Lok Sabha Election: ಉತ್ತರ ಭಾರತ ಆಳುವುದು ಮತ್ತೆ ಮೋದಿನಾ? ಕಾಂಗ್ರೆಸ್‌ಗೆ ಇದೆಯಾ ಅವಕಾಶ?
ಬೆಂಗಳೂರು, ಫೆಬ್ರವರಿ.29: ಲೋಕಸಭಾ ಚುನಾವಣೆಗೆ ಇನ್ನೊಂದು ವಾರದಲ್ಲಿ ವೇಳಾಪಟ್ಟಿ ಘೋಷಣೆಯಾಗಲಿದೆ. ಮೂರನೇ ಬಾರಿ ಅಧಿಕಾರಕ್ಕೆ ಬರಲು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ತಯಾರಾಗುತ್ತಿದೆ. ಇತ್ತ, ಏನೇ ಆದರೂ ಕಳೆದ ಬಾರಿಗಿಂತ ಹೆಚ್ಚಿನ ಸೀಟುಗಳನ್ನು ಪಡೆಯಲು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿ ಕೂಟ ಕೂಡ ಸಕತ್ ಆಗಿಯೇ ತಯಾರಾಗುತ್ತಿದೆ.
ಎಲ್ಲಾ ಪಕ್ಷಗಳು ಪ್ರಚಾರಕ್ಕೆ ಸಿದ್ಧರಾಗಿದ್ದು, ಈ ನಡುವೆ ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ ಎಂಬ ಬಗ್ಗೆ ರಾಜಕೀಯ ಊಹಾಪೋಹಗಳು ಶುರುವಾಗಿದೆ. ಶೀಘ್ರದಲ್ಲೇ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ಈ ಮಧ್ಯೆ, Zee News ಮತ್ತು MATRIZE ಫೆಬ್ರವರಿ 5 ರಿಂದ ಫೆಬ್ರವರಿ 27 ರ ನಡುವೆ ಸಮೀಕ್ಷೆ ನಡೆಸಿದ್ದು, ಸಮೀಕ್ಷೆ ಫಲಿತಾಂಶ ಬಿಡುಗಡೆ ಮಾಡಿದೆ.

Zee News-Matriz ಸಮೀಕ್ಷೆಯಲ್ಲಿ ಬಿಜೆಪಿಗೆ ಗೆಲುವು
Zee News-Matriz ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಈ ಬಾರಿ 543 ಲೋಕಸಭಾ ಸ್ಥಾನಗಳಲ್ಲಿ 377 ಸ್ಥಾನಗಳನ್ನು ಗೆಲ್ಲುತ್ತದೆ. ಇನ್ನು, ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಕೇವಲ 94 ಸ್ಥಾನಗಳನ್ನು ಮಾತ್ರ ಗಳಿಸಲು ಸಾಧ್ಯವಾಗಲಿದೆ. ಇನ್ನು, ದಕ್ಷಿಣ ಭಾರತದಲ್ಲಿ ಬಿಜೆಪಿ ಕರ್ನಾಟಕದಲ್ಲಿ ಮಾತ್ರ ಅತಿ ಹೆಚ್ಚು ಸ್ಥಾನ ಗಳಿಸಲಿದೆ. ಉತ್ತೆ ಭಾರತದಲ್ಲಿ ಬಿಜೆಪಿ ತನ್ನ ಹವಾ ಉಳಿಸಿಕೊಂಡಿದೆ. ಹಾಗಾದರೇ ಯಾವ ರಾಜ್ಯಗಳಲ್ಲಿ ಯಾವ ಯಾವ ರಾಜ್ಯಗಳಿಗೆ ಎಷ್ಟು ಸ್ಥಾನ ಎಂಬುದನ್ನು ನೋಡೋಣ.
ಉತ್ತರ ಪ್ರದೇಶ:
ಬಿಜೆಪಿ ಮತ್ತು ಮೈತ್ರಿ - 78
ಕಾಂಗ್ರೆಸ್ ಮತ್ತು ಎಸ್‌ಪಿ - 2
ಬಿಹಾರ :
ಬಿಜೆಪಿ ಮತ್ತು ಮೈತ್ರಿ - 37
I.N.D.I.A - 3
ಮಹಾರಾಷ್ಟ್ರ :
ಬಿಜೆಪಿ ಮತ್ತು ಮೈತ್ರಿ - 45
ಇಂಡಿಯಾ ಒಕ್ಕೂಟ - 3
ಒಡಿಶಾ :
ಬಿಜೆಪಿ - 11
ಬಿಜೆಡಿ - 9
ಪಶ್ಚಿಮ ಬಂಗಾಳ :
ಟಿಎಂಸಿ - 24
ಬಿಜೆಪಿ - 17
ಕಾಂಗ್ರೆಸ್- 1
ಅಸ್ಸಾಂ :
ಬಿಜೆಪಿ - 11
ಕಾಂಗ್ರೆಸ್ - 1
ಜಾರ್ಖಂಡ್ :
ಬಿಜೆಪಿ- 13
ಕಾಂಗ್ರೆಸ್ - 1
ದೆಹಲಿ :
ಬಿಜೆಪಿ ಮತ್ತು ಮೈತ್ರಿ - 7
ಇಂಡಿಯಾ ಒಕ್ಕೂಟ - 0
ಪಂಜಾಬ್ :
ಬಿಜೆಪಿ - 3
ಕಾಂಗ್ರೆಸ್ - 3
ಆಪ್- 5
ಎಸ್‌ಡಿಎ - 1
ಮಧ್ಯಪ್ರದೇಶ:
ಬಿಜೆಪಿ- 39
ಕಾಂಗ್ರೆಸ್ - 1
ರಾಜಸ್ಥಾನ :
ಬಿಜೆಪಿ - 25
ಕಾಂಗ್ರೆಸ್ - 0
ಗುಜರಾತ್ :
ಬಿಜೆಪಿ - 26
ಕಾಂಗ್ರೆಸ್ - 0
ಉತ್ತರಾಖಂಡ :
ಬಿಜೆಪಿ - 5
ಕಾಂಗ್ರೆಸ್ - 0
ಹಿಮಾಚಲ :
ಬಿಜೆಪಿ - 3
ಕಾಂಗ್ರೆಸ್ - 1
ಹರಿಯಾಣ :
ಬಿಜೆಪಿ : 9
ಕಾಂಗ್ರೆಸ್ -1
ಚಂಡೀಗಢ:
ಬಿಜೆಪಿ: 1
ಈಶಾನ್ಯ ರಾಜ್ಯಗಳು :
ಬಿಜೆಪಿ ಮತ್ತು ಮೈತ್ರಿ - 10
ಕಾಂಗ್ರೆಸ್ - 1
ಗೋವಾ :
ಬಿಜೆಪಿ - 2
ಕಾಂಗ್ರೆಸ್ - 0
ಪುದುಚೇರಿ :
ಬಿಜೆಪಿ -0
ಕಾಂಗ್ರೆಸ್ - 1
ಅಂಡಮಾನ್:
ಬಿಜೆಪಿ - 1
ಲಡಾಖ್:
ಬಿಜೆಪಿ- 1
ಈ ಸಮೀಕ್ಷೆಯನ್ನು ಫೆಬ್ರವರಿ 5 ರಿಂದ ಫೆಬ್ರವರಿ 27 ರ ನಡುವೆ ನಡೆಸಲಾಗಿದ್ದು, ಅಭಿಪ್ರಾಯ ಸಂಗ್ರಹಣೆಯಲ್ಲಿ 543 ಲೋಕಸಭಾ ಕ್ಷೇತ್ರಗಳಲ್ಲಿ 87,000 ಪುರುಷರು ಮತ್ತು 54,000 ಮಹಿಳೆಯರು ಸೇರಿದಂತೆ 167,843 ಜನರು ಭಾಗವಹಿಸಿದ್ದಾರೆ.












Click it and Unblock the Notifications