• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುದ್ಧ ವಿಮಾನಗಳ ಆರ್ಭಟ, ಚೀನಾ-ತೈವಾನ್ ಯುದ್ಧ ಫಿಕ್ಸ್..?

|

ಚೀನಾ ಬುಡಕ್ಕೆ ಬೆಂಕಿ ಬಿದ್ದಿದೆ. ತೈವಾನ್ ದ್ವೀಪರಾಷ್ಟ್ರಕ್ಕೆ ಅಮೆರಿಕದ ವಿದೇಶಾಂಗ ಇಲಾಖೆಯ ಸಹಾಯಕ ಕಾರ್ಯದರ್ಶಿ ಭೇಟಿ ನೀಡಿದ್ದೇ ತಡ ಡ್ರ್ಯಾಗನ್ ನಾಡು ಕೆಂಡವಾಗಿದೆ. ಇದೇ ಕಾರಣಕ್ಕೆ ತೈವಾನ್ ಗಡಿಯತ್ತ ಚೀನಾ ಯುದ್ಧ ವಿಮಾನಗಳನ್ನು ನುಗ್ಗಿಸಿದೆ. ಈ ಮೂಲಕ ಚೀನಾ ತೈವಾನ್ ವಿರುದ್ಧ ಯುದ್ಧ ಸಾರುವ ಭಂಡ ಧೈರ್ಯ ತೋರಿಸುತ್ತಿದೆ.

ಅಂದಹಾಗೆ ತೈವಾನ್‌ ಪಾಲಿಗೆ 'ಮಿಸ್ಟರ್‌ ಡೆಮಾಕ್ರಸಿ' ಎಂದೇ ಕರೆಸಿಕೊಳ್ಳುವ ಲೀ ಟೆಂಗ್‌ ಹೂ ಅವರಿಗೆ ಅಂತಿಮ ಗೌರವ ಸಲ್ಲಿಸುವ ಸಮಾರಂಭವೇ ಈಗ ಚೀನಾದ ಉರಿಗೆ ಕಾರಣವಾಗಿದೆ. ಇದೇ ಸಮಾರಂಭದಲ್ಲಿ ಅಮೆರಿಕ ವಿದೇಶಾಂಗ ಇಲಾಖೆಯ ಸಹಾಯಕ ಕಾರ್ಯದರ್ಶಿ ಕೀತ್‌ ಕ್ರಾಚ್‌ ಭಾಗವಹಿಸಿದ್ದರು.

ದುರಹಂಕಾರಿ ಚೀನಾಗೆ ಎಚ್ಚರಿಕೆ ಕೊಟ್ಟ ಜರ್ಮನಿ..!

ಆದರೆ ಈ ಹಿಂದಿನಿಂದಲೂ ತೈವಾನ್ ನನ್ನ ಭೂಮಿ ಅಂತಾ ಚೀನಾ ವಾದಿಸುತ್ತಿದ್ದು, ತನ್ನ ಶತ್ರು ಅಮೆರಿಕದ ಅಧಿಕಾರಿಯೊಬ್ಬರು ತೈವಾನ್‌ಗೆ ಭೇಟಿ ನೀಡಿರುವುದನ್ನು ಸಹಿಸುತ್ತಿಲ್ಲ. ಹೀಗಾಗಿ ಕೀತ್‌ ಕ್ರಾಚ್‌ ಭೇಟಿ ಚೀನಾ ಒಡಲಲ್ಲಿ ಕಿಚ್ಚು ಹೊತ್ತಿಸಿದ್ದು, ಸತತ 2ನೇ ದಿನವೂ ತನ್ನ ಯುದ್ಧ ವಿಮಾನಗಳನ್ನು ತೈವಾನ್‌ ಕಡೆಗೆ ಕಳುಹಿಸುವ ಮೂಲಕ, ಯುದ್ಧಕ್ಕೆ ಚೀನಾ ಪ್ರಚೋದನೆ ನೀಡುತ್ತಿದೆ.

ಮೊದಲು 18, ಈಗ 19 ವಿಮಾನ..!

ಮೊದಲು 18, ಈಗ 19 ವಿಮಾನ..!

ಲೀ ಟೆಂಗ್‌ ಹೂ ಅಂತಿಮ ಗೌರವ ಸಮಾರಂಭದಲ್ಲಿ ಅಮೆರಿಕದ ವಿದೇಶಾಂಗ ಇಲಾಖೆಯ ಉನ್ನತ ಅಧಿಕಾರಿ ಭಾಗವಹಿಸಿದ ತಕ್ಷಣ ತೈವಾನ್‌ ಜಲಸಂಧಿ ಮಧ್ಯಭಾಗಕ್ಕೆ 18 ಯುದ್ಧ ವಿಮಾನಗಳನ್ನು ಚೀನಾ ರವಾನಿಸಿತ್ತು. ಶನಿವಾರ ಬೀಜಿಂಗ್‌ನಿಂದ ಮತ್ತೆ 19 ಯುದ್ಧ ವಿಮಾನಗಳು ತೈವಾನ್‌ನತ್ತ ನುಗ್ಗಿ ಬಂದಿವೆ. ಚೀನಿ ವಿಮಾನಗಳು ನುಗ್ಗಿ ಬಂದಿರುವುದನ್ನು ತೈವಾನ್ ಕೂಡ ಸ್ಪಷ್ಟಪಡಿಸಿದೆ. ತೈವಾನ್‌ನತ್ತ ನುಗ್ಗಿದ 19 ಯುದ್ಧ ವಿಮಾನಗಳಲ್ಲಿ 2 ಬಾಂಬರ್‌ ವಿಮಾನಗಳೂ ಸೇರಿದ್ದವು ಎಂಬುದು ಆತಂಕವನ್ನು ಹೆಚ್ಚಿಸಿದೆ. ಹೀಗಾಗಿ ಚೀನಾದ ಚಟುವಟಿಕೆಗಳ ಮೇಲೆ ನಿಗಾ ಇಡಲು ತೈವಾನ್ ವಾಯು ರಕ್ಷಣಾ ಕ್ಷಿಪಣಿಯನ್ನು ನಿಯೋಜಿಸಿದೆ.

ಮಿಲಿಟರಿ ಪಂಚ್ ಕೊಟ್ಟಿತ್ತು ತೈವಾನ್..!

ಮಿಲಿಟರಿ ಪಂಚ್ ಕೊಟ್ಟಿತ್ತು ತೈವಾನ್..!

ಚೀನಾ ಹಾಗೂ ತೈವಾನ್ ಸಂಘರ್ಷ ಕೆಲ ತಿಂಗಳಿಂದ ಉಗ್ರ ಸ್ವರೂಪ ಪಡೆಯುತ್ತಿದೆ. ಚೀನಾ ಪದೇ ಪದೆ ತೈವಾನ್ ವಿಚಾರ ಕೆದಕುವಾಗಲೇ, ಜುಲೈನಲ್ಲಿ ತೈವಾನ್ ಮಿಲಿಟರಿ ದಿಟ್ಟತನ ಪ್ರದರ್ಶಿಸಿತ್ತು. ಚೀನಾ ಕಡೆಗೆ ಮುಖ ಮಾಡಿರುವ ತೈಚುಂಗ್‌ನ ದ್ವೀಪವೊಂದರ ಕಡಲ ತೀರದ ಬಳಿ ತೈವಾನ್‌ ಸೇನೆ ಸಮರಾಭ್ಯಾಸ ನಡೆಸಿತ್ತು. ಸಮರಾಭ್ಯಾಸದ ವೇಳೆ ತೈವಾನ್‌ನ ಯುದ್ಧ ವಿಮಾನಗಳು, ಹೆಲಿಕಾಪ್ಟರ್ಸ್ ಸಮುದ್ರಕ್ಕೆ ಕ್ಷಿಪಣಿ ಹಾಗೂ ಬಾಂಬ್‌ಗಳನ್ನು ಉಡಾಯಿಸುವ ಮೂಲಕ ಚೀನಾಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದವು. ಇದು ತೈವಾನ್ ಸೇನೆಯ ಶಕ್ತಿಪ್ರದರ್ಶನಕ್ಕೆ ವೇದಿಕೆಯಾಗಿತ್ತು.

Fact Check: ಚೀನಾದ ಸುಖೋಯ್ ಯುದ್ಧ ವಿಮಾನವನ್ನು ಉರುಳಿಸಿದ ತೈವಾನ್

 ಕಮ್ಯುನಿಸ್ಟರ ಪಕ್ಕದಲ್ಲೇ ಪ್ರಜಾಪ್ರಭುತ್ವ..!

ಕಮ್ಯುನಿಸ್ಟರ ಪಕ್ಕದಲ್ಲೇ ಪ್ರಜಾಪ್ರಭುತ್ವ..!

ತೈವಾನ್ ಚೀನಾದಷ್ಟು ದೊಡ್ಡ ದೇಶವಲ್ಲ, ಆದರೂ ತೈವಾನ್ ಗಂಡೆದೆ ಮೆಚ್ಚಲೇಬೇಕು. ತನ್ನದೇ ಸರ್ಕಾರ ಹೊಂದಿರುವ ತೈವಾನ್‌ನಲ್ಲಿ 2.40 ಕೋಟಿ ಜನ ವಾಸಿಸುತ್ತಿದ್ದಾರೆ. ಇಲ್ಲಿ ಕೆಲ ದಶಕಗಳ ಹಿಂದೆ ರಾಜಕೀಯ ಸ್ಥಿರತೆ ಇರಲಿಲ್ಲ. 2 ದಶಕಗಳಿಂದ ಈಚೆಗೆ ಅಂದರೆ 1996ರ ನಂತರ ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲಿ ಜಾರಿಗೆ ಬಂದಿದೆ. ಅದಕ್ಕೂ ಮೊದಲು ಹಲವು ದೇಶಗಳು, ಇದೇ ತೈವಾನ್‌ನ ಹರಿದು-ಹಂಚಿ ಆಳ್ವಿಕೆ ನಡೆಸಿದ್ದವು. ಹೀಗೆ ಕಮ್ಯುನಿಸ್ಟ್ ಚೀನಾ ಪಕ್ಕದಲ್ಲೇ ತೈವಾನ್ ಪ್ರಜಾಪ್ರಭುತ್ವ ದೇಶವಾಗಿ ಬೆಳೆದು ನಿಂತಿದೆ.

ಚೀನಾ, ತೈವಾನ್ ಮಧ್ಯೆ ನಿರಂತರ ಘರ್ಷಣೆ

ಚೀನಾ, ತೈವಾನ್ ಮಧ್ಯೆ ನಿರಂತರ ಘರ್ಷಣೆ

ಆರಂಭದಲ್ಲಿ ತೈವಾನ್ ಡಚ್ಚರ ವಸಾಹತಾಗಿತ್ತು. ನಂತರ ಜಪಾನ್ ಆಡಳಿತ ಮಾಡಿತ್ತು. 2ನೇ ಮಹಾಯುದ್ಧದ ಬಳಿಕ ಚೀನಾದ ರಾಷ್ಟ್ರೀಯವಾದಿ ಪಕ್ಷದ ಚಿಯಾಂಗ್ ಕೈ-ಶೇಕ್ ಅಧ್ಯಕ್ಷರಾದರು. 1949ರಲ್ಲಿ ಅಂತರ್ಯುದ್ಧ ನಡೆದಾಗ ಮಾವೋ ನೇತೃತ್ವದ ಕಮ್ಯುನಿಸ್ಟ್ ಸೇನೆ ಚಿಯಾಂಗ್ ಪಡೆಯನ್ನ ಹೊರದಬ್ಬಿತ್ತು. ತನ್ನ ಬೆಂಬಲಿಗರ ಜೊತೆ ಚಿಯಾಂಗ್ ಬಂದು ಸೇರಿದ್ದು ಇದೇ ತೈವಾನ್ ಅನ್ನ. ಮಾವೋ ವಶದಲ್ಲಿದ್ದ ಚೀನಾ ಮುಖ್ಯ ಭೂಭಾಗ ಕಮ್ಯೂನಿಸ್ಟರಿಗೆ ನೆಲೆ ಕೊಟ್ಟಿದ್ದರೆ, ತೈವಾನ್ ‘ರಿಪಬ್ಲಿಕ್ ಆಫ್ ಚೀನಾ' ಆಗಿ ಉಳಿಯಿತು. ನಂತರ ಚೀನಾ ಮತ್ತು ತೈವಾನ್ ಮಧ್ಯೆ ನಿರಂತರ ಘರ್ಷಣೆಗಳು ನಡೆದಿದ್ದವು.

ಚೀನಾ ವಿರುದ್ಧ ತೈವಾನ್ ಅಸ್ತ್ರ ಪ್ರಯೋಗಿಸಿದ ಅಮೆರಿಕ..!

ಬದಲಾವಣೆ ತಂದಿದ್ದೇ ‘ಮಿಸ್ಟರ್ ಡೆಮಾಕ್ರಸಿ’..!

ಬದಲಾವಣೆ ತಂದಿದ್ದೇ ‘ಮಿಸ್ಟರ್ ಡೆಮಾಕ್ರಸಿ’..!

ಲೀ ಟೆಂಗ್ ಹೂಯಿ ಇರದೇ ಇದ್ದಿದ್ದರೆ ತೈವಾನ್‌ನ ಸ್ವಾಭಿಮಾನದ ಉಳಿವಿನ ಪ್ರಶ್ನೆ ಉದ್ಭವಿಸುತ್ತಲೇ ಇರಲಿಲ್ಲ. ಏಕೆಂದರೆ ಇಷ್ಟೊತ್ತಿಗೆ ಹಾಂಕಾಂಗ್ ರೀತಿಯಲ್ಲೇ ತೈವಾನ್ ಕೂಡ ಸಾಮ್ರಾಜ್ಯಶಾಹಿ ಚೀನಾ ಕೈಕೆಳಗೆ ನರಳಿ ಬದುಕಬೇಕಾಗಿತ್ತು. ಆದರೆ ತೈವಾನ್‌ನ ‘ಮಿಸ್ಟರ್ ಡೆಮಾಕ್ರಸಿ' ಎಂದು ಕರೆಸಿಕೊಳ್ಳುವ ಲೀ ಟೆಂಗ್ ಹೂಯಿ, 90ರ ದಶಕದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದರು. ಇವರ ಪರಿಶ್ರಮದಿಂದ 1996ರಲ್ಲಿ ತೈವಾನ್ ಸಂಪೂರ್ಣ ಪ್ರಜಾಪ್ರಭುತ್ವದತ್ತ ತಿರುಗಿತು.

ಚೀನಾಗೆ ಬೆನ್ನಿಗೆ ಗುನ್ನಾ ಇಡಲು ಹೊರಟ ಅಮೆರಿಕ..!

1996ರಲ್ಲಿ ನಡೆದ ತೈವಾನ್‌ನ ಮೊಟ್ಟಮೊದಲ ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ಲೀ ಗೆದ್ದು ಬೀಗಿದರು. ಈ ಮೂಲಕ ಚೀನಾಗೆ ಸರಿಯಾಗೇ ಬುದ್ಧಿ ಕಲಿಸಿದ್ದವರು ಲೀ. ಆದರೆ 97 ವರ್ಷದ ಲೀ ಜುಲೈ 30ರಂದು ನಿಧನರಾಗಿದ್ದರು. ಬಳಿಕ ಚೀನಾ ಸರ್ಕಾರದ ಮುಖವಾಣಿ ‘ಗ್ಲೋಬಲ್ ಟೈಮ್ಸ್' ಲೀ ಸಾವಿನ ಬಗ್ಗೆ ಅಹಿತಕರ ವರದಿ ಪ್ರಕಟಿಸಿತ್ತು. ಈಗ ಮತ್ತೆ ಚೀನಾ ಕ್ಯಾತೆ ತೆಗೆದಿರೋದು ಅಮೆರಿಕ ಸೇರಿದಂತೆ ಚೀನಾದ ಶತ್ರು ರಾಷ್ಟ್ರಗಳನ್ನ ಕೆರಳಿಸಿದೆ.

English summary
19 Chinese jets crossed Taiwan border again. Taiwan's air force scrambled fighters, and deployed air defence missile system to monitor the activities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X