ನಿಮ್ಮ ಬ್ಯಾಂಕ್ ಖಾತೆ ಮಾಹಿತಿ ಮಾರಾಟಕ್ಕಿದೆ, ಜಸ್ಟ್ 500

ಭಾರತೀಯರ ಬ್ಯಾಂಕ್ ಖಾತೆ ವಿವರ, ಇ ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಮಾರಾಟಕ್ಕಿದೆ. ಅದೂ ಎಷ್ಟಕ್ಕೆ ಗೊತ್ತೆ? ಕೇವಲ ಐನೂರು ರುಪಾಯಿಗೆ ಮಾತ್ರ. ಮಧ್ಯಪ್ರದೇಶದ ಪೊಲೀಸರು ತನಿಖೆ ನಡೆಸುವ ವೇಳೆ ಈ ವಿಚಾರ ಬಹಿರಂಗವಾಗಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಚರಣೆ ನಡೆಸುವ ತಂಡವೊಂದನ್ನು ಹಿಡಿದಾಗ ಈ ಅಂಶ ಬಯಲಾಗಿದೆ. ಮತ್ತು ಈ ತಂಡವನ್ನು ನಡೆಸುತ್ತಿದ್ದ ವ್ಯಕ್ತಿ ಪಾಕಿಸ್ತಾನಿ. ಆತ ಲಾಹೋರ್ ನಲ್ಲಿ ಕೂತು ಈ ದಂಧೆ ನಡೆಸುತ್ತಿದ್ದ ಎಂಬುದು ಬಯಲಾಗಿದೆ.

Your bank details are on sale for Rs 500, find out how this Pakistani is doing it

ಪತ್ತೇದಾರರೊಬ್ಬರು ಗ್ರಾಹಕರ ಸೋಗಿನಲ್ಲಿ ಇಂದೋರ್ ಮೂಲದ ಮಹಿಳೆಯೊಬ್ಬರ ಡೆಬಿಟ್ ಕಾರ್ಡ್ ವಿವರ ಪಡೆದಿದ್ದರು. ಅದಕ್ಕೆ ಪ್ರತಿಯಾಗಿ ಬಿಟ್ ಕಾಯಿನ್ ನೀಡಿದ್ದರು. ಈ ಕಾರ್ಯಾಚರಣೆಯಲ್ಲಿ ತಂಡದ ಇಬ್ಬರು ಸದಸ್ಯರನ್ನು ಬಂಧಿಸಲಾಗಿದೆ.

ಇದೇ ವೇಳೆ ತಮ್ಮ ಕ್ರೆಡಿಟ್ ಕಾರ್ಡ್ ಮೂಲಕ ಎಪ್ಪತ್ತೆರಡು ಸಾವಿರ ರುಪಾಯಿ ಕಳೆದುಕೊಂಡವರೊಬ್ಬರು ನೀಡಿದ ದೂರು ಕೂಡ ತಂಡದ ಕಾರ್ಯಾಚರಣೆಯನ್ನು ಬಯಲು ಮಾಡುವಲ್ಲಿ ನೆರವಾಗಿದೆ. ರಾಜ್ ಕುಮಾರ್ ಪಿಳ್ಳೈ ಹಾಗೂ ರಾಮ್ ಪ್ರಸಾದ್ ನಾಡಾರ್ ಎಂಬುವವರು ವಿಮಾನದ ಟಿಕೆಟ್ ಖರೀದಿಸಲು ಕಾರ್ಡ್ ಬಳಸಿದ್ದರು.

ಪಿಳ್ಳೈ ಅಮೆರಿಕ ಮೂಲದ ಐಟಿ ಕಂಪನಿಯೊಂದರ ಮಾಜಿ ಉದ್ಯೋಗಿ. ನಾಡಾರ್ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದವನು. ವಿಚಾರಣೆ ವೇಳೆ ಇವರಿಬ್ಬರು ಬಾಯಿ ಬಿಟ್ಟ ಮಾಹಿತಿ ಪ್ರಕಾರ, ಕಾರ್ಡ್ ಗಳನ್ನು ಅಂತರರಾಷ್ಟ್ರೀಯ ವೆಬ್ ಸೈಟ್ ಗಳಲ್ಲಿ ಬಳಸುತ್ತಿದ್ದರಂತೆ. ಏಕೆಂದರೆ, ಆ ವೆಬ್ ಸೈಟ್ ಗಳಲ್ಲಿ ಒಟಿಪಿ (ಒನ್ ಟೈಮ್ ಪಾಸ್ ವರ್ಡ್) ಕೇಳುವುದಿಲ್ಲವಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+