ಕೊನೆಯ ವಿಡಿಯೋದಲ್ಲಿ ಗುಡ್ ಬೈ ಹೇಳಿ ಆತ್ಮ*ತ್ಯೆಗೆ ಶರಣಾದ ಫೇಮಸ್ ಯುಟ್ಯೂಬ್ ಜೋಡಿ
ಯುಟ್ಯೂಬ್ ಮೂಲಕ ದುಡ್ಡು ಮಾಡಬಹುದು, ಯುಟ್ಯೂಬರ್ ಆದರೆ ಅವರಿಗೆ ಒಂದು ಜೀವನ ಸಿಕ್ಕಂತೆ. ಯುಟ್ಯೂಬ್ ಚಾನಲ್ ಮಾಡಿ ಒಳ್ಳೆಯ ಸಬ್‌ಸ್ಕ್ರೈಬರ್ಸ್ ಬಂದು ಬಿಟ್ಟರೆ ಜೀವನ ಸೆಟಲ್ ಆಗೋದು ಗ್ಯಾರಂಟಿ ಅನ್ನೋ ಮಾತು ಇದೆ. ಹಾಗೇ 'ಯುಟ್ಯೂಬ್' ಸಂಸ್ಥೆ ಕೂಡ ಭಾರತದಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದೆ. ಹೀಗಿದ್ದಾಗ ಫೇಮಸ್ ಯುಟ್ಯೂಬ್ ಗಂಡ ಹೆಂಡತಿ ಈಗ ಕೊನೆಯ ವಿಡಿಯೋದಲ್ಲಿ ತಮ್ಮ ಜೀವನಕ್ಕೆ ಗುಡ್ ಬೈ ಹೇಳಿ ಆತ್ಮ*ತ್ಯೆಗೆ ಶರಣಾಗಿದ್ದಾರೆ.
ಕೋಟಿ ಕೋಟಿ ರೂಪಾಯಿ ಗಳಿಸಬೇಕು, ಜೀವನದಲ್ಲಿ ಕೋಟಿ ಕೋಟಿ ರೂಪಾಯಿ ದುಡ್ಡು ಮಾಡ್ತಾ ಹಾಯಾಗಿ ಒಂದು ಬಂಗಲೆ & ಕಾರು ತಗೊಂಡು ಆರಾಮವಾಗಿ ಇರಬೇಕು ಎಂಬುದು ಪ್ರತಿಯೊಬ್ಬರ ಆಸೆ. ಅದರಲ್ಲೂ ಈಗಿರುವ ಯುಟ್ಯೂಬ್, ಇನ್‌ಸ್ಟ್ರಾಗ್ರಾಂ, ಫೇಸ್‌ಬುಕ್... ಹೀಗೆ ಸೋಷಿಯಲ್ ಮೀಡಿಯಾ ಯುಗದಲ್ಲಿ ಜನರು ಸುಲಭವಾಗಿ ಮತ್ತು ನ್ಯಾಯಯುತವಾಗಿ ದುಡ್ಡು ಮಾಡಬಹುದು. ಹೀಗೆ, ಇಲ್ಲೊಬ್ಬ ದಂಪತಿ ಅಂದ್ರೆ ಗಂಡ & ಹೆಂಡತಿ ಯುಟ್ಯೂಬ್ ಮೂಲಕ ತುಂಬಾ ಫೇಮಸ್ ಆಗಿದ್ದರು. ಆದರೆ ಅದೇ ಯುಟ್ಯೂಬ್ ಗಂಡ & ಹೆಂಡತಿ ಈಗ ಆತ್ಮ*ತ್ಯೆಗೆ ಶರಣಾಗಿದ್ದಾರೆ....

ಗಂಡ & ಹೆಂಡತಿ ಆತ್ಮ*ತ್ಯೆಗೆ...
ಹೌದು, ಯುಟ್ಯೂಬ್ ಮೂಲಕ ಫೇಮಸ್ ಆಗಿದ್ದ ಗಂಡ & ಹೆಂಡತಿ ಒಳ್ಳೆಯ ಜೀವನ ನಡೆಸ್ತಾ ಇದ್ದರು. ಅಲ್ಲದೆ ಮಗನ ಜೊತೆಗೆ ಉತ್ತಮ ಜೀವನ ಕೂಡ ನಡೆಸುತ್ತಿದ್ದರು. ಆದರೆ ಏನಾಯ್ತೋ ಏನೋ ಗೊತ್ತಿಲ್ಲ ಯುಟ್ಯೂಬ್ ಮೂಲಕ ಫೇಮಸ್ ಆಗಿದ್ದ ಗಂಡ & ಹೆಂಡತಿ ಅವರ ಮನೆಯ ಒಳಗಡೆ ಹೆಣವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ಈ ಸಾವನ್ನು ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಖಚಿತಪಡಿಸಿದ್ದು ತನಿಖೆ ನಡೆಯುತ್ತಿದೆ.
ನೇಣು ಹಾಕಿಕೊಂಡ ಗಂಡ.. ಹೆಂಡತಿ?
ಈ ರೀತಿ ಯುಟ್ಯೂಬ್ ಮೂಲಕ ಫೇಮಸ್ ಆಗಿದ್ದ ಗಂಡ & ಹೆಂಡತಿ ಆತ್ಮ*ತ್ಯೆಗೆ ಶರಣಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿರುವುದು ಕರ್ನಾಟಕದ ನೆರೆಯ ರಾಜ್ಯ ಕೇರಳದಲ್ಲಿ. ಮೃತ ಗಂಡ & ಹೆಂಡತಿಯನ್ನ ಸೆಲ್ವರಾಜ್ ಮತ್ತು ಪ್ರಿಯ ಎಂದು ಗುರುತಿಸಲಾಗಿದೆ. ಒಂದು ಕಡೆ ಗಂಡ ತಮ್ಮ ಮನೆಯ ಬೆಡ್ ರೂಂ ಒಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮತ್ತೊಂದು ಕಡೆ ಈ ಮನೆಯಲ್ಲೇ ಹೆಂಡತಿ ಬೆಡ್ ಮೇಲೆ ಹೆಣವಾಗಿ ಸಿಕ್ಕಿದ್ದಾರೆ. ಹೀಗಾಗಿ ಇದು ಆತ್ಮಹತ್ಯೆ ಎನ್ನಲಾಗಿದ್ದು ತನಿಖೆ ನಡೆಯುತ್ತಿದೆ.












Click it and Unblock the Notifications