ಪಾಕಿಸ್ತಾನದಲ್ಲಿ ರೈಲು ಗುರಿ ಮಾಡಿಕೊಂಡು ಸ್ಫೋಟ; ಮೂವರು ಸಾವು

ಇಸ್ಲಾಮಾಬಾದ್ (ಪಾಕಿಸ್ತಾನ), ಮಾರ್ಚ್ 17: ಪ್ರಯಾಣಿಕರ ರೈಲನ್ನು ಗುರಿ ಮಾಡಿಕೊಂಡು ನಡೆದ ಸ್ಫೋಟದಲ್ಲಿ ಮೂವರು ಮೃತಪಟ್ಟು, ಆರು ಮಂದಿ ಗಾಯಗೊಂಡ ಘಟನೆ ಬಲೂಚಿಸ್ತಾನ ಪ್ರಾಂತ್ಯದಲ್ಲಿ ವರದಿ ಆಗಿದೆ. ಡೇರಾ ಮುರಾದ್ ಜಮಾಲಿ ಪ್ರದೇಶದಲ್ಲಿ ಜಾಫರ್ ಎಕ್ಸ್ ಪ್ರೆಸ್ ಗುರಿ ಮಾಡಿಕೊಂಡ ದಾಳಿಕೋರರು, ರೈಲು ಹಳಿಯ ಮೇಲೆ ಸುಧಾರಿತ ಸ್ಫೋಟಕ ಇರಿಸಿ, ಸಿಡಿಸಿದ್ದಾರೆ.

ಜಾಫರ್ ಎಕ್ಸ್ ಪ್ರೆಸ್ ರೈಲು ರಾವಲ್ಪಿಂಡಿಯಿಂದ ಕ್ವೆಟ್ಟಾಗೆ ತೆರಳುತ್ತಿತ್ತು. ಈ ಪ್ರಯಾಣಿಕರ ರೈಲು ಡೇರಾ ಮುರಾದ್ ಜಮಾಲಿಗೆ ತಲುಪಿದಾಗ ದೊಡ್ಡ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿದೆ. ಆ ವೇಳೆ ಮೂವರು ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

3 killed train blast in Pakistan

ಪೊಲೀಸರು ಮತ್ತು ಇತರ ತನಿಖಾ ಸಂಸ್ಥೆಗಳ ಅಧಿಕಾರಿಗಳು ಘಟನೆ ಸ್ಥಳವನ್ನು ತಲುಪಿದ್ದಾರೆ. ಈ ದುರ್ಘಟನೆ ಬಗ್ಗೆ ಸದ್ಯಕ್ಕೆ ತನಿಖೆ ಜಾರಿಯಲ್ಲಿದೆ. ಈ ಘಟನೆಯ ವಿವರಗಳನ್ನು ಜಿಲ್ಲಾ ಪೊಲೀಸ್ ಅಧಿಕಾರಿ ಇರ್ಫಾನ್ ಬಶೀರ್ ಎಂಬುವವರು ಮಾಧ್ಯಮಗಳ ಜತೆಗೆ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+