ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Winter Storm in US : ಅಮೆರಿಕಾ: ತೀವ್ರ ಚಳಿಗೆ 31 ಸಾವು, ವಿದ್ಯುತ್ ಇಲ್ಲದೆ ಪರದಾಡಿದ 2 ಲಕ್ಷ ಮಂದಿ

|
Google Oneindia Kannada News

ನ್ಯೂಯಾರ್ಕ್, ಡಿ. 26: ಅಮೆರಿಕಾದಲ್ಲಿ ಕ್ರೂರ ಚಳಿಗಾಲದ ಚಂಡಮಾರುತಕ್ಕೆ 31 ಮಂದಿ ಸಾವನಪ್ಪಿದ್ದಾರೆ. ಕ್ರಿಸ್‌ಮಸ್ ಆಚರಣೆಯಲ್ಲಿದ್ದ ಅಮೆರಿಕಾದ ಜನರನ್ನು ಈ ಭೀಕರ ಚಳಿ ಸಂಕಷ್ಟಕ್ಕೆ ನೂಕಿದೆ. ಜನರು ವರ್ಷದ ಕೊನೆಯ ದಿನಗಳನ್ನು ಇಂತಹ ಚಳಿಯಲ್ಲಿ ಕೊನೆಗೊಳಿಸುತ್ತಿದ್ದಾರೆ.

ತೀವ್ರ ಚಳಿ ಅಮೆರಿಕಾದ ಅನೇಕ ಭಾಗಗಳಲ್ಲಿ ಮತ್ತು ಕೆನಡಾದಲ್ಲಿ ವಿನಾಶವನ್ನು ಉಂಟುಮಾಡಿದೆ. ಅಮೆರಿಕಾದಲ್ಲಿ ಐದು ದಿನಗಳ ಅವಧಿಯ ಈ ಚಂಡಮಾರುತ ಮತ್ತು ಹಿಮಪಾತ, ಭೀಕರ ಗಾಳಿ ಜನರನ್ನು ಮನೆಯಿಂದ ಹೊರ ಬರದಂತೆ ಮಾಡಿವೆ ಎಂದು ವರದಿಗಳು ಉಲ್ಲೇಖಿಸಿವೆ.

Bengaluru Rains : ಬಂಗಾಳಕೊಲ್ಲಿಯ ವಾಯುಭಾರ ಕುಸಿತ: ಬೆಂಗಳೂರಲ್ಲಿ 2 ದಿನ ಮಳೆ ನಂತರ ಚಳಿ ವಾತಾವರಣ ಸೃಷ್ಟಿBengaluru Rains : ಬಂಗಾಳಕೊಲ್ಲಿಯ ವಾಯುಭಾರ ಕುಸಿತ: ಬೆಂಗಳೂರಲ್ಲಿ 2 ದಿನ ಮಳೆ ನಂತರ ಚಳಿ ವಾತಾವರಣ ಸೃಷ್ಟಿ

31 Dead In United Statess Brutal Winter Storm

ಪಶ್ಚಿಮ ನ್ಯೂಯಾರ್ಕ್‌ನ ಬಫಲೋದಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗಿದೆ. ಹಿಮದ ಬಿರುಗಾಳಿಯು ನಗರವನ್ನು ಮುಳುಗಿಸಿದ್ದು, ತುರ್ತು ಸೇವೆಗಳು ಕೂಡ ಅವಶ್ಯಕತೆ ಇರುವವರ ಬಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ.

ಭಾನುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಥಳೀಯ ನಿವಾಸಿಗಳು ಇನ್ನೂ ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿರುವುದಾಗಿ ತಿಳಿಸಿದ್ದಾರೆ.

31 Dead In United Statess Brutal Winter Storm

ಇತ್ತ, ಪೂರ್ವ ರಾಜ್ಯಗಳಾದ್ಯಂತ 2, 00,000 ಕ್ಕೂ ಹೆಚ್ಚು ಜನರು ಕ್ರಿಸ್ಮಸ್ ವೇಳೆಯಲ್ಲಿಯೇ ಮನೆಗಳಲ್ಲಿ ವಿದ್ಯುತ್ ಇಲ್ಲದೆ ಪರದಾಡಿದ್ದಾರೆ. ಹಬ್ಬದ ವೇಳೆ. ವರ್ಷಾಂತ್ಯಕ್ಕೆ ಹಾಕಿಕೊಳ್ಳುವ ತಮ್ಮ ರಜೆಯ ಪ್ರಯಾಣದ ಯೋಜನೆಗಳನ್ನು ಬಿಟ್ಟಿದ್ದಾರೆ.

ಭೀಕರ ಹವಾಮಾನದಿಂದಾಗಿ ವಾರಾಂತ್ಯದಲ್ಲಿ ಸಾವಿರಾರು ವಿಮಾನಗಳು ರದ್ದಾಗಿವೆ. ಮಂಜುಗಡ್ಡೆ ಮತ್ತು ಹಿಮದಿಂದ ಸುತ್ತುವರಿದ ಮನೆಗಳಲ್ಲಿ ನಿವಾಸಿಗಳು ಸಿಕ್ಕಿಬಿದ್ದಿದ್ದಾರೆ. ಒಂಬತ್ತು ರಾಜ್ಯಗಳಲ್ಲಿ ಮೂವತ್ತೊಂದು ಹವಾಮಾನ ಸಂಬಂಧಿತ ಸಾವುಗಳು ದೃಢಪಟ್ಟಿವೆ. ನ್ಯೂಯಾರ್ಕ್ ರಾಜ್ಯದಲ್ಲಿ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದೆಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಟ್ರ್ಯಾಕಿಂಗ್ ವೆಬ್‌ಸೈಟ್ Flightaware.com ಪ್ರಕಾರ, ದಶಕಗಳಲ್ಲಿ ಅತ್ಯಂತ ಭೀಕರವಾದ ಚಂಡಮಾರುತ ಉಂಟಾಗಿದ್ದು, ಭಾನುವಾರದಂದು 2,400 ಕ್ಕೂ ಹೆಚ್ಚು ಯುನೈಟೆಡ್ ಸ್ಟೇಟ್ಸ್ ವಿಮಾನಗಳನ್ನು ರದ್ದುಗೊಳಿಸಿಸಲಾಗಿದೆ. ಶನಿವಾರ 3,500 ಮತ್ತು ಶುಕ್ರವಾರ ಸುಮಾರು 6,000 ವಿಮಾನಗಳನ್ನು ರದ್ದುಗೊಳಿಸಲಾಗಿತ್ತು.

ಅಟ್ಲಾಂಟಾ, ಚಿಕಾಗೋ, ಡೆನ್ವರ್, ಡೆಟ್ರಾಯಿಟ್ ಮತ್ತು ನ್ಯೂಯಾರ್ಕ್‌ಗಳಲ್ಲಿ ಕ್ರಿಸ್‌ಮಸ್ ದಿನದಾದ್ಯಂತ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದರು. ಮತ್ತೆ ಕೆಲವರಿಗೆ ವಿಮಾನದಲ್ಲಿ ಭಾರಿ ವಿಳಂಬವಾಗಿತ್ತು.

ರಸ್ತೆಯ ತುಂಬಾ ಮಂಜುಗಡ್ಡೆ ತುಂಬಿಕೊಂಡಿರುವ ಕಾರಣ ಕ್ರಾಸ್-ಕಂಟ್ರಿ ಇಂಟರ್ಸ್ಟೇಟ್ 70 ಸೇರಿದಂತೆ ರಾಷ್ಟ್ರದ ಕೆಲವು ಜನನಿಬಿಡ ರಸ್ತೆ ಸಾರಿಗೆ ಮಾರ್ಗಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ರಸ್ತೆಗಳಿಗೆ ಹೋಗದಂತೆ ಚಾಲಕರಿಗೆ ಎಚ್ಚರಿಕೆ ನೀಡಲಾಗಿದೆ.

English summary
31 weather-related deaths reported in us on Christmas Day. 2 Lakh people without electricity. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X