ಜಾಗತಿಕವಾಗಿ ಕೊವಿಡ್19 ಪ್ರಕರಣಗಳ ಸಂಖ್ಯೆ 1ಕೋಟಿ!
ಬೆಂಗಳೂರು, ಜೂನ್ 28: ಜಾಗತಿಕ ಮಹಾಮಾರಿ ಕೊವಿಡ್19 ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆತಂಕ ಮೂಡಿಸಿದೆ. ಜೊತೆಗೆ ವಿಶ್ವದೆಲ್ಲೆಡೆ ವ್ಯಾಪ್ತಿಸಿರುವ ಸೋಂಕು ದಿನದಿಂದ ದಿನಕ್ಕೆ ಬಲಿ ಪಡೆಯುತ್ತಲೇ ಇದೆ. ಭಾನುವಾರದ ಎಣಿಕೆಯಂತೆ ಕೊವಿಡ್ 19 ಸೋಂಕು ಪ್ರಕರಣಗಳ ಸಂಖ್ಯೆ 1 ಕೋಟಿಗೇರಿದ್ದು, 5 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
ಜೂನ್ 25ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 10,082,618 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 501,309 ಕ್ಕೇರಿದೆ. ಒಟ್ಟಾರೆ, 5,458,523 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 4,122,786 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 57,748 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ.
1 ಲಕ್ಷಕ್ಕೂ ಅಧಿಕ ಸೋಂಕಿತರಿರುವ ಪಟ್ಟಿಯಲ್ಲಿ ಜರ್ಮನಿ, ಟರ್ಕಿ, ಮೆಕ್ಸಿಕೋ(2 ಲಕ್ಷ ದಾಟಿದೆ), ಪಾಕಿಸ್ತಾನ, ಸೌದಿ ಅರೇಬಿಯಾ, ಫ್ರಾನ್ಸ್, ಬಾಂಗ್ಲಾದೇಶ, ಕೆನಡಾ, ದಕ್ಷಿಣ ಆಫ್ರಿಕಾ ದೇಶಗಳಿವೆ. ಮೃತರ ಸಂಖ್ಯೆಯಲ್ಲಿ ಟಾಪ್ 10 ರಾಷ್ಟ್ರಗಳಲ್ಲದೆ 5ಸಾವಿರಕ್ಕೂ ಅಧಿಕ ಸಾವು ಕಂಡಿರುವ ದೇಶಗಳ ಪೈಕಿ ಜರ್ಮನಿ(9,026), ರಷ್ಯಾ (8,969), ಪೆರು(9,135), ಕೆನಡಾ(8,516), ನೆದರ್ಲೆಂಡ್ಸ್(6,105), ಸ್ವೀಡನ್ (5,280) ಕಾಣಿಸಿಕೊಂಡಿವೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 2,596,537 ಪ್ರಕರಣಗಳು
ಬ್ರೆಜಿಲ್: 1,315,941
ರಷ್ಯಾ: 627,646
ಭಾರತ: 529,577
ಯುಕೆ: 310,250
ಸ್ಪೇನ್: 295,549
ಪೆರು: 275,989
ಚಿಲಿ: 267,766
ಇಟಲಿ: 240,136
ಇರಾನ್: 220,180
ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ128,152
ಬ್ರೆಜಿಲ್: 57,103
ಯುಕೆ: 43,514
ಇಟಲಿ: 34,716
ಫ್ರಾನ್ಸ್: 29,778
ಸ್ಪೇನ್: 28,341
ಮೆಕ್ಸಿಕೋ: 26,381
ಭಾರತ: 16,103
ಇರಾನ್: 10,364
ಬೆಲ್ಜಿಯಂ: 9,732












Click it and Unblock the Notifications