ಬ್ರಿಟನ್ ರಾಣಿಗೆ ನೀವ್ಯಾರು ಎಂದಿದ್ದ ಅದೊಬ್ಬ ಪ್ರವಾಸಿಗ; ಮುಂದೆ ಏನಾಯ್ತು!?

ಲಂಡನ್, ಸೆಪ್ಟೆಂಬರ್ 09: ಬ್ರಿಟನ್ ನೆಲದಲ್ಲಿ ಸುದೀರ್ಘ 7 ದಶಕಗಳ ಕಾಲ ಆಡಳಿತ ಸಲ್ಲಿಸಿದ ರಾಣಿ ಎಲಿಜಬೆತ್ II ಗುರುವಾರ 96ನೇ ವಯಸ್ಸಿನಲ್ಲಿ ವಿಧವಶರಾದ ಹಿನ್ನೆಲೆ ಪ್ರಪಂಚದಾದ್ಯಂತ ನಾಯಕರು ಸಂತಾಪ ಸೂಚಿಸುತ್ತಿದ್ದಾರೆ. ಇದರ ಮಧ್ಯೆ ರಾಣಿಯ ಸರಳತೆಯನ್ನು ಸಾರಿ ಹೇಳುವ ಘಟನೆಯೊಂದನ್ನು ಪ್ರವಾಸಿಗರೊಬ್ಬರು ತೆರೆದಿಟ್ಟಿದ್ದಾರೆ.

2022ರ ಜೂನ್‌ನಲ್ಲಿ ಕ್ವೀನ್ಸ್ ಪ್ಲಾಟಿನಂ ಜುಬಿಲಿ ಆಚರಣೆ ವೇಳೆ ಚಿತ್ರೀಕರಿಸಿದ ವಿಡಿಯೋವೊಂದು ರಾಣಿಯ ಸರಳತೆಯನ್ನು ಸಾರಿ ಹೇಳುತ್ತಿದೆ. ರಾಣಿಯ ಮಾಜಿ ರಾಯಲ್ ಪ್ರೊಟೆಕ್ಷನ್ ಅಧಿಕಾರಿ ರಿಚರ್ಡ್ ಗ್ರಿಫಿನ್ ವಿವರಿಸಿದ ಘಟನೆಯೊಂದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ, ಗ್ರಿಫಿನ್ ಅವರು ರಾಣಿ ಎಲಿಜಬೆತ್ II ರೊಂದಿಗೆ ಸ್ಕಾಟ್ಲೆಂಡ್ ನಲ್ಲಿ ಪ್ರವಾಸದ ಬಗ್ಗೆ ಉಲ್ಲೇಖಿಸಿದ್ದಾರೆ. ಅಮೆರಿಕಾದ ಪ್ರವಾಸಿಗನ ಬಗ್ಗೆ ಉಲ್ಲೇಖಿಸಿ ನಗುವಿನ ಚಟಾಕಿ ಸಿಡಿಸಿದ್ದಾರೆ. ಆ ಮೂಲಕ ಹಳೆಯ ನೆನಪೊಂದನ್ನು ಸ್ಮರಿಸಿಕೊಂಡಿದ್ದಾರೆ.

ಬ್ರಿಟನ್ ರಾಣಿಯನ್ನು ಗುರುತಿಸದ ವ್ಯಕ್ತಿ

ಬ್ರಿಟನ್ ರಾಣಿಯನ್ನು ಗುರುತಿಸದ ವ್ಯಕ್ತಿ

"ಸಾಮಾನ್ಯವಾಗಿ ರಾಣಿ ಯಾವಾಗಲೂ ಜನರನ್ನು ನಿಲ್ಲಿಸಿ ಹಲೋ ಎಂದು ಹೇಳುತ್ತಿದ್ದರು. ಅದರಂತೆ ನಾವೇ ಮೊದಲು ಅವರನ್ನು ನಿಲ್ಲಿಸಿದೆವು. ಆ ಕ್ಷಣದಲ್ಲಿ ಅವರು ರಾಣಿಯನ್ನು ಗುರುತಿಸಲಿಲ್ಲ ಎಂಬುದ ಸ್ಪಷ್ಟವಾಗಿತ್ತು. ಇಷ್ಟೇ ಆಗಿದ್ರೆ ಪರವಾಗಿಲ್ಲ. ನೀವು ಎಲ್ಲಿಂದ ಬಂದಿದ್ದೀರಿ, ಮುಂದೆ ಎಲ್ಲಿಗೆ ಹೋಗುತ್ತಿದ್ದೀರಿ ಎಂದು ರಾಣಿಯನ್ನು ಪ್ರಶ್ನಿಸಿದ್ದರು. ಇದರ ಜೊತೆಗೆ ನೀವು ಎಲ್ಲಿ ವಾಸವಾಗಿದ್ದೀರಿ ಎಂದು ರಾಣಿಯನ್ನು ಆ ಪ್ರವಾಸಿಗರು ಕೇಳಿದ್ದರು," ಎಂಬ ಘಟನೆಯನ್ನು ಗ್ರಿಫನ್ ಹೇಳಿದರು.

ತಮ್ಮನ್ನು ಗುರುತಿಸದ ಪ್ರವಾಸಿಗರಿಗೆ ರಾಣಿ ಹೇಳಿದ್ದೇನು?

ತಮ್ಮನ್ನು ಗುರುತಿಸದ ಪ್ರವಾಸಿಗರಿಗೆ ರಾಣಿ ಹೇಳಿದ್ದೇನು?

ತಾವು ಯಾರು ಎಂಬುದನ್ನೇ ಗುರುತಿಸದ ಪ್ರವಾಸಿಗರಿಗೆ ರಾಣಿಯವರು ಸರಳ ರೀತಿಯಲ್ಲಿ ಉತ್ತರ ನೀಡಿದರು. ನಾನು ಲಂಡನ್‌ನಲ್ಲಿ ವಾಸಿಸುತ್ತೇನೆ, ಆದರೆ ಬೆಟ್ಟದ ಇನ್ನೊಂದು ತುದಿಗೆ ರಜೆಗಾಗಿ ಬಂದಿದ್ದೇನೆ," ಎಂದು ಹೇಳಿದರು. ಆಗ ಪ್ರವಾಸಿಗರು ರಾಣಿಯನ್ನು ಭೇಟಿಯಾಗಿದ್ದೀರಾ ಎಂದು ರಾಜನನ್ನು ಕೇಳಿದರು. ತದನಂತರದಲ್ಲಿ ಅವರು ಹೇಗೆ ಎಂದು ಪ್ರವಾಸಿಗರು ಗ್ರಿಫಿನ್ ಬಳಿ ಪ್ರಶ್ನಿಸಿದ್ದರು.

ಬ್ರಿಟನ್ ರಾಣಿ ಬಗ್ಗೆ ಪ್ರವಾಸಿಗರಿಗೆ ಗ್ರಿಫಿನ್ ಉತ್ತರ

ಬ್ರಿಟನ್ ರಾಣಿ ಬಗ್ಗೆ ಪ್ರವಾಸಿಗರಿಗೆ ಗ್ರಿಫಿನ್ ಉತ್ತರ

"ಇವರು ತುಂಬಾ ಚಡಪಡಿಸುವರು ಎಂದು ನಾನು ಆ ಪ್ರವಾಸಿಗರಿಗೆ ಹೇಳಿದೆ, ಆದರೆ ರಾಣಿ ತುಂಬಾ ಹಾಸ್ಯಪ್ರಜ್ಞೆಯನ್ನು ಹೊಂದಿದವರಾಗಿದ್ದರು. ಇಷ್ಟೆಲ್ಲ ನಡೆದ ನಂತರವೂ ಆ ಪ್ರವಾಸಿಗರಿಗೆ ತಾವು ರಾಣಿಯ ಎದುರಿನಲ್ಲೇ ನಿಂತಿದ್ದೇವೆ ಎಂಬುದರ ಅರಿವು ಆಗಲಿಲ್ಲ, ತಮ್ಮ ಫೋಟೋವನ್ನು ಕ್ಲಿಕ್ ಮಾಡುವಂತೆ ರಾಣಿಯನ್ನೇ ಅವರು ಕೇಳಿಕೊಂಡರು," ಗ್ರಿಫಿನ್ ಹೇಳಿದರು.

ರಾಣಿಯ ಮುಖದಲ್ಲಿ ನಗು ಮೂಡಿಸಿದ ಅವರ ವರ್ತನೆ

ರಾಣಿಯ ಮುಖದಲ್ಲಿ ನಗು ಮೂಡಿಸಿದ ಅವರ ವರ್ತನೆ

ಆ ಪ್ರವಾಸಿಗರ ಆಕಸ್ಮಿಕ ಭೇಟಿಯ ನಂತರ, ರಾಣಿ ನಗುತ್ತಾ ಗ್ರಿಫಿನ್‌ಗೆ ಹೇಳಿದರು. "ಅವರು ಆ ಫೋಟೋವನ್ನು ಅಮೆರಿಕದಲ್ಲಿರುವ ಸ್ನೇಹಿತರಿಗೆ ತೋರಿಸಿದಾಗ ಅವರಿಗೆ ಅರಿವಾಗುತ್ತದೆ. ಆಗ ಅವರು ಆಕಾಶದಲ್ಲಿ ಹಾರಾಡುತ್ತಾರೆ. ಅಂದು ಯಾರಾದರೂ ನಾನು ಯಾರು ಎಂಬುದನ್ನು ಅವನಿಗೆ ಹೇಳುತ್ತಾರೆ," ಎಂದು ರಾಣಿ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+