ಪಾಕಿಸ್ತಾನ, ನೇಪಾಳ, ಉತ್ತರ ಭಾರತದಲ್ಲಿ ಕಂಪಿಸಿದ ಭೂಮಿ

Subscribe to Oneindia Kannada

ನವದೆಹಲಿ, ಏಪ್ರಿಲ್, 10: ಪಾಕಿಸ್ತಾನ, ನೇಪಾಳ ಮತ್ತು ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಭಾನುವಾರ ಸಂಜೆ ಭೂಮಿ ಕಂಪಿಸಿದೆ. ಸಂಜೆ 4 ಗಂಟೆ ಸುಮಾರಿಗೆ ಎರಡು ಸಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನಕ್ಕೆ ಪಾಕಿಸ್ತಾನದಲ್ಲಿ ಇಬ್ಬರು ಬಲಿಯಾಗಿದ್ದಾರೆ.

ಆದರೆ ಅಪಘಾನಿಸ್ತಾನದಲ್ಲಿ ಭೂಕಂಪನದ ತೀವ್ರತೆ ಹೆಚ್ಚಿದ್ದು ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆ ದಾಖಲಾಗಿದೆ. ಹಿಂದೂಕುಶ್ ಪರ್ವತದಲ್ಲಿ ಭೂಕಂಪನ ಕೇಂದ್ರ ಕಂಡುಬಂದಿದೆ.[ನಡುಗಿದ್ದ ಪಾಕಿಸ್ತಾನ]

arthquake

ಜಮ್ಮು ಮತ್ತು ಕಾಶ್ಮೀರ, ಚಂಡಿಘಡ ಸೇರಿದಂತೆ ಉತ್ತರ ಭಾರತದೆಲ್ಲೆಡೆ ಕಂಪನದ ಅನುಭವ ಕಂಡು ಬಂದ ತಕ್ಷಣ ಜನ ಮನೆಯಿಂದ ಹೊರಕ್ಕೆ ಓಡಿ ಬಂದಿದ್ದಾರೆ. ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ 4.5 ರಷ್ಟು ತೀವ್ರತೆ ಭೂಕಂಪ ದಾಖಲಾಗಿದೆ. ಕಠ್ಮಂಡುವಿನ ಸಮೀಪದಲ್ಲಿರುವ ಲಲಿತ್ ಪುರ್ ಎಂಬ ಪ್ರದೇಶದಲ್ಲಿ ಭೂಂಕಪನದ ಕೇಂದ್ರ ಬಿಂದು ಇತ್ತು.[ಬೆಂಗಳೂರು ಭೂಕಂಪನದಿಂದ ಮುಕ್ತ ಅಲ್ಲ]

ಕೆಲ ದಿನಗಳ ಹಿಂದೆ ಉತ್ತರ ಭಾರತದಲ್ಲಿ ಭೂಮಿ ನಡುಗಿತ್ತು. ಕಳೆದ ವರ್ಷ ನೇಪಾಳದಲ್ಲಿ ಭೂಕಂಪ ಸಂಭವಿಸಿ ಅಪಾರ ಸಾವು ನೋವು ಸಂಭವಿಸಿತ್ತು. ಇದೀಗ ಮತ್ತೆ ನಿಸರ್ಗ ಮುನಿಸಿಕೊಳ್ಳುವ ಸೂಚನೆಯನ್ನು ಮತ್ತೆ ನೀಡುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A powerful earthquake of 6.8 magnitude has struck parts of Pakistan and the Afghanistan-Tajikistan border in the Hindukush region. Its epicentre lay 39 km from Ashkasham and 282 km northeast of Kabul, in Afghanistan. In north India, tremors were felt in Jammu and Kashmir,Punjab, Chandigarh and Haryana, besides Delhi. Delhi Metro services were also halted for few minutes.
Please Wait while comments are loading...