ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಯಾರ್ಕಿನಲ್ಲಿ ಭೀಕರ ಅಪಘಾತ, 20 ಮಂದಿ ದುರ್ಮರಣ

|
Google Oneindia Kannada News

ನ್ಯೂಯಾರ್ಕ್, ಅಕ್ಟೋಬರ್ 07: ಐಷಾರಾಮಿ ಕಾರು (limousine) ಜತೆ ಇತರೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ, 20 ಮಂದಿ ಮೃತಪಟ್ಟ ಘಟನೆ ನಡೆದಿದೆ.

ಘಟನಾ ಸ್ಥಳಕ್ಕೆ ಫೆಡರಲ್ ತನಿಖಾಧಿಕಾರಿಗಳು ಧಾವಿಸುತ್ತಿದ್ದಾರೆ. ಓರ್ವ ವ್ಯಕ್ತಿಯ 30ನೇ ಹುಟ್ಟುಹಬ್ಬದ ಸಂಭ್ರಮಾಚರಣೆಗಾಗಿ ಅವರೆಲ್ಲ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

20 Dead in Limousine Crash in Upstate New York

ಐಷಾರಾಮಿ ಉದ್ದದ ಕಾರಿನ ಜತೆ ಮತ್ತೊಂದು ವಾಹನ ಡಿಕ್ಕಿ ಹೊಡೆದಿದೆ. ಸ್ಕೋಹರಿಯ ಆಪಲ್ ಬರೇಲ್ ಕೌಂಟ್ರಿ ಸ್ಟೋರ್ ಹೊರಗಡೆ ಈ ಘಟನೆ ನಡೆದಿದೆ.

ಮಳಿಗೆ ಮುಂಭಾಗದ ಪಾರ್ಕಿಂಗ್ ಸ್ಥಳದಲ್ಲಿ ನೆರೆದಿದ್ದ ಅನೇಕ ಗ್ರಾಹಕರ ಮೇಲೆ ಐಷಾರಾಮಿ ಕಾರು ಹರಿದಿದ್ದರಿಂದ ಹಲವರ ಸಾವು ಸಂಭಿಸಿದೆ ಎಂದು ಮಳಿಗೆಯ ಮ್ಯಾನೇಜರ್ ಜೆಸ್ಸಿಕಾ ಕಿರ್ಬಿ ಹೇಳಿದ್ದಾರೆ.

ಸುಮಾರು 60 ಮೈಲಿ ಪ್ರತಿ ಗಂಟೆ ವೇಗದಲ್ಲಿ ಇಳಿಜಾರಿನತ್ತ ಐಷಾರಾಮಿ ಕಾರು ಧಾವಿಸಿ ಬಂತು, ವೇಗ ನಿಯಂತ್ರಿಸದ ಕಾರಣ, ಇತರೆ ವಾಹನಗಳಿಗೆ ಡಿಕ್ಕಿ ಹೊಡೆಯಿತು. ಅನೇಕ ಮಂದಿ ತೀವ್ರವಾಗಿ ಗಾಯಗೊಂಡಿರಬಹುದು. ಅಪಘಾತ ನಡೆದಾಗ ಭಾರಿ ಸದ್ದಾಯಿತು, ಘಟನೆ ಬಗ್ಗೆ ತಿಳಿದ ಕೂಡಲೇ 911ಗೆ ಕರೆ ಮಾಡಿದೆ ಎಂದು ಜೆಸ್ಸಿಕಾ ಅವರು ಹೇಳಿದ್ದಾರೆ.

English summary
A two-vehicle collision involving a limousine has left 20 dead in upstate New York, the New York State Police said on Sunday. Federal investigators were heading to the scene.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X