Get Updates
Get notified of breaking news, exclusive insights, and must-see stories!

ಶಾಲೆ ಮೇಲೆ ಬಾಂಬ್ ಎಸೆದ ರಕ್ಕಸರು, 30 ವಿದ್ಯಾರ್ಥಿಗಳ ಸಾವು

ಟ್ರಿಪೋಲಿ (ಲಿಬಿಯಾ), ಜನವರಿ 06: ಲಿಬಿಯಾದ ಮಿಲಿಟರಿ ಶಾಲೆಯೊಂದರ ಮೇಲೆ ನಡೆದ ವಾಯುದಾಳಿಯಿಂದ 30 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

ಲಿಬಿಯಾ ರಾಷ್ಟ್ರೀಯ ಸೇನೆಯು ಈ ವಾಯುದಾಳಿ ನಡೆಸಿದೆ ಎಂದು ಸ್ಥಳೀಯ ಸರ್ಕಾರ ಆರೋಪಿಸಿದ್ದು, ದಾಳಿಯಲ್ಲಿ 30 ಮಂದಿ ಸಾವನ್ನಪ್ಪಿದ್ದು 33 ಮಂದಿ ಗಾಯಗೊಂಡಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಕೆಲವು ಶಿಕ್ಷಕರು ಸಾವನ್ನಪ್ಪಿದ್ದಾರೆ.

ಲಿಬಿಯಾದಲ್ಲಿ ಸ್ವಯಂಘೊಷಿತ 'ಲಿಬಿಯಾ ರಾಷ್ಟ್ರೀಯ ಸೇನೆ' ಮತ್ತು ಯುಎನ್ ಬೆಂಬಲಿತ ಸರ್ಕಾರದ ನಡುವೆ ಘರ್ಷಣೆ ನಡೆಯುತ್ತಿದ್ದು, ಲಿಬಿಯಾ ರಾಜಧಾನಿ ಟ್ರಿಪೋಲಿ ವಶಪಡಿಸಿಕೊಳ್ಳಲು ಲಿಬಿಯಾ ರಾಷ್ಟ್ರೀಯ ಸೇನೆ ಸೇನೆ ಪ್ರಯತ್ನಿಸುತ್ತಿದೆ.

30 Students Killed In Libiya Bomb Attack

ಲಿಬಿಯಾ ರಾಜಧಾನಿ ವಶಪಡಿಸಿಕೊಳ್ಳಲು ಕೆಲವು ದಿನಗಳ ಹಿಂದಷ್ಟೆ ಲಿಬಿಯಾ ರಾಷ್ಟ್ರೀಯ ಸೇನೆಯ ಜನರಲ್ ಖಲಿಫಾ ಹಿಫ್ಲರ್ 'ಅಂತಿಮ ಯುದ್ಧ'ಕ್ಕೆ ಕರೆ ನೀಡಿದ್ದರು, ಅದರ ಪರಿಣಾಮವಾಗಿಯೇ ಇಂದು ಶಾಲೆಯ ಮೇಲೆ ಬಾಂಬ್ ದಾಳಿ ಮಾಡಲಾಗಿದೆ.

ಬಾಂಬ್ ದಾಳಿಯು ಟ್ರಿಪೋಲಿಯ ಹಬಾಬಾ ಎಂಬ ಜಾಗದಲ್ಲಿದ್ದ ಮಿಲಿಟರಿ ಶಾಲೆಯ ಮೇಲೆ ನಡೆದಿದೆ. ಗಾಯಗೊಂಡವರನ್ನು ಸ್ಥಳೀಯ ವೈದ್ಯಕೀಯ ಶಿಬಿರಕ್ಕೆ ದಾಖಲಿಸಲಾಗಿದ್ದು, ಚಿಕಿತ್ಸೆ ಸಾಗಿದೆ. ಟ್ರಿಪೋಲಿ ಕಳೆದ ಕೆಳೆದ ಕೆಲವು ತಿಂಗಳಿನಿಂದ ಘರ್ಷಣೆಗೆ ತುತ್ತಾಗಿದೆ.

ಜನರಲ್ ಹಿಫ್ಲರ್‌ಗೆ ರಷ್ಯಾ, ಫ್ರಾನ್ಸ್‌, ಜೋರ್ಡನ್, ಯುಎಇ ಬೆಂಬಲ ನೀಡಿದ್ದರೆ, ವಿಶ್ವಸಂಸ್ಥೆ ಬೆಂಬಲಿತ ಸ್ಥಳೀಯ ಸರ್ಕಾರಕ್ಕೆ ಟರ್ಕಿ, ಕತಾರ್, ಇಟಲಿ ಬೆಂಬಲ ನೀಡುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+