ಜಪಾನ್ ವಾಯವ್ಯ ಭಾಗದಲ್ಲಿ 6.8 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ

ಟೋಕಿಯೋ (ಜಪಾನ್), ಜೂನ್ 18: ಜಪಾನ್ ನ ವಾಯವ್ಯ ಭಾಗದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಮಂಗಳವಾರದಂದು ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ಟೋಕಿಯೋದ ಉತ್ತರಕ್ಕೆ ಇರುವ ಜಪಾನ್ ನ ಸಮುದ್ರದಲ್ಲಿ ಮೂರು ಅಡಿ ಎತ್ತರದ ಅಲೆಗಳು ಅಪ್ಪಳಿಸಬಹುದು ಎಂದು ದೇಶದ ಹವಾಮಾನ ಇಲಾಖೆಯಿಂದ ಅಂದಾಜು ಮಾಡಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಈ ಭಾಗದ ಬುಲೆಟ್ ರೈಲು ಸೇವೆಗಳನ್ನು ನಿಲ್ಲಿಸಿದ್ದಾರೆ. ಸಾರ್ವಜನಿಕ ಸುದ್ದಿ ಪ್ರಸಾರ ವಾಹಿನಿ ಎನ್ ಎಚ್ ಕೆ ಪ್ರಕಾರ, ಇನ್ನೂರರಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ದೇಶದ ವಾಯವ್ಯ ಭಾಗದ ಯಮಗತ ಹಾಗೂ ನಿಗತ ಕಡಲ ಭಾಗದಲ್ಲಿ ಈಗಾಗಲೇ ಅಲೆಗಳು ತಲುಪಿರಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.

6.8 magnitude earthquake in Japan, tsunami advisory

ಭೂಕಂಪ ಕೇಂದ್ರಿತ ಪ್ರದೇಶದ ಸಮೀಪ ಇರುವ ಅಣು ವಿದ್ಯುತ್ ಸ್ಥಾವರಗಳಲ್ಲಿ ಯಾವುದೇ ಏರುಪೇರುಗಳು ಕಂಡುಬಂದಿಲ್ಲ ಎಂದು ಎನ್ ಎಚ್ ಕೆ ತಿಳಿಸಿದೆ. ಜಪಾನಿ ರಿಕ್ಟರ್ ಮಾಪಕದಲ್ಲಿ ಭೂಕಂಪದ ಪ್ರಮಾಣ ಆರರಷ್ಟಿದೆ. ಅದು ಏಳರ ತನಕ ಹೋಗಬಹುದು. ಕಳೆದ ವರ್ಷ ಜೂನ್ ನಲ್ಲಿ ಒಸಾಕಾ ಭಾಗದಲ್ಲಿ ಸಂಭವಿಸಿದ್ದ ಭೀಕರ ಭೂಕಂಪದಲ್ಲಿ ಮುನ್ನೂರಾ ಐವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರೆ, ಐವರು ಮೃತಪಟ್ಟಿದ್ದರು.

ಎಂಟು ವರ್ಷಗಳ ಹಿಂದೆ ಅಕ್ಟೋಬರ್ ನಲ್ಲಿ ಸಂಭವಿಸಿದ್ದ ಒಂಬತ್ತರ ತೀವ್ರತೆ ಭೂಕಂಪನದಿಂದ ಸುನಾಮಿ ಎದ್ದು, ಭಾರಿ ಹಾನಿಯಾಗಿ, ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+