ವೀಸಾ ನಿಯಮ ಉಲ್ಲಂಘನೆ: ಲಂಡನ್ ನಲ್ಲಿ 38 ಭಾರತೀಯರ ಬಂಧನ

ವಿಚಾರಣೆಗೊಳಪಟ್ಟವರಲ್ಲಿ, 31 ಮಂದಿ ವೀಸಾ ಅವಧಿ ಮುಗಿದಿದ್ದರೂ ವಾಸ್ತವ್ಯ ಮುಂದುವರಿಸಿರುವುದು ಬೆಳಕಿಗೆ ಬಂದಿದೆ.

ಲಂಡನ್, ಏಪ್ರಿಲ್ 24: ವೀಸಾ ನಿಯಮದ ಉಲ್ಲಂಘನೆಯ ಆಧಾರದಲ್ಲಿ ಬ್ರಿಟನ್ ನಲ್ಲಿ ತಮ್ಮ ವಾಸ್ತವ್ಯ ಮುಂದುವರಿಸಿದ್ದ 38 ಭಾರತೀಯರನ್ನು ಬ್ರಿಟನ್ ಸರ್ಕಾರ ವಿಚಾರಣೆಗೊಳಪಡಿಸಿದೆ. ಇವರಲ್ಲಿ 9 ಮಹಿಳೆಯರೂ ಸೇರಿದ್ದಾರೆಂದು ಹೇಳಲಾಗಿದೆ.

ವೀಸಾ ನಿಯಮ ಉಲ್ಲಂಘನೆ ಆಧಾರದಲ್ಲಿ ಬ್ರಿಟನ್ ನ ಗೃಹ ಸಚಿವಾಲಯದ ತನಿಖಾಧಿಕಾರಿಗಳ ತಂಡವೊಂದು ಲಂಡನ್ ನಗರದ ಎಂ.ಕೆ. ಕ್ಲಾದಿಂಗ್ ಲಿಮಿಟೆಡ್ ಹಾಗೂ ಫ್ಯಾಷನ್ ಟೈಮ್ಸ್ ಯುಕೆ ಲಿಮಿಟೆಡ್ ಎಂಬ ಎರಡು ಕಂಪನಿಗಳ ಮೇಲೆ ದಾಳಿ ನಡೆಸಿ, 38 ಭಾರತೀಯರು ಹಾಗೂ ಆಫ್ಘನ್ ಪ್ರಜೆಯನ್ನು ವಶಕ್ಕೆ ಪಡೆಯಿತು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

38 Indians Detained In United Kingdom For Visa Breach In Factory Raids

ವಿಚಾರಣೆಗೊಳಪಟ್ಟವರಲ್ಲಿ, 31 ಮಂದಿ ವೀಸಾ ಅವಧಿ ಮುಗಿದಿದ್ದರೂ ವಾಸ್ತವ್ಯ ಮುಂದುವರಿಸಿದ್ದರೆ, 7 ಜನರು ವೀಸಾ ಇಲ್ಲದೇ ಬ್ರಿಟನ್ ಗೆ ಅಕ್ರಮ ಪ್ರವೇಶ ಪಡೆದಿರುವುದು, ಮತ್ತೊಬ್ಬರು ವೀಸಾದ ನಿಬಂಧನೆಗಳನ್ನು ಮೀರಿರುವುದು ಬೆಳಕಿಗೆ ಬಂದಿದೆ.

ಅಕ್ರಮವಾಗಿ ಬ್ರಿಟನ್ ನಲ್ಲಿ ನೆಲೆಸಿರುವ ಕೆಲವರು, ಲಂಡನ್ ನಲ್ಲಿರುವ ಕೆಲ ಕಾರ್ಖಾನೆಗಳಲ್ಲಿ ಉದ್ಯೋಗಿಗಳಾಗಿದ್ದರೆಂಬ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+