ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಪ್ತಚರ ವರದಿ, ಬ್ರಿಟನಿನಲ್ಲಿದ್ದಾರಂತೆ 23,000 ಭಯೋತ್ಪಾದಕರು!

By ವಿಕಾಸ್ ನಂಜಪ್ಪ
|
Google Oneindia Kannada News

ಲಂಡನ್, ಮೇ 29: ಆತಂಕಕಾರಿ ಬೆಳವಣಿಯೆಲ್ಲಿ ಬ್ರಿಟನ್ನಿನಾದ್ಯಂತ 23,000 ಶಂಕಿತ ಭಯೋತ್ಪಾದಕರಿದ್ದಾರೆ ಎಂದು ಗುಪ್ತಚರ ಇಲಾಖೆ ಹೇಳಿದೆ. ಭೀಕರ ಮ್ಯಾಂಚೆಸ್ಟರ್ ದಾಳಿಯಲ್ಲಿ 22 ಜನ ಸಾವಿಗೀಡಾದ ನಂತರ ಇಂಥಹದ್ದೊಂದು ಎಚ್ಚರಿಕೆಯನ್ನು ಗುಪ್ತಚರ ಇಲಾಖೆ ನೀಡಿದೆ.

ವರದಿಗಳ ಪ್ರಕಾರ ಲಿಬಿಯಾ ಮೂಲದ ಸಲ್ಮಾನ್ ಅಬೆದಿ ಮೇಲೆ ಗುಪ್ತಚರ ಇಲಾಖೆ ನಿಗಾ ಇಟ್ಟಿದೆ. ಇದೀಗ ಆತನ ವಿವರಗಳನ್ನು ಬಹಿರಂಗಪಡಿಸುವಂತೆ ಅಲ್ಲಿನ ಗುಪ್ತಚರ ಇಲಾಖೆ 'ಎಂಐ5' ಮೇಲೆ ಒತ್ತಡ ಹೆಚ್ಚಾಗಿದೆ. ಏತನ್ಮಧ್ಯೆ ಸರಕಾರಿ ಸಂಸ್ಥೆಗಳು ಮಾಧ್ಯಮಗಳಿಗೆ ಮಾಹಿತಿ ನೀಡಿ ಭಯೋತ್ಪಾದಕ ಮನಸ್ಥಿತಿಯ 23,000 ಜನರು ದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದೆ.

23,000 terror suspects at large across Britain says Intelligence

ಇವರಲ್ಲಿ 3,000 ಜನರು ಅಪಾಯಕಾರಿಗಳು ಎಂದು ವಿಂಗಡಣೆ ಮಾಡಲಾಗಿದ್ದು ಇವರ ಮೇಲೆ ತನಿಖಾ ಸಂಸ್ಥೆಗಲು ನಿರಂತರ ನಿಗಾ ಇಟ್ಟಿವೆ. ಇವರ ಮೇಲೆ ನಿಗಾ ಇಡಲೆಂದೇ 500 ಕಾರ್ಯಾಚರಣೆಗಳನ್ನು ಪೊಲೀಸರು ಮತ್ತು ಗುಪ್ತಚರ ಇಲಾಖೆಗಳು ಮುನ್ನಡೆಸುತ್ತಿವೆ. ಇನ್ನುಳಿದ 20,000 ಜನ ಕಡಿಮೆ ಅಪಾಯಕಾರಿಗಳು ಎಂದು ವಿಂಗಡಣೆ ಮಾಡಲಾಗಿದೆ.

ಇನ್ನು ಮ್ಯಾಂಚೆಸ್ಟರ್ ಸ್ಪೋಟಕ್ಕೆ ಸಂಬಂಧಿಸಿದಂತೆ 14 ಸ್ಥಳಗಳಲ್ಲಿ ಪೊಲೀಸರು ಇನ್ನೂ ಹುಡುಕಾಟ ಮುಂದುವರಿಸಿದ್ದು 11 ಜನ ಶಂಕಿತರನ್ನು ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಮ್ಯಾಂಚೆಸ್ಟರ್ ಪೊಲೀಸರು, "ದಾಳಿಯ ತನಿಖೆಗೆ ಸಂಬಂಧಿಸಿದಂತೆ ವೇಗವಾದ ಪ್ರಗತಿ ಸಾಧಿಸಿದ್ದೇವೆ. ಈ ಸಂಕೀರ್ಣ ಪ್ರಕರಣ ಭೇದಿಸಲು ಬ್ರಿಟನಿನ ಗುಪ್ತಚರ ಇಲಾಖೆ ಜತೆ ಕೈಜೋಡಿಸಿದ್ದೇವೆ. ಈಗಾಗಲೇ ಶಂಕಿತ 11 ಜನರನ್ನು ಕಸ್ಟಡಿಗೆ ಪಡೆಯಲಾಗಿದೆ," ಎಂದು ಹೇಳಿಕೆ ನೀಡಿದ್ದಾರೆ.

English summary
In a worrying development, intelligence agencies say that there are nearly 23,000 terror suspects at large across Britain. The report comes a few days after the deadly Manchester attack in which 22 persons died.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X