ಜಾರ್ಜ್ ಫ್ಲಾಯ್ಡ್ ಹತ್ಯೆ: ಟ್ರಂಪ್ ಬಾಯಿಂದ ಬಂದಿದ್ದು ಅದೆಂಥ ಮಾತು.?

ವಾಷಿಂಗ್ಟನ್, ಜೂನ್ 6: ಶ್ವೇತ ವರ್ಣೀಯ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಕಾಲಡಿಗೆ ಸಿಲುಕಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ನರಳಿ ನರಳಿ ಪ್ರಾಣ ಬಿಟ್ಟಿದ್ದರು. 'ವೈಟ್' ಪೊಲೀಸ್ ಡೆರೆಕ್ ಚೌವಿನ್ ಅಮಾನವೀಯ ವರ್ತನೆಯಿಂದಾಗಿ 'ಬ್ಲಾಕ್' ಮ್ಯಾನ್ ಜಾರ್ಜ್ ಫ್ಲಾಯ್ಡ್ ಪ್ರಾಣ ಕಳೆದುಕೊಂಡರು.

ಈ ಘೋರ ಕೃತ್ಯವನ್ನು ಖಂಡಿಸಿ, ಅಮೇರಿಕಾದಾದ್ಯಂತ ಪ್ರತಿಭಟನೆ ನಡೆಯುತ್ತಲೇ ಇದೆ. ಹೀಗಿರುವಾಗಲೇ, ''ಜಾರ್ಜ್ ಫ್ಲಾಯ್ಡ್ ಪಾಲಿಗಿದು ಶ್ರೇಷ್ಠ ದಿನ'' ಎಂದಿದ್ದಾರೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್.

ಜಾರ್ಜ್ ಫ್ಲಾಯ್ಡ್ ಸಾವಿಗೆ ನ್ಯಾಯ ದೊರಕಿಸಿ ಕೊಡಲು ಡೊನಾಲ್ಡ್ ಟ್ರಂಪ್ ಆಡಳಿತ ವಿಫಲವಾಗಿದೆ. ಜಾರ್ಜ್ ಫ್ಲಾಯ್ಡ್ ಹತ್ಯೆಗೆ ರಾಜಕೀಯ ಲೇಪ ನೀಡುತ್ತಿರುವ ಡೊನಾಲ್ಡ್ ಟ್ರಂಪ್ ವಿರುದ್ಧ ಜನ ಕಿಡಿಕಾರಿದ್ದಾರೆ.

ಡೊನಾಲ್ಡ್ ಟ್ರಂಪ್ ಕೊಟ್ಟ ಹೇಳಿಕೆ ಏನು.?

ಡೊನಾಲ್ಡ್ ಟ್ರಂಪ್ ಕೊಟ್ಟ ಹೇಳಿಕೆ ಏನು.?

ಅಮೇರಿಕಾದಲ್ಲಿ ತಲೆದೊರಿರುವ ನಿರುದ್ಯೋಗ ಸಮಸ್ಯೆ ಬಗ್ಗೆ ತುಟಿಕ್ ಪಿಟಿಕ್ ಎನ್ನದ ಡೊನಾಲ್ಡ್ ಟ್ರಂಪ್, ''ಜನಾಂಗ, ಬಣ್ಣ, ಲಿಂಗ, ಧರ್ಮವನ್ನು ಲೆಕ್ಕಸದೆ ಪ್ರತಿ ಕ್ಷೇತ್ರದಲ್ಲೂ ಸಮಾನತೆ ಇರಬೇಕು. ಜಾರ್ಜ್ ಫ್ಲಾಯ್ಡ್ ನಿಂದ ಒಳ್ಳೆಯದ್ದೇ ಆಗಿದೆ. ಸಮಾನತೆಯ ದೃಷ್ಟಿಯಿಂದ ಜಾರ್ಜ್ ಫ್ಲಾಯ್ಡ್ ಪಾಲಿಗಿದು ಶ್ರೇಷ್ಠ ದಿನ'' ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಆದ್ರೆ, ಸಮಾನತೆ ಬಗ್ಗೆ ಬಾಯಲ್ಲಿ ಮಾತನಾಡುವ ಡೊನಾಲ್ಡ್ ಟ್ರಂಪ್, ಜಾರ್ಜ್ ಫ್ಲಾಯ್ಡ್ ಹತ್ಯೆಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶಾಂತವಾಗಿ ನಡೆಯುತ್ತಿದೆ ಪ್ರತಿಭಟನೆ

ಶಾಂತವಾಗಿ ನಡೆಯುತ್ತಿದೆ ಪ್ರತಿಭಟನೆ

ಕಳೆದ ಕೆಲ ದಿನಗಳ ಹಿಂದೆ ಅಮೇರಿಕಾದ ವಿವಿಧ ನಗರಗಳಲ್ಲಿ ಹಿಂಸಾಚಾರ ರೂಪ ಪಡೆದುಕೊಂಡಿದ್ದ ಪ್ರತಿಭಟನೆ, ಸದ್ಯ ಶಾಂತಿಯುತವಾಗಿ ಸಾಗುತ್ತಿದೆ. ಜಾರ್ಜ್ ಫ್ಲಾಯ್ಡ್ ಸಾವಿಗೆ ಕಾರಣವಾದ 'ಬಿಳಿ' ಪೊಲೀಸರ ದೌರ್ಜನ್ಯದ ವಿರುದ್ಧ ಅಮೇರಿಕನ್ನರು ಶಾಂತವಾಗಿ ಮೆರವಣಿಗೆ ನಡೆಸುತ್ತಿದ್ದಾರೆ.

ಬ್ಲಾಕ್ ಲೈವ್ಸ್ ಮ್ಯಾಟರ್

ಬ್ಲಾಕ್ ಲೈವ್ಸ್ ಮ್ಯಾಟರ್

ಜಾರ್ಜ್ ಫ್ಲಾಯ್ಡ್ ಹತ್ಯೆಯನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ, ವಾಷಿಂಗ್ಟನ್ ನಲ್ಲಿರುವ ಪ್ರಮುಖ ಡಿ.ಸಿ ಸ್ಟ್ರೀಟ್ ನಲ್ಲಿ ಹಳದಿ ಬಣ್ಣದ ದೈತ್ಯ ಅಕ್ಷರಗಳಲ್ಲಿ ''BLACK LIVES MATTER'' ಎಂದು ಪೇಂಟ್ ನಲ್ಲಿ ಬರೆಯಲಾಗಿದೆ. ಆ ಮೂಲಕ ಕಪ್ಪು ವರ್ಣೀಯರ ಜೀವ ಮುಖ್ಯ ಎಂಬ ಸಂದೇಶವನ್ನು ಸಾರಲಾಗಿದೆ.

ಕಣ್ಣೀರು ಹಾಕಿದ ಜೇಕಬ್ ಫ್ರೇ

ಕಣ್ಣೀರು ಹಾಕಿದ ಜೇಕಬ್ ಫ್ರೇ

ಜಾರ್ಜ್ ಫ್ಲಾಯ್ಡ್ ಪಾರ್ಥೀವ ಶರೀರವನ್ನು ಇರಿಸಲಾಗಿದ್ದ ಶವಪೆಟ್ಟಿಗೆಯ ಮುಂದೆ ಮಂಡಿಯೂರಿದ ಮೇಯರ್ ಜೇಕಬ್ ಫ್ರೇ ಕಣ್ಣೀರು ಸುರಿಸಿದ್ದಾರೆ.

ಜಾರ್ಜ್ ಫ್ಲಾಯ್ಡ್ ಸಾವು ಸಂಭವಿಸಿದ್ದು ಹೇಗೆ.?

ಜಾರ್ಜ್ ಫ್ಲಾಯ್ಡ್ ಸಾವು ಸಂಭವಿಸಿದ್ದು ಹೇಗೆ.?

ಮೇ 27 ರಂದು ರಾತ್ರಿ 8 ಗಂಟೆ ಸುಮಾರಿಗೆ 46 ವರ್ಷ ವಯಸ್ಸಿನ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಮೇಲೆ 'ಬಿಳಿ' ಪೊಲೀಸರು ಅಟ್ಟಹಾಸ ಮೆರೆದಿದ್ದರು. ರಸ್ತೆ ಮೇಲೆ ಬಿದ್ದ 'ಬ್ಲಾಕ್' ಜಾರ್ಜ್ ಫ್ಲಾಯ್ಡ್ ಕುತ್ತಿಗೆಯ ಮೇಲೆ 'ಬಿಳಿ' ಪೊಲೀಸ್ ಹಲವು ನಿಮಿಷಗಳ ಕಾಲ ಬಲವಾಗಿ ಮಂಡಿಯೂರಿದ್ದ ಪರಿಣಾಮ, ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿದ್ದರು.

''ಉಸಿರಾಡಲು ಸಾಧ್ಯವಾಗುತ್ತಿಲ್ಲ'', ''ನನ್ನನ್ನು ಕೊಲ್ಲಬೇಡಿ'' ಎಂದು ಪದೇ ಪದೇ ಜಾರ್ಜ್ ಫ್ಲಾಯ್ಡ್ ಹೇಳುತ್ತಿದ್ದರೂ, ಆತನ ಕುತ್ತಿಗೆಯ ಮೇಲಿಂದ 'ವೈಟ್' ಪೊಲೀಸ್ ಕಾಲು ತೆಗೆಯಲಿಲ್ಲ.

ಜಾರ್ಜ್ ಫ್ಲಾಯ್ಡ್ ಮೇಲೆ ಪೊಲೀಸರು ತೋರಿದ ಮೃಗೀಯ ವರ್ತನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಡಿಯೋ ನೋಡಿದ ಜನತೆ ಬಿಳಿ ಪೊಲೀಸರ ಅಟ್ಟಹಾಸವನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದರು.

ಕೆಲಸದಿಂದ ವಜಾಗೊಂಡ ಪೊಲೀಸರು

ಕೆಲಸದಿಂದ ವಜಾಗೊಂಡ ಪೊಲೀಸರು

ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಕುತ್ತಿಗೆ ಮೇಲೆ ಬಲವಾಗಿ ಮಂಡಿಯೂರಿ ಕ್ರೌರ್ಯ ಮೆರೆದಿದ್ದ 'ಬಿಳಿ' ಪೊಲೀಸ್ ಡೆರೆಕ್ ಚೌವಿನ್ ವಿರುದ್ಧ ಮರ್ಡರ್ ಕೇಸ್ ಹಾಕಿ ಬಂಧಿಸಲಾಗಿದೆ. ಹಾಗೇ, ಆತನನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಇತರೆ ಮೂರು ಪೊಲೀಸರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಕೆಲಸದಿಂದ ವಜಾಗೊಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+