ಅಲ್ಜೀರಿಯಾ ಮಿಲಿಟರಿ ವಿಮಾನ ಪತನ, 257 ಜನ ಬಲಿ

Subscribe to Oneindia Kannada

ಅಲ್ಜೆರ್ಸ್, ಏಪ್ರಿಲ್ 11: ಅಲ್ಜೀರಿಯಾದ ರಾಜಧಾನಿ ಅಲ್ಜೆರ್ಸ್ ಸಮೀಪದ ಬೌಫಾರಿಕ್ ವಾಯುನೆಲೆಯಲ್ಲಿ ಸಂಭವಿಸಿದ ಭೀಕರ ವಿಮಾನ ಅವಘಡದಲ್ಲಿ 257 ಜನರು ಸಾವನ್ನಪ್ಪಿದ್ದಾರೆ.

ಇಲ್ಯೂಷಿನ್ ಐಎಲ್-76 ವಿಮಾನ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ಹೊತ್ತೊಯ್ಯುತ್ತಿತ್ತು. ಈ ವಿಮಾನವು ಬೌಫಾರಿಕ್ ವಾಯುನೆಲೆಯಿಂದ ಟೇಕ್ ಆಫ್ ಕೆಲವೇ ಕ್ಷಣಗಳಲ್ಲಿ ಪತನವಾಗಿದೆ ಎಂದು ಅಲ್ಜೀರಿಯಾದ ಮಾಧ್ಯಮಗಳು ವರದಿ ಮಾಡಿವೆ.

ನೇಪಾಳದಲ್ಲಿ ಬಾಂಗ್ಲಾದೇಶಿ ವಿಮಾನ ಪತನ, 76 ಮಂದಿ ಸಾವು

ಪತನವಾದ ಜಾಗದಲ್ಲಿ ಭಾರೀ ಹೊಗೆ ಎದ್ದರುವ ಚಿತ್ರಗಳನ್ನು ಇಲ್ಲಿಯ ಸ್ಥಳೀಯ ಮಾಧ್ಯಮಗಳು ತೋರಿಸಿವೆ.

ವಿಮಾನ ಬೌಫಾರಿಕ್ ನಿಂದ ಪಶ್ಚಿಮ ಅಲ್ಜೀರಿಯಾದ ಬೆಕರ್ ನಗರದತ್ತ ಪ್ರಯಾಣ ಹೊರಟಿತ್ತು. ನಂತರ ಇದು ಅಪಘಾತಕ್ಕೆ ಗುರಿಯಾಗಿದೆ.

257 killed in Algeria military plane crash

ಅಲ್ಜೀರಿಯಾದ ಇತಿಹಾಸದಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತ ಇದಾಗಿದೆ. ಈ ಹಿಂದೆ 2013ರಲ್ಲಿ ತಮನ್ರಸೆಟ್ ನಲ್ಲಿ ಸಂಭವಿಸಿದ ಅಪಘಾತದಲ್ಲಿ 102 ಜನರು ಸಾವನ್ನಪ್ಪಿದ್ದರು. ಆದರೆ ಈ ಅಪಘಾತಕ್ಕಿಂತ ದೊಡ್ಡ ಅವಘಡ ಸಂಭವಿಸಿದ್ದು 257 ಜನರು ಸಾವನ್ನಪ್ಪಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least 257 people have been killed after a military plane crashed near the Boufarik airbase outside the Algerian capital, Algiers, according to Algerian state television.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ