ಕೊರೊನಾ ವೈರಸ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಅಸಲಿ ಸತ್ಯ!

ನವದೆಹಲಿ, ಏಪ್ರಿಲ್.27: ಕೊರೊನಾ ವೈರಸ್ ಇಡೀ ವಿಶ್ವದ ಜನರನ್ನೇ ಭಯದ ಕುಂಡಲದಲ್ಲಿ ಹಾಕಿರುವ ಮಹಾಮಾರಿಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಕೊವಿಡ್-19 ಸೋಂಕಿತರಲ್ಲಿ ಯಾವೆಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂಬ ಮಾಹಿತಿ ತಿಳಿದೇ ಇದೆ.

Recommended Video

      ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಶಾಸಕ ಶ್ರೀಕಂಠೇಗೌಡ ಮತ್ತು ಅವರ ಪುತ್ರ,ದೂರು ದಾಖಲು

      ಸೆಂಟರ್ ಆಫ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರೀವೆಂಷನ್ (CDC) ಆಘಾತಕಾರಿ ಅಂಶವೊಂದನ್ನು ಬಿಚ್ಚಿಟ್ಟಿದೆ. ಕೆಮ್ಮು, ಜ್ವರ, ಶೀತ, ಉಸಿರಾಟ ತೊಂದರೆಯಂತಾ ಲಕ್ಷಣಗಳು ಇಲ್ಲದಿದ್ದರೂ ಕೊರೊನಾ ವೈರಸ್ ಅಂಟಿಕೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.

      ಕೊರೊನಾ ವೈರಸ್ ಸೋಂಕಿತರಲ್ಲಿ ಹೊಸದಾಗಿ ಕಾಣಿಸಿಕೊಳ್ಳುವ ಆರು ಗುಣಲಕ್ಷಣಗಳು ಕೂಡಾ ಸೋಂಕಿನ ಲಕ್ಷಣ ಎಂದು ಗುರುತಿಸಲಾಗಿದೆ. ಇದರಿಂದ ಕೊವಿಡ್-19 ಸೋಂಕಿತರಲ್ಲಿ ಒಂಬತ್ತು ಬಗೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಸಿಡಿಸಿ ಹೇಳಿದೆ.

      ಈ ಲಕ್ಷಣಗಳು ಕಾಣಿಸಿಕೊಂಡರೂ ಕೊರೊನಾ ಕನ್ಫರ್ಮ್!

      ಈ ಲಕ್ಷಣಗಳು ಕಾಣಿಸಿಕೊಂಡರೂ ಕೊರೊನಾ ಕನ್ಫರ್ಮ್!

      ಕೊರೊನಾ ವೈರಸ್ ಸೋಂಕಿತರಲ್ಲಿ ಮೊದಲು ಪ್ರಮುಖವಾಗಿ ಮೂರು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಪಟ್ಟಿ ಮಾಡಲಾಗಿತ್ತು. ಇದೀಗ ಈ ಲಿಸ್ಟ್ ಗೆ ಹೊಸದಾಗಿ ಆರು ಲಕ್ಷಣಗಳು ಸೇರ್ಪಡೆಗೊಳಿಸಲಾಗಿದೆ. ಸೋಂಕಿತರಲ್ಲಿ ಶೀತ, ಮೂಳೆಗಳಲ್ಲಿ ನೋವು, ಶೀತದ ಪುನರಾವರ್ತನೆ, ತಲೆನೋವು, ಗಂಟಲು ಕೆರೆತ, ರುಚಿ ಮತ್ತು ವಾಸನೆಯನ್ನು ಗುರುತಿಸುವ ಸಾಮರ್ಥ್ಯವನ್ನು ಕೊರೊನಾ ಸೋಂಕಿತರು ಕಳೆದುಕೊಳ್ಳುತ್ತಾರೆ.

      ಈ 9 ಲಕ್ಷಣಗಳು ಕಾಣಿಸಿಕೊಂಡರೆ ಕೊರೊನಾ ಫಿಕ್ಸ್!

      ಈ 9 ಲಕ್ಷಣಗಳು ಕಾಣಿಸಿಕೊಂಡರೆ ಕೊರೊನಾ ಫಿಕ್ಸ್!

      ಕೊರೊನಾ ವೈರಸ್ ಸೋಂಕಿತರಲ್ಲಿ ಈ ಒಂಬತ್ತು ಲಕ್ಷಣಗಳಲ್ಲಿ ಒಂದೇ ಒಂದು ಲಕ್ಷಣ ಕಾಣಿಸಿಕೊಂಡರೂ ಮುಂಜಾಗ್ರತೆ ವಹಿಸುವುದು ಅತ್ಯಗತ್ಯ ಎಂದು ಸಿಡಿಸಿ ವೈದ್ಯಕೀಯ ತಜ್ಞರು ತಿಳಿಸಿದ್ದಾರೆ. ಹಾಗಿದ್ದಲ್ಲಿ ಕೊರೊನಾ ವೈರಸ್ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ಒಟ್ಟು 9 ಲಕ್ಷಣಗಳು ಯಾವುವು ಅನ್ನುವುದಕ್ಕೆ ಉತ್ತರ ಇಲ್ಲಿದೆ ನೋಡಿ.

      - ಜ್ವರ

      - ಕೆಮ್ಮು

      - ಉಸಿರಾಟ ತೊಂದರೆ

      - ಶೀತ

      - ಶೀತದ ಪುನರಾವರ್ತನೆ

      - ಮೂಳೆಗಳಲ್ಲಿ ನೋವು

      - ತಲೆನೋವು

      - ಗಂಟಲು ಕೆರೆತ,

      - ರುಚಿ ಮತ್ತು ವಾಸನೆ ಗುರುತಿಸಲು ಆಗುವುದಿಲ್ಲ

      ಶೀತಜ್ವರ ಇದ್ದವರೆಲ್ಲ ಕೊರೊನಾ ವೈರಸ್ ಸೋಂಕಿತರಲ್ಲ

      ಶೀತಜ್ವರ ಇದ್ದವರೆಲ್ಲ ಕೊರೊನಾ ವೈರಸ್ ಸೋಂಕಿತರಲ್ಲ

      ಕೊರೊನಾ ವೈರಸ್ ಸೋಂಕಿತರ ಲಕ್ಷಣಗಳಲ್ಲಿ ಶೀತಜ್ವರ ಕೂಡಾ ಒಂದು. ಆದರೆ ಈ ಲಕ್ಷಣವನ್ನು ಹೊಂದಿದವರಿಗೆಲ್ಲ ಕೊರೊನಾ ವೈರಸ್ ಅಂಟಿಕೊಂಡಿರುತ್ತದೆ ಎಂದಲ್ಲ. ರೆಸ್ಪಿರೆಟರಿ ಸಿನ್ಸಿಟಿಯಲ್ ವೈರಸ್ ಹಾಗೂ ರೆಸ್ಪಿರೆಟರಿ ವೈರಸ್ ನಿಂದಾಗಿ ಶೀತಜ್ವರದಂತಾ ಸೋಂಕು ಕಾಣಿಸಿಕೊಳ್ಳುತ್ತದೆ. ಶೀತಜ್ವರದ ಜೊತೆಗೆ ಕೊರೊನಾ ವೈರಸ್ ಗೆ ಸಂಬಂಧಿಸಿದ ಮತ್ತಷ್ಟು ಲಕ್ಷಣಗಳು ಏಕಕಾಲದಲ್ಲಿ ಕಾಣಿಸಿಕೊಂಡಲ್ಲಿ ಮಾತ್ರ ಎಚ್ಚರಿಕೆ ವಹಿಸಬೇಕು.

      ಎರಡ್ಮೂರ ಲಕ್ಷಣ ಹೊಂದಿದ್ದಲ್ಲಿ ಕೊರೊನಾ ಪಕ್ಕಾ!

      ಎರಡ್ಮೂರ ಲಕ್ಷಣ ಹೊಂದಿದ್ದಲ್ಲಿ ಕೊರೊನಾ ಪಕ್ಕಾ!

      ಕೊರೊನಾ ವೈರಸ್ ಸೋಂಕಿತರಲ್ಲಿ ಕನಿಷ್ಠ ಎರಡರಿಂದ ಮೂರು ರೀತಿಯ ಲಕ್ಷಣಗಳು ಗೋಚರಿಸುತ್ತವೆ. ಸ್ಟಾನ್ ಫರ್ಡ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸನ್ ನಲ್ಲಿರುವ ದೇವಿಡ್ ಕಿಮ್, ಎಂಡಿ, ಪಿಎಚ್ ಡಿ, ಜೇಮ್ಸ್ ಕ್ಯೂನ್, ಎಂಡಿ. ಎಂಎಸ್, ಬೆಂಜಮಿನ್ ಪಿನ್ಸ್ಕಿ, ಎಂಡಿ, ಪಿಎಚ್ ಡಿ. ನಿಗಮ್ ಎಚ್ ಶಾಹ್, ಎಂಬಿಬಿಎಸ್ ಪಿಎಚ್ ಡಿ.ಇಯಾನ್ ಬ್ರೋನ್, ಎಂಡಿ. ಎಂಎಸ್ ನೇತೃತ್ವದ ತಂಡ ನಡೆಸಿದ ಅಧ್ಯಯನದಲ್ಲಿ ಬಹಿರಂಗಪಡಿಸಿದೆ.

      ಕೊರೊನಾ ಲಕ್ಷಣವಿಲ್ಲದಿದ್ದರೂ ಕೆಲವೊಮ್ಮೆ ಸೋಂಕು ಕನ್ಫರ್ಮ್

      ಕೊರೊನಾ ಲಕ್ಷಣವಿಲ್ಲದಿದ್ದರೂ ಕೆಲವೊಮ್ಮೆ ಸೋಂಕು ಕನ್ಫರ್ಮ್

      ಕೊರೊನಾ ವೈರಸ್ ಸೋಂಕು ಮತ್ತು ಸೋಂಕಿತರ ಬಗ್ಗೆ ಗೊಂದಲ ಬೇಕಾಗಿಲ್ಲ. ವಿಶ್ವದಾದ್ಯಂತ ಹಲವು ಪ್ರಕರಣಗಳಲ್ಲಿ ಕೆಮ್ಮು, ಶೀತ, ಜ್ವರ ಹಾಗೂ ಉಸಿರಾಟ ತೊಂದರೆ ಕಾಣಿಸಿಕೊಳ್ಳದಿರುವ ವ್ಯಕ್ತಿಗಳಲ್ಲಿಯೂ ಕೊರೊನಾ ವೈರಸ್ ಪಾಸಿಟಿವ್ ಎಂದು ತಿಳಿದು ಬಂದಿದೆ. ಏಕೆಂದರೆ ನೊವೆಲ್ ಕೊರೊನಾ ವೈರಸ್ ಉಳಿದ ಕೊರೊನಾ ವೈರಸ್ ಗಳಂತೆ ಅಲ್ಲ. ವಿಭಿನ್ನ ಸೋಂಕಿನ ಲಕ್ಷಣಗಳನ್ನು ಸಾರ್ಸ್ ಕೊರೊನಾ ವೈರಸ್-2 ಹೊಂದಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+