ಪಾಕ್ ಬಂಧಿತ ಭಾರತದ ಮುಸ್ಲಿಂ ಧರ್ಮಗುರುಗಳು 20ರಂದು ಸ್ವದೇಶಕ್ಕೆ

ಪಾಕಿಸ್ತಾನದಲ್ಲಿ ಅಡ್ಡಾಡಿಕೊಂಡಿದ್ದ ಈ ಧರ್ಮಗುರುಗಳನ್ನು ಅನುಮಾನಿಸಿದ್ದ ಪಾಕಿಸ್ತಾನದ ಗುಪ್ತಚರ ಇಲಾಖೆಯು ಇವರನ್ನು ಬಂಧಿಸಿತ್ತು ಎಂದು ಹೇಳಲಾಗಿತ್ತು ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು.

ನವದೆಹಲಿ, ಮಾರ್ಚ್ 19: ಎರಡು ದಿನಗಳ ಹಿಂದೆ ಪಾಕಿಸ್ತಾನದಲ್ಲಿ ಕಾಣೆಯಾಗಿದ್ದ ಭಾರತ ಮೂಲದ ಮುಸ್ಲಿಂ ಧರ್ಮಗುರುಗಳನ್ನು ಪತ್ತೆ ಹಚ್ಚಲಾಗಿದ್ದು, ಶೀಘ್ರವೇ ಅವರನ್ನು ಮಾರ್ಚ್ 20ರ ಹೊತ್ತಿಗೆ ಭಾರತಕ್ಕೆ ಕಳುಹಿಸಲಾಗುವುದು ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಭಾರತಕ್ಕೆ ತಿಳಿಸಿದೆ.

ನವದೆಹಲಿಯ ಹಜ್ರತ್ ನಿಜಾಮುದ್ದೀನ್ ದರ್ಗಾದ ಇಬ್ಬರು ಧರ್ಮಗುರುಗಳು ಇತ್ತೀಚೆಗೆ ಪಾಕಿಸ್ತಾನಕ್ಕೆ ತೆರಳಿದ್ದರು. ಆದರೆ, ಅವರು ಪಾಕಿಸ್ತಾನದಲ್ಲಿ ಇಳಿದ ಕೆಲವೇ ಗಂಟೆಗಳಲ್ಲಿ ನಾಪತ್ತೆಯಾಗಿದ್ದರು.

2 missing Sufi clerics located, returns india by march 20: Pak tells India

ಈ ಬಗ್ಗೆ ಕಾಳಜಿ ತೋರಿದ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪಾಕಿಸ್ತಾನದಲ್ಲಿರುವ ವಿದೇಶಾಂಗ ಸಚಿವಾಲಯಕ್ಕೆ ವಿಷಯ ತಿಳಿಸಿದ್ದರು. ಇದೀಗ, ವಿದೇಶಾಂಗ ಸಚಿವಾಲಯವು ಧರ್ಮಗುರುಗಳನ್ನು ಪತ್ತೆಹಚ್ಚಿದ್ದು ಅವರನ್ನು ಭಾರತಕ್ಕೆ ಕಳುಹಿಸುವ ಭರವಸೆಯನ್ನು ನೀಡಿದೆ.

ಆದರೆ, ಪಾಕಿಸ್ತಾನದಲ್ಲಿ ಅಡ್ಡಾಡಿಕೊಂಡಿದ್ದ ಈ ಧರ್ಮಗುರುಗಳನ್ನು ಅನುಮಾನಿಸಿದ್ದ ಪಾಕಿಸ್ತಾನದ ಗುಪ್ತಚರ ಇಲಾಖೆಯು ಇವರನ್ನು ಬಂಧಿಸಿತ್ತು ಎಂದು ಹೇಳಲಾಗಿತ್ತು ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+