ಚಿತ್ರಗಳಲ್ಲಿ ಹಿಡಿದಿಟ್ಟ ಮೆಕ್ಸಿಕೋ ಕಂಪನ; ಮನಕಲಕುವ ಆಕ್ರಂದನ

ಮೆಕ್ಸಿಕೋದ ರಾಜಧಾನಿ ಮೆಕ್ಸಿಕೋ ಸಿಟಿಯಲ್ಲೇ 117 ಜನರು ಮೃತಪಟ್ಟಿದ್ದಾರೆ. ಇದರಲ್ಲಿ 21 ಶಾಲಾ ಮಕ್ಕಳೂ ಸೇರಿದ್ದಾರೆ. ನಗರದಲ್ಲಿರುವ ಪ್ರಾಥಮಿಕ ಹಂತದ ಶಾಲೆ ಕುಸಿದ ಪರಿಣಾಮವಾಗಿ ಅದರಲ್ಲಿದ್ದ 21 ಮಕ್ಕಳ ಶಾಲೆಯಡಿ ಸಮಾಧಿಯಾಗಿದ್ದಾರೆ.ಮೆಕ್ಸಿಕೋ ಸಿಟಿಯಲ್ಲಿನ ಕಟ್ಟಡವೊಂದು ಕುಸಿದು ಅದರಲ್ಲಿದ್ದ ಸುಮಾರು 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ಸೆ. 8ರಂದು ಮೆಕ್ಸಿಕೊ ದೇಶದ ದಕ್ಷಿಣ ಭಾಗದಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ 90ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಇದಾಗಿ, 11 ದಿನಗಳಲ್ಲೇ ಈಗ ಸಂಭವಿಸಿರುವ ಮತ್ತೊಂದು ಭೂಕಂಪ ದೇಶಕ್ಕೆ ಭಾರೀ ಹಾನಿ ಮಾಡಿದೆ.

ಈ ದೇಶದ ಅತಿ ಡೆಡ್ಲಿಯೆಸ್ಟ್ ಭೂಕಂಪ ಸಂಭವಿದ್ದು 1985ರಲ್ಲಿ. ಆಗ ಸುಮಾರು 10 ಸಾವಿರ ಜನರು ಮೃತಪಟ್ಟಿದ್ದರು. ಆ ಭೂಕಂಪದ ನಂತರ, ಅಂಥ ಪ್ರಬಲ ಭೂಕಂಪ ಸಂಭವಿಸುತ್ತಿರುವುದು ಈಗಲೇ ಎನ್ನುತ್ತಿದ್ದಾರೆ ಇಲ್ಲಿನ ನಾಗರಿಕರು.

ಸ್ಥಳೀಯ ಮಾಧ್ಯಮಗಳ ಪ್ರಕಾರ, ಹಲವಾರು ಕುಟುಂಬಗಳು ಬೀದಿಗೆ ಬಿದ್ದಿದ್ದು ನೆರವಾಗಿ ಸರ್ಕಾರದ ಮೊರೆ ಹೋಗಿವೆ. ಸರ್ಕಾರವೂ ಸೂಕ್ತವಾಗಿ ಸ್ಪಂದಿಸುತ್ತಿದ್ದು ಎಲ್ಲರಿಗೂ ವಾಸ್ತವ್ಯ ಹಾಗೂ ಊಟ-ತಿಂಡಿಯ ವ್ಯವಸ್ಥೆ ಮಾಡುತ್ತಿದೆ ಎಂದು ಹೇಳಿವೆ.

ರಾಜಧಾನಿಯಲ್ಲೇ ಅತಿ ಹೆಚ್ಚು

ರಾಜಧಾನಿಯಲ್ಲೇ ಅತಿ ಹೆಚ್ಚು

ಮೆಕ್ಸಿಕೋ ಸಿಟಿಯಲ್ಲೇ 117 ಸಾವು, ಪುಬೇಲಾದಲ್ಲಿ 32, ಮೊರೆಲೋಸ್ ನಲ್ಲಿ 55, ಮೆಕ್ಸಿಕೋ ಸ್ಟೇಟ್ ನಲ್ಲಿ 12, ಗುರೆರೆರೊದಲ್ಲಿ 1 , ಹಾಗೂ ಉಳಿದ ಪ್ರಾಂತ್ಯಗಳಲ್ಲಿ 7 ಜನರು ಮೃತಪಟ್ಟಿದ್ದಾರೆ. ಸಾವಿರಾರು ಜನರು ಗಾಯಾಳುಗಳಾಗಿದ್ದು, ಒಕ್ಸಾಕಾ ಹಾಗೂ ಚಿಯಾಪಾಸ್ ನಲ್ಲಿ ಇಂಥವರ ಸಂಖ್ಯೆ ಹೆಚ್ಚಾಗಿದೆ.

20 ಮಿಲಿಯನ್ ಸ್ವಯಂ ಸೇವಕರು

20 ಮಿಲಿಯನ್ ಸ್ವಯಂ ಸೇವಕರು

ಮೆಕ್ಸಿಕೋದಲ್ಲಿ ಹೀಗೆ ಪ್ರಳಯ ತಾಂಡವವಾಡುತ್ತಿದ್ದರೂ, ಧೃತಿಗೆಡದ ಅನೇಕ ಜನರು ತಮ್ಮ ಬೀದಿಗಿಳಿದು ಪರಿಹಾರ ಕಾರ್ಯಗಳಲ್ಲಿ ಪೊಲೀಸರಿಗೆ, ಅಗ್ನಿಶಾಮಕ ದಳ ಹಾಗೂ ಸೈನಿಕರಿಗೆ ಕೈ ಜೋಡಿಸುತ್ತಿದ್ದಾರೆ. ಸುಮಾರು 20 ಮಿಲಿಯನ್ ನಷ್ಟು ಸ್ವಯಂ ಸೇವಕರು ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ. ಇಡೀ ಭೂಮಿಯಲ್ಲಿ ಇಂಥವರ ಸಂತತಿ ಹೆಚ್ಚಲಿ.

ಸಾವಿರಾರು ವಾಟ್ಸಾಪ್ ಸಂದೇಶಗಳ ರವಾನೆ

ಸಾವಿರಾರು ವಾಟ್ಸಾಪ್ ಸಂದೇಶಗಳ ರವಾನೆ

ಈ ಪ್ರಬಲ ಭೂಕಂಪದ ನಡುವೆಯೂ ಅಂತರ್ಜಾಲ ಬಂದ್ ಆಗಿಲ್ಲದಿರುವುದು ತೆರವು ಕಾರ್ಯಾಚರಣೆಯಲ್ಲಿ ನಿರತರಾಗಿರುವವರಿಗೆ ಅನುಕೂಲವಾಗಿದೆ. ವಾಟ್ಸಾಪ್ ಹಾಗೂ ಫೇಸ್ ಬುಕ್ ಗಳ ಮೂಲಕ ತಾವು ಸಿಲುಕಿರುವ ಸ್ಥಳಗಳ ಬಗ್ಗೆ ಮಾಹಿತಿಗಳನ್ನು ರವಾನಿಸುತ್ತಿದ್ದಾರೆ. ಇಂಥ ಸಾವಿರಾರು ಮೆಸೇಜ್ ಗಳು ಹರಿದಾಡುತ್ತಿದ್ದು, ಸ್ವಯಂ ಸೇವಕರು, ಸೈನಿಕರು, ಪೊಲೀಸರು, ಅಗ್ನಿಶಾಮಕ ದಳದವರು ಸಂತ್ರಸ್ತರನ್ನು ತಲುಪಲು ಸಹಾಯವಾಗುತ್ತಿವೆ.

ಮೈದಾನಗಳಲ್ಲಿ ವಾಸ್ತವ್ಯಕ್ಕೆ ಅವಕಾಶ

ಮೈದಾನಗಳಲ್ಲಿ ವಾಸ್ತವ್ಯಕ್ಕೆ ಅವಕಾಶ

ಮೆಕ್ಸಿಕೋ ಸಿಟಿಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಷೇರು ಮಾರುಕಟ್ಟೆಯನ್ನು ಭೂಕಂಪವಾದ ನಂತರ ಕೆಲ ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಹೆಚ್ಚು ಹಾನಿಯಾಗದ ಪಾರ್ಕ್ ಗಳಲ್ಲಿ, ಮೈದಾನಗಳಲ್ಲಿ, ಕ್ರೀಡಾಂಗಣಗಳಲ್ಲಿ, ರಸ್ತೆ ಬದಿಗಳ ವಿಶಾಲವಾಗಿರುವ ಪುಟ್ ಪಾತ್ ಗಳಲ್ಲಿ ನಿರಾಶ್ರಿತರಿಗೆ ವಾಸ್ತವ್ಯದ ಅನುಕೂಲವನ್ನು ಕಲ್ಪಿಸಲಾಗಿದೆ.

ನೆರವಿನ ಮಹಾಪೂರ

ನೆರವಿನ ಮಹಾಪೂರ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೆಯು ಸೇರಿದಂತೆ ಜಗತ್ತಿನ ನಾನಾ ದೇಶಗಳ ಗಣ್ಯರು ಮೆಕ್ಸಿಕೋ ಭೂಕಂಪದ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ. ಹಲವಾರು ದೇಶಗಳಿಂದ ನೆರವಿನ ಮಹಾಪೂರವೇ ಹರಿದುಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+