ರಷ್ಯಾ ಅಧ್ಯಕ್ಷ ಪುಟಿನ್ ತಮ್ಮ ಶತ್ರುಗಳಿಗೆ ಒಂದು ಗತಿ ಕಾಣಿಸೋದು ಪಕ್ಕಾ

ರಷ್ಯಾದಲ್ಲಿ ಈಗ ಚುನಾವಣೆ ಎದುರಾಗಿದೆ, ಇನ್ನೇನು ಕೆಲವೇ ದಿನದಲ್ಲಿ ಅಲ್ಲಿ ಎಲೆಕ್ಷನ್‌ಗೆ ರಣಕಹಳೆ ಮೊಳಗಲಿದೆ. ವ್ಲಾದಿಮಿರ್ ಪುಟಿನ್ ಅವರೇ ಮತ್ತೆ ಅಧ್ಯಕ್ಷೀಯ ಚುನಾವಣೆಗಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಇಷ್ಟೆಲ್ಲಾ ತಯಾರಿ ನಡುವೆ ಇದೀಗ ಶತ್ರುಗಳನ್ನು ಬುಡ ಸಮೇತ ಕಿತ್ತು ಹಾಕಲು ಪುಟಿನ್ ತೊಡೆ ತಟ್ಟಿ ನಿಂತಂತೆ ಕಾಣುತ್ತಿದೆ.

ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಸೇನಾ ಕಾರ್ಯಾಚರಣೆ ದಿನದಿಂದ ದಿನಕ್ಕೆ ಮತ್ತೆ, ಮತ್ತೆ ಡೆಡ್ಲಿ ಆಗುತ್ತಿದೆ. 2022ರ ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಶುರುವಾಗಿದ್ದ ಯುದ್ಧ ಇದೀಗ ಬರೋಬ್ಬರಿ 2 ವರ್ಷ ಪೂರೈಸುತ್ತಿದೆ. ಹೀಗಿದ್ದಾಗಲೇ ಪುಟಿನ್ ಪಡೆಯಿಂದ ಶತ್ರುಗಳ ಮೇಲೆ ಮನಸ್ಸಿಗೆ ಬಂದಂತೆ ದಾಳಿ ಮಾಡಲಾಗುತ್ತಿದೆ. ಹೀಗಾಗಿ ಉಕ್ರೇನ್ ನೆಲ ನಲುಗುತ್ತಿದ್ದು ಜನರು ಕೂಡ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಹೀಗಿದ್ದಾಗಲೇ ರಷ್ಯಾ ಸೇನೆಯ, ಡೆಡ್ಲಿ ದಾಳಿ ಉಕ್ರೇನ್ ನೆಲವನ್ನು ಕತ್ತಲೆಗೆ ದೂಡಿದೆ.

40,000 People Are Suffering From Electricity Shortage In Ukraine After Russia Attack

40 ಸಾವಿರ ಜನರಿಗೆ ಕತ್ತಲೆ ಭಾಗ್ಯ

ಹೌದು ರಷ್ಯಾ ಸೇನೆ ಉಕ್ರೇನ್ ದೇಶದ ಹೃದಯ ಭಾಗದ ಮೇಲೆ ಹತ್ತಾರು ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ದಾಳಿ ನಡೆಸುತ್ತಿದೆ. ಇದರ ಪರಿಣಾಮ ಉಕ್ರೇನ್‌ನಲ್ಲಿ ವಿದ್ಯುತ್ ಕಡಿತ ಉಂಟಾಗಿದೆ. ಹೀಗಾಗಿ ಅಲ್ಲಿನ ಜನರು ಪರದಾಡುತ್ತಿದ್ದು, ಬರೋಬ್ಬರಿ 40 ಸಾವಿರ ಜನರಿಗೆ ಈಗ ಕತ್ತಲೆಯೇ ಅನಿವಾರ್ಯ ಆಗಿದೆ ಎನ್ನಲಾಗಿದೆ. ಹೇಗಾದರೂ ಮಾಡಿ ಉಕ್ರೇನ್‌ನ ಕಥೆ ಮುಗಿಸಬೇಕು ಎಂಬುದು ರಷ್ಯಾ ಹಠವಾಗಿದೆ. ಇನ್ನೊಂದು ಕಡೆ ಉಕ್ರೇನ್ ಅಧ್ಯಕ್ಷ ಸಂಧಾನ ಮಾಡಿಕೊಳ್ಳಲು ಸಿದ್ಧವಿಲ್ಲ. ಹೀಗಾಗಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ.

ಯುದ್ಧ ನಿಲ್ಲಿಸೋದಿಲ್ಲ ರಷ್ಯಾ ಸೇನೆ

ಈಗಾಗಲೇ ರಷ್ಯಾ ಅಧ್ಯಕ್ಷ ಪುಟಿನ್ ಘೋಷಣೆ ಮಾಡಿದ್ದಂತೆ ಉಕ್ರೇನ್ ವಿರುದ್ಧ ನಡೆಯುತ್ತಿರುವ ಘೋರ ಯುದ್ಧ ಯಾವ ಕಾರಣಕ್ಕೂ ನಿಲ್ಲುವುದಿಲ್ಲ. ಅದರಲ್ಲೂ ಅಮೆರಿಕ & ನ್ಯಾಟೋ ಜೊತೆ ಸೇರಲು ಹೊರಟಿದ್ದ ಉಕ್ರೇನ್‌ಗೆ ಯಾವುದೆ ವಿನಾಯಿತಿ ಇರುವುದಿಲ್ಲ ಎಂದು ಪುಟಿನ್ ಘೋಷಣೆ ಮಾಡಿದ್ದಾರೆ. ಹೀಗಾಗಿ ರಷ್ಯಾ ಸೇನೆ ಕೂಡ ಅಲರ್ಟ್ ಆಗಿ ಹಗಲು & ರಾತ್ರಿ ಲೆಕ್ಕ ಮಾಡದೆ ದಾಳಿ ಮಾಡುತ್ತಿದೆ. ಹೀಗಾಗಿ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ ಉಕ್ರೇನ್ ಜನರು.

ಸಣ್ಣ ವಿಚಾರಕ್ಕೆ ಶುರುವಾಗಿದ್ದ ಯುದ್ಧ

ಒಟ್ನಲ್ಲಿ ಉಗುರಲ್ಲಿ ಹೋಗೋದಕ್ಕೆ ಕೊಡಲಿ ತಗೊಂಡ್ರು ಅನ್ನೋ ಮಾತು ಜನಜನಿತ. ಸಣ್ಣ, ಸಣ್ಣ ವಿಚಾರವನ್ನ ದೊಡ್ಡದು ಮಾಡುವವರಿಗೆ ಈ ಮಾತು ಹೇಳುತ್ತಾರೆ ಹಿರಿಯರು ಅದರಲ್ಲೂ ಉಕ್ರೇನ್ & ರಷ್ಯಾ ಯುದ್ಧ ವಿಚಾರದಲ್ಲಿ ಈ ಮಾತು ನಿಜವಾಗಿ ಹೋಗಿದೆ. ಚರ್ಚೆಯ ಮೂಲಕ ಕೂತು ಬಗೆಹರಿಸಿಕೊಳ್ಳುವ ವಿಚಾರದಲ್ಲಿ, ಎರಡೂ ದೇಶಗಳು ಕೈಯಲ್ಲಿ ಅಸ್ತ್ರಗಳನ್ನು ಹಿಡಿದು ಬಡಿದಾತ್ತಿವೆ. ಹೀಗಾಗಿ ಪರಿಸ್ಥಿತಿ ಕೂಡ ಕೈಮೀರಿ ಹೋಗುತ್ತಿದೆ.

40,000 People Are Suffering From Electricity Shortage In Ukraine After Russia Attack

ರಷ್ಯಾ & ಉಕ್ರೇನ್ ನಡುವೆ ಯುದ್ಧ ಶುರುವಾದ ಬಳಿಕ ಯುರೋಪ್‌ ದೇಶಗಳಲ್ಲಿ ನೆಮ್ಮದಿ ಹಾರಿ ಹೋಗಿದೆ. ಇಬ್ಬರ ನಡುವಿನ ಯುದ್ಧ ಎಲ್ಲಿ ನಮ್ಮನ್ನೂ ಸುಟ್ಟುಬಿಡುತ್ತೋ ಎಂಬ ಚಿಂತೆ ಅಲ್ಲಿ ಕಾಡುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಯುದ್ಧ ನಿಲ್ಲಿಸುವ ಪ್ರಯತ್ನಗಳು ಮಾತ್ರ ಶಿಸ್ತಿನಿಂದ ಸಾಗಿಲ್ಲ. ಹೀಗಾಗಿ ಮತ್ತೆ, ಮತ್ತೆ ರಷ್ಯಾ ಮತ್ತು ಉಕ್ರೇನ್ ಪರಸ್ಪರ ಭೀಕರ ದಾಳಿಗೆ ಮುಂದಾಗುತ್ತಿವೆ. ಇನ್ನ ರಷ್ಯಾ ನಡೆಸುತ್ತಿರುವ ದಾಳಿ ಉಕ್ರೇನ್ ಜನರಿಗೆ ಸಾಕಷ್ಟು ಭಯ ಹುಟ್ಟಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+