ಮಂಗಳ ಅಂಗಳಕ್ಕೆ ಹಾರಲು ಲಕ್ಷಾಂತರ ಭಾರತೀಯರಿಗೆ ಟಿಕೆಟ್!
ನ್ಯೂಯಾರ್ಕ್, ನವೆಂಬರ್ 09: 2024 ರಲ್ಲಿ ಮಂಗಳ ಗ್ರಹಕ್ಕೆ ಯಾತ್ರೆ ಮಾಡಲಿರುವ 100 ಜನರ ಪಟ್ಟಿಯಲ್ಲಿ ಮೂವರು ಭಾರತೀಯರಿಗೆ ಸ್ಥಾನ ಸಿಕ್ಕಿರುವ ಸುದ್ದಿ ತಿಳಿದಿರಬಹುದು. ಆದರೆ, 2018ರಲ್ಲಿ ಮಂಗಳಕ್ಕೆ ತೆರಳಲಿರುವ ನಾಸಾ ನೌಕೆಗೆ ಭಾರತದಿಂದ ಲಕ್ಷಾಂತರ ಮಂದಿ ಟಿಕೆಟ್ ಬುಕ್ ಮಾಡಿದ್ದಾರೆ.
ಸರಿ ಸುಮಾರು 1,38,899 ಮಂದಿ ಭಾರತೀಯರು ಮಂಗಳಕ್ಕೆ ತೆರಳಲು ಟಿಕೆಟ್ ಬುಕ್ ಮಾಡಿದ್ದಾರೆ. 2018ರ ಮೇ 5ರಂದು ನಾಸಾದ ಇನ್ ಸೈಟ್ (Interior Exploration using Seismic Investigations, Geodesy and Heat Transport) ಬಾಹ್ಯಾಕಾಶ ಯೋಜನೆಯ ನೌಕೆ ಮಂಗಳನಲ್ಲಿಗೆ ತೆರಳಲಿದೆ. ಈ ನೌಕೆಗೆ ಲಕ್ಷಾಂತರ ಮಂದಿ ಟಿಕೆಟ್ ಪಡೆದಿದ್ದಾರೆ.

ಮಂಗಳನ ಅಂಗಳಕ್ಕೆ ಹೋಗಲು ಸಾಧ್ಯವೇ?: ನಾಸಾದ ಅಂತರ್ಜಾಲ ತಾಣಕ್ಕೆ ತೆರಳಿ ಹೆಸರು ನೋಂದಣಿಸಿ, ಅಲ್ಲಿ ಕೇಳುವ ಮಾಹಿತಿ ದಾಖಲಿಸಿ ಆಯ್ಕೆಯಾದವರಿಗೆ ಒಂದು ಆನ್ ಲೈನ್ ಡಿಜಿಟಲ್ ಬೋರ್ಡಿಂಗ್ ಪಾಸ್ ನೀಡಲಾಗುತ್ತದೆ.
ಹೀಗೆ ಆಯ್ಕೆಯಾದ ಲಕ್ಷಾಂತರ ಮಂದಿಯ ಹೆಸರುಗಳನ್ನು ಸಿಲಿಕಾನ್ ವೇಫರ್ ಮೈಕ್ರೋಚಿಪ್ ವೊಂದರಲ್ಲಿ ಸಂಗ್ರಹಿಸಲಾಗುತ್ತದೆ. ನಂತರ ಅದನ್ನು ಬಾಹ್ಯಾಕಾಶ ನೌಕೆಯಲ್ಲಿರಿಸಿ ಮಂಗಳನಲ್ಲಿಗೆ ಕಳುಹಿಸಿಕೊಡಲಾಗುತ್ತದೆ.

ನಾಸಾ ಇಲ್ಲಿ ತನಕ 2,429,807 ಅರ್ಜಿಗಳನ್ನು ವಿಶ್ವದೆಲ್ಲೆಡೆಯಿಂದ ಪಡೆದುಕೊಂಡಿತ್ತು. ಯುನೈಟೆಡ್ ಸ್ಟೇಟ್ಸ್ ನಿಂದ 6,76,773 ಅರ್ಜಿ ಬಂದಿದ್ದರೆ, ಚೀನಾದಿಂದ 2,62,752 ಅರ್ಜಿಗಳು ಬಂದಿದ್ದು, ಭಾರತ ಮೂರನೇ ಸ್ಥಾನದಲ್ಲಿದೆ.
ನಿಜಕ್ಕೂ ಆಯ್ಕೆಯಾದವರು: ಕೇರಳದ ಪಾಲಕ್ಕಾಡ್ ನಿವಾಸಿ ಶ್ರದ್ಧಾ ಪ್ರಸಾದ್ , ಫ್ಲೋರಿಡಾದಲ್ಲಿರುವ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದ ಡಾಕ್ಟರೇಟ್ ಪಡೆದಿರುವ ತರಣಜಿತ್ ಸಿಂಗ್ ಭುಟಿಯಾ, ದುಬೈನಲ್ಲಿ ನೆಲೆಸಿರುವ ರಿತಿಕಾ ಸಿಂಗ್ ಮಂಗಳನಲ್ಲಿಗೆ ತೆರಳಲು ಆಯ್ಕೆಯಾದವರಾಗಿದ್ದಾರೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications