳಿಂದ ಮಾತಿನ ಸಮರ, ನಿರ್ಬಂಧಗಳು ಹಾಗೂ ಪರಸ್ಪರ ಎಚ್ಚರಿಕೆಗಳು ನಡೆಯುತ್ತಲೇ ಬಂದಿವೆ. ಇಸ್ರೇಲ್ ಕೂಡ ಇರಾನ್‌ನ ಅಣು ಬಾಂಬ್ ಬಗ್ಗೆ ಕಠಿಣ ನಿಲುವು ಹೊಂದಿದ್ದು, ಅಗತ್ಯವಿದ್ದರೆ ಸೈನಿಕ ಕ್ರಮಕ್ಕೂ ಹಿಂದೇಟು ಹಾಕುವುದಿಲ್ಲವೆಂದು ಹಲವು ಬಾರಿ ಸ್ಪಷ್ಟಪಡಿಸಿತ್ತು. ಈ ಹಿನ್ನೆಲೆ ಇತ್ತೀಚಿನ ದಾಳಿಗಳು ಪ್ರಾದೇಶಿಕ ಭದ್ರತಾ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿವೆ.
ಇದೀಗ ಬಂದ ಮಾಹಿತಿ ಪ್ರಕಾರ, ಟೆಹರಾನ್ ನಗರದ ಹೊರವಲಯದ ನರ್ಮಕ್ ಪ್ರದೇಶದಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಇರಾನ್‌ನ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅವರು 2005ರಿಂದ 2013ರವರೆಗೆ ಇರಾನ್ ಅಧ್ಯಕ್ಷರಾಗಿದ್ದು, ತಮ್ಮ ಕಠಿಣ ಹೇಳಿಕೆಗಳು ಮತ್ತು ಅಣು ಬಾಂಬ್ ಬೆಂಬಲದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದ್ದರು. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.












Click it and Unblock the Notifications