100 ಮಿಲಿಯನ್ ವರ್ಷಗಳಷ್ಟು ಹಳೆಯ ವೀರ್ಯ ಪತ್ತೆ..!
ಮ್ಯಾನ್ಮಾರ್‌ನಲ್ಲಿ ಪಳಿಯುಳಿಕೆ ಶಾಸ್ತ್ರಜ್ಞರು ಅತ್ಯಂತ ಪುರಾತನವಾದ ಪ್ರಾಣಿಯ ವೀರ್ಯ ಪತ್ತೆಹಚ್ಚಿದ್ದಾರೆ. ಈ ವೀರ್ಯದ ಆಯಸ್ಸು ಸುಮಾರು 100 ಮಿಲಿಯನ್ ಅಂದರೆ 10 ಕೋಟಿ ವರ್ಷ ಎನ್ನಲಾಗುತ್ತಿದೆ. ಸೀಗಡಿ ಜಾತಿಯ ಜಲಚರ(ostracod)ದಲ್ಲಿ ಪುರಾತನ ವೀರ್ಯ ಪತ್ತೆಯಾಗಿದೆ. ಸೀಗಡಿ ಜಾತಿಯ ಹೆಣ್ಣು ಜಲಚರದ ದೇಹದಲ್ಲಿ ವೀರ್ಯದ ಪಳಿಯುಳಿಕೆ ಪತ್ತೆಯಾಗಿರುವುದಾಗಿ ಚೀನಾ ಮೂಲದ ಪಳಿಯುಳಿಕೆ ಶಾಸ್ತ್ರಜ್ಞರು ಮಾಹಿತಿಯನ್ನ ನೀಡಿದ್ದಾರೆ.
ಮ್ಯಾನ್ಮಾರ್‌ನಲ್ಲಿ ಅಧ್ಯಯನ ನಡೆಸುವ ಸಂದರ್ಭದಲ್ಲಿ ಮರದ ಅಂಟು ಅಥವಾ ಮರದ ರಾಳದಲ್ಲಿ ಸಿಲುಕಿರುವ ಜೀವಿ ಪತ್ತೆಯಾಗಿತ್ತು. ಈ ಅಂಟನ್ನು ಹೆಚ್ಚಿನ ಅಧ್ಯಯನಕ್ಕೆ ಒಳಪಡಿಸಿದಾಗ ಶಾಕಿಂಗ್ ಸಂಗತಿ ಬಯಲಾಗಿದೆ. ಈವರೆಗೆ ಸುಮಾರು 17 ಮಿಲಿಯನ್ ವರ್ಷಗಳಷ್ಟು ಹಳೆಯದಾದ ವೀರ್ಯದ ಪಳಿಯುಳಿಕೆ ಪತ್ತೆಹಚ್ಚಿದ್ದೇ ಸಾಧನೆಯಾಗಿತ್ತು.
ಆದರೆ ಇದೀಗ ಸುಮಾರು 100 ಮಿಲಿಯನ್ ವರ್ಷಗಳಷ್ಟು ಪುರಾತನವಾದ ವೀರ್ಯ ಪತ್ತೆಯಾಗಿದೆ. ಸೀಗಡಿ ಜಾತಿಯ ಜಲಚರಗಳು ಭೂಮಿ ಮೇಲೆ 500 ಮಿಲಿಯನ್ ವರ್ಷಗಳಿಂದ ವಾಸ ಇವೆ. ಈಗ ಪತ್ತೆಯಾಗಿರುವ ವೀರ್ಯ ಕೂಡ ಸೀಗಡಿ ಜಾತಿಯ ಜಲಚರದ ದೇಹದಲ್ಲಿ ಸಿಕ್ಕಿದೆ. ಈ ಹೆಣ್ಣು ಜಲಚರ ಗಂಡಿನ ಜೊತೆಗಿನ ಮಿಲನದ ಕೆಲವೇ ಕ್ಷಣಗಳಲ್ಲಿ ಮರದ ಅಂಟಿನಲ್ಲಿ ಸಿಲುಕಿ ಮೃತಪಟ್ಟಿದೆ. ಹೀಗಾಗಿ ಸೀಗಡಿ ಜಾತಿ ಗಂಡು ಜಲಚರದ ವೀರ್ಯ ಪಳಿಯುಳಿಕೆಯಲ್ಲಿ ಸಿಕ್ಕಿದೆ ಎಂದಿದ್ದಾರೆ ಸಂಶೋಧಕರು.

ಭೂಮಿಯ ಇತಿಹಾಸ ಅರಿಯಲು ಸಾಧ್ಯ
ಈಗಿನ ಸಂಶೋಧನೆ ಜಲಚರಗಳ ಬಗ್ಗೆ ಕುತೂಹಲಕಾರಿ ಮಾಹಿತಿ ಹೊರಹಾಕಿದೆ. ಭೂಮಿ ಮೇಲೆ ಮೊದಲು ಜನ್ಮತಾಳಿದ್ದು ಏಕಕೋಶ ಜೀವಿಗಳು, ಇದರ ನಂತರ ಜಲಚರಗಳೇ ಈ ಭೂಮಿಯನ್ನು ಬಹುವರ್ಷಗಳ ಕಾಲ ಆಳಿದ್ದವು. ಆದರೆ ಭೂಮಿ ಮೇಲೆ ನೀರು ಕ್ರಮೇಣ ಕಡಿಮೆಯಾದ ಕಾರಣ ಅಥವಾ ವಿಕಸನದ ಪರಿಣಾಮ ಜಲಚರಗಳು ಭೂಮಿ ಮೇಲೆ ಬಂದು ನೆಲೆಸಲು ರೂಢಿಸಿಕೊಂಡವು ಎಂಬ ವಾದ ವಿಜ್ಞಾನಿಗಳದ್ದಾಗಿದೆ. ಎಲ್ಲಾ ವಾದ-ಪ್ರತಿವಾದಗಳಿಗೆ ಈಗ ಸಿಕ್ಕಿರುವ ಅತ್ಯಂತ ಪುರಾತನ ವೀರ್ಯದ ಪಳಿಯುಳಿಕೆ ಉತ್ತರ ನೀಡಬಲ್ಲದು.
ಈಗಲೂ ಕಾಣಬಹುದು ಈ ಜೀವಿಯನ್ನು..!
ಅಂದಹಾಗೆ ವಿಜ್ಞಾನಿಗಳಿಗೆ ವೀರ್ಯದ ಪಳಿಯುಳಿಕೆ ಸಿಕ್ಕಿರುವ ಸೀಗಡಿ ಜಾತಿಯ ಜಲಚರಗಳನ್ನು ನಾವು ಈಗಲೂ ಭೂಮಿ ಮೇಲೆ ಕಾಣಬಹುದು. ಈ ಜೀವಿಗಳು ದಪ್ಪ ಚರ್ಮ ಅಥವಾ ಒರಟು ಚರ್ಮವನ್ನು ಹೊಂದಿವೆ. ಸುಮಾರು 500 ಮಿಲಿಯನ್ ವರ್ಷದಿಂದ ಭೂಮಿಯ ಮೇಲೆ ಬದುಕಿ ಉಳಿದಿವೆ. ವಿಶೇಷ ಎಂದರೆ ಈ ಜಾತಿಯ ಜಲಚರಗಳ ವೀರ್ಯ ಅವುಗಳ ದೇಹಕ್ಕಿಂತಲೂ ದೊಡ್ಡದಾಗಿ ಇರುತ್ತದೆ. ಭೂಮಿ ಮೇಲೆ ಅನೇಕ ಸಂದರ್ಭದಲ್ಲಿ ವಿಪತ್ತು ಸಂಭವಿಸಿದರೂ ಇವು ಬದುಕುಳಿದಿವೆ. ಹೀಗಾಗಿ ಈ ಜಾತಿಯ ಜಲಚರಗಳ ಕುರಿತು ವಿಜ್ಞಾನಿಗಳಿಗೆ ಮೊದಲಿನಿಂದಲೂ ಕುತೂಹಲವಿತ್ತು. ಹೀಗಾಗಿ ಸದ್ಯದ ಸಂಶೋಧನೆ ವಿಜ್ಞಾನಿಗಳ ಕುತೂಹಲದ ದಿಕ್ಕನ್ನೇ ಬದಲಿಸುವ ಸಾಧ್ಯತೆ ಇದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications