ಪಪುವಾ ನ್ಯೂ ಗಿನಿಯಾದಲ್ಲಿ 7.5 ತೀವ್ರತೆಯ ಭೂಕಂಪ
ಪೋರ್ಟ್ ಮೋರ್ಸಬೈ, ಫೆಬ್ರವರಿ 26:ಆಸ್ಟ್ರೇಲಿಯಾ ಗಡಿಯಲ್ಲಿರುವ ದ್ವೀಪ ರಾಷ್ಟ್ರ ಪುವಾ ನ್ಯೂ ಗಿನಿಯಾ ದಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿದೆ.
ಭಾರತೀಯ ಕಾಲಮಾನದ ಪ್ರಕಾರ ನಿನ್ನೆ(ಫೆ.25) ರಾತ್ರಿ ಭೂಕಂಪ ಸಂಭವಿಸಿದ್ದು, ಯಾವುದೇ ಸಾವು ನೋವಿನ ಕುರಿತು ವರದಿಯಾಗಿಲ್ಲ.
ಇಷ್ಟೊಂದು ತೀವ್ರ ಭೂಕಂಪ ಸಂಭವಿಸಿದ್ದರೂ ಯಾವುದೇ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ. ರಿಕ್ಟರ್ ಆಪನದಲ್ಲಿ 7.5 ತೀವ್ರತೆ ದಾಖಲಾಗಿರುವುದರಿಂದ, ಈ ಭಾರೀ ಭೂಕಂಪಕ್ಕೆ ಹಲವು ಜೀವಹಾನಿ, ಆಸ್ತಿ ಪಾಸ್ತಿ ನಷ್ಟವಾಗಿರುವ ಸಾಧ್ಯೆ ಇದ್ದು, ಈ ಕುರಿತು ನಿಖರ ಮಾಹಿತಿ ಲಭ್ಯವಿಲ್ಲ. ಭೂಕಂಪದ ಸುದ್ದಿಯನ್ನು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ನಿಖರಪಡಿಸಿದೆ.













Click it and Unblock the Notifications