ವೈನ್ ಕುಡಿಯಿರಿ ಮಧುಮೇಹದಿಂದ ದೂರವಿರಿ!

ವಾಷಿಂಗ್ಟನ್, ಮೇ.7: 'ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ' ಎಂಬ ಜಾಹೀರಾತಿನಂತೆ ದಿನರಾತ್ರಿ ವೈನ್ ಕುಡಿದರೆ ಮಧುಮೇಹದ ಸಮಸ್ಯೆಯಿಂದ ದೂರ ಇರಬಹುದು ಎಂದು ಇತ್ತೀಚಿನ ಸಂಶೋಧನೆಯಿಂದ ತಿಳಿದು ಬಂದಿದೆ.

ಟೈಪ್ 2 ಡಯಾಬಿಟಿಸ್ ನಿಂದ ಬಳಲುತ್ತಿರುವ 220ಕ್ಕೂ ಅಧಿಕ ಮಂದಿಯ ಮೇಲೆ ಈ ಪ್ರಯೋಗ ನಡೆಸಿರುವ ವಿಜ್ಞಾನಿಗಳು ಈ ವಿಷಯ ಹೊರ ಹಾಕಿದ್ದಾರೆ.

ಕಳೆದ ಎರಡು ವರ್ಷಗಳಿಂದ ಸಂಶೋಧನೆಗೆ ಒಳಪಟ್ಟವರಿಗೆ ಪ್ರತಿರಾತ್ರಿ 150 ಎಂ.ಎಲ್ ಗ್ಲಾಸ್ ವೈಸ್ ನೀಡಲಾಗಿತ್ತು. ಡಿನ್ನರ್ ಜೊತೆ ವೈನ್ ಸೇವಿಸುತ್ತಾ ಬಂದವರ ಕೊಲೆಸ್ಟ್ರಾಲ್ ಪ್ರಮಾಣ ಉತ್ತಮ ಸ್ಥಿತಿಯಲ್ಲಿತ್ತು ಹಾಗೂ ಮಧುಮೇಹ ಸಮಸ್ಯೆ ತಲೆದೋರಿಲ್ಲ ಎಂದು ಇಂಡಿಪೆಂಡೆಂಟ್ ವರದಿ ಮಾಡಿದೆ. [ಮಧುಮೇಹಿಗಳ ಸಂಖ್ಯೆː ಭಾರತಕ್ಕೆ ಎರಡನೇ ಸ್ಥಾನ]

A glass of red wine every night could cut risk of diabetes

ಹೆಚ್ಚಾದರೆ ಅಪಾಯ: ಒಂದು ಅಥವಾ ಎರಡು ಗ್ಲಾಸ್ ವೈನ್ ಗಿಂತ ಅಧಿಕ ಪ್ರಮಾಣದಲ್ಲಿ ಸೇವನೆ ಮಾಡಿದರೆ ಅಪಾಯ ಕಟ್ಟಿಟ್ಟಬುತ್ತಿ. ಹೃದಯಕ್ಕೆ ಹಾನಿ, ಕ್ಯಾನ್ಸರ್ ಗೆ ಆಹ್ವಾನ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. [ಮಧುಮೇಹ ರೋಗಿಗಳಿಗೆ ಸಕತ್ 'ಸಿಹಿ' ಸುದ್ದಿ]

ಪ್ರತಿನಿತ್ಯ ನಿಯಮಿತ ದರದಲ್ಲಿ ರೆಡ್ ವೈನ್ ಸೇವಿಸಿದ ಟೈಪ್ 2 ಡಯಾಬಿಟಿಸ್ ರೋಗಿಗಳು ಉತ್ತಮ ಸಮತೋಲಿತ ಆಹಾರ ಸೇವನೆ ಮೂಲಕ ಕಾರ್ಡಿಯೋಮೆಟಾಬಾಲಿಕ್ ತೊಂದರೆಯಿಂದ ಮುಕ್ತರಾಗಬಹುದು ಎಂದು ಪ್ರೊ. ಇರಿಸ್ ಶಾಯ್ ಹೇಳಿದ್ದಾರೆ.

ಈ ಸಂಶೋಧನೆಯ ವರದಿಯನ್ನು ಪ್ರಾಗ್ ನಲ್ಲಿ ನಡೆಯುವ ಯುರೋಪಿನ್ ಕಾಂಗ್ರೆಸ್ ನಲ್ಲಿ ಮಂಡಿಸಲಾಗುತ್ತದೆ. (ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+