ತೈವಾನ್ ನಲ್ಲಿ ಹಳಿ ತಪ್ಪಿದ ರೈಲು, ಕನಿಷ್ಠ 17 ಮಂದಿ ಸಾವು, 132 ಗಾಯಾಳು

ಯಿಲಾನ್, ಅಕ್ಟೋಬರ್ 21: ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ, ಉರುಳಿದ ಪರಿಣಾಮ ಕನಿಷ್ಠ 17 ಮಂದಿ ಸಾವನ್ನಪ್ಪಿದ ಘಟನೆ ತೈವಾನ್ ದೇಶದ ಕಡಲ ಮಾರ್ಗದಲ್ಲಿ ಸಂಭವಿಸಿದೆ. ಕನಿಷ್ಠ ಹದಿನೇಳು ಮಂದಿ ಮೃತಪಟ್ಟಿದ್ದು, 132 ಮಂದಿ ಗಾಯಾಳುಗಳಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಘಟನೆ ತೈವಾನ್ ದೇಶದ ಈಶಾನ್ಯ ಯಿಲಾನ್ ನಲ್ಲಿ ಸಂಭವಿಸಿದೆ. ರೈಲಿನೊಳಗೆ ಯಾರಾದರೂ ಪ್ರಯಾಣಿಕರು ಜೀವಂತವಾಗಿ ಸಿಲುಕಿದ್ದಾರಾ ಎಂಬ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಅವಶೇಷಗಳ ಅಡಿಯಿಂದ ಸಾಕಷ್ಟು ಸಂಖ್ಯೆಯಲ್ಲಿ ಮೃತ ದೇಹಗಳನ್ನು ಹೊರ ತೆಗೆಯಲಾಗುತ್ತಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಪ್ರಾಥಮಿಕ ಕಂಡುಬಂದಿರುವ ಫೋಟೋಗಳ ಪ್ರಕಾರ, ಪುಯಾಮ ಎಕ್ಸ್ ಸಂಪೂರ್ಣ ಹಳಿ ತಪ್ಪಿ, ಅಡ್ಡಾದಿಡ್ಡಿಯಾಗಿ ನಿಂತಿರುವುದು ಕಂಡುಬರುತ್ತದೆ. ರೈಲಿನ ಎಂಟೂ ಬೋಗಿಗಳು ಹಳು ತಪ್ಪಿವೆ. ಕ್ಸಿನ್ಮಾ ನಿಲ್ದಾಣದಲ್ಲಿ ಅಡ್ಡಡ್ಡ ವಾಲಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Train Accident

ಮತ್ತೊಬ್ಬ ಪ್ರಯಾಣಿಕರ ಪ್ರಕಾರ, ರೈಲು ಬಹಳ ಕಾಲ ನಡುಗುತ್ತಲೇ ಸಾಗುತ್ತಿತ್ತು. ಸ್ಥಳೀಯ ಕಾಲ ಮಾನ 4.50ರಲ್ಲಿ ಈ ಘಟನೆ ನಡೆದಿದೆ. ಇದಕ್ಕೆ ಕಾರಣ ಏನು ಎಂಬುದು ಮಾತ್ರ ಗೊತ್ತಾಗಿಲ್ಲ. 366 ಮಂದಿಯು ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಇದು ದಕ್ಷಿಣದ ತೈತುಂಗ್ ಗೆ ತೆರಳುತ್ತಿತ್ತು. ರಕ್ಷಣಾ ಕಾರ್ಯಾಚರಣೆಗಾಗಿ 120 ಸೈನಿಕರನ್ನು ಕಳುಹಿಸಲಾಗಿದೆ ಎಂದು ರಕ್ಷಣ ಸಚಿವಾಲಯ ತಿಳಿಸಿದೆ.

ತೈವಾನ್ ನ ರಾಷ್ಟ್ರಾಧ್ಯಕ್ಷರು ಮಾತನಾಡಿ, ಈ ಅಪಘಾತವನ್ನು ಭಾರೀ ದುರಂತ ಎಂದು ಕರೆದಿದ್ದಾರೆ. ದುರಂತಕ್ಕೆ ಈಡಾದವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+