Viral Video: ಆರೋಗ್ಯಕ್ಕಾಗಿ ₹60,000 ವೇತನದ ಉದ್ಯೋಗ ಬಿಟ್ಟ ಯುವತಿ! ನೆಟ್ಟಿಗರು ಹೇಳಿದ್ದೇನು?

ಉದ್ಯೋಗ ಅರಸಿ ದೂರದ ಊರುಗಳಿಗೆ ಬರುವ ಅನೇಕರಿಗೆ ಹಣ ಮುಖ್ಯವಾಗಿರುತ್ತದೆ. ಬದುಕಲ್ಲಿ ಎತ್ತರದ ಸ್ಥಾನ ತಲುಪುವ ಗುರಿ ಹೊಂದಿರುತ್ತಾರೆ. ಆದರೆ ದಿನವಿಡಿ ಒತ್ತಡದೊಂದಿಗೆ ಕೆಲಸ ಮಾಡುವ ವೇಳೆ ಅವರಿಗೇ ಗೊತ್ತಿಲ್ಲದೇ ದೀರ್ಘ ಕಾಲದ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಇದರಿಂದ ಕ್ರಮೇಣ ನೆಮ್ಮದಿ ಕಳೆದುಕೊಳ್ಳೂತ್ತಾರೆ. ಇಂತಹ ಸ್ಥಿತಿ ಎದುರಿಸಿರುವ ಯುವತಿಯೊಬ್ಬರು ತೆಗೆದುಕೊಂಡು ಜಾಬ್ ಕ್ವಿಟ್ ನಿರ್ಧಾರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

22 ವರ್ಷದ ಯುವತಿಯೊಬ್ಬಳು ತನ್ನ ಆರೋಗ್ಯ ಕಾಳಜಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾಳೆ. ಮಾಸಿಕ 60,000 ರೂಪಾಯಿ ವೇತನದ ಕೆಲಸ ಬಿಟ್ಟು ಬಿಟ್ಟಿದ್ದಾಳೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಸ್ವತಃ ಆಕೆಯೇ ರೀಲ್ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಅದು ವೈರಲ್ ಆಗಿದೆ. ವಿಡಿಯೋ ನೋಡ ನೋಡುತ್ತಿದ್ದಂತೆ 1.1 ಮಿಲಿಯನ್‌ಗಿಂತ ಹೆಚ್ಚು ಜನ ವೀಕ್ಷಿಸಿದ್ದಾರೆ. ಅನೇಕರು ಕಾಮೆಂಟ್ ಮಾಡಿದ್ದಾರೆ. ಇಂದಿನ ಕಾಪೋರೇಟ್ ಯುಗದಲ್ಲಿ ನಿತ್ಯವು ಕೆಲಸದ ಒತ್ತಡ ಎದುರಿಸಬೇಕಾಗುತ್ತದೆ. ಕಚೇರಿ, ವೈಯಕ್ತಿಕ ಜೀವನ ಸರಿ ಹೊಂದಿಸಲಾಗದೇ ಆರೋಗ್ಯ, ಮಾನಸಿಕ ಸ್ಥಿತಿಗತಿ ಹಾಳಾಗಿ ಬಿಡುತ್ತದೆ. ಕೊನೆಗೆ ಆರೋಗ್ಯ ಕಾಳಜಿ ವಹಿಸುವುದೇ ಮುಖ್ಯವಾಗಿ ಕೆಲವರು ಇಂತಹ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆ.

Young Woman Quits Rs 60K Job for Health Viral Instagram Reel

ಯುವತಿ ಹಂಚಿಕೊಂಡ ವಿಡಿಯೋದಲ್ಲಿ ಹೇಳಿದ್ದೇನು?

ವಿಡಿಯೋದಲ್ಲಿ ಯುವತಿಯು "ನನಗೆ ಕೆಲಸ ಆರಾಮಗಿತ್ತು. ಆದರೆ ರಾತ್ರಿ ಪಾಳಿಯದ್ದಾಗಿತ್ತು. ಇದರಿಂದ ಆರೋಗ್ಯ ಹಾಳಾಗುತ್ತದೆ. 22 ನೇ ವಯಸ್ಸಿನಲ್ಲಿ ಆರ್ಥಿಕವಾಗಿ ಸ್ಥಿರವಾಗಿದ್ದೇನೆ. ಸದ್ಯ ನನಗೆ ಹಣ ಅಥವಾ ಆರೋಗ್ಯ ಎರಡರಲ್ಲಿ ಒಂದನ್ನು ಆಯ್ಕೆ ಮಾಡುವ ಸ್ಥಿತಿಯಲ್ಲಿದ್ದ ಕಾರಣ ನಾನು ಆರೋಗ್ಯವನ್ನು ಆರಿಸಿಕೊಂಡೆ' ಎಂದು ತಿಳಿಸಿದ್ದಾಳೆ.

"ಹಣ ಮತ್ತೆ ಗಳಿಸಬಹುದು, ಆದರೆ ದೇಹ ಹಾಳಾದರೆ ಅಸಾಧ್ಯ ಎಂಬುದು ಆಕೆಯ ನಿಲುವು. ಈಗ ಕೆಲಸ ಬಿಟ್ಟಿದ್ದೇನೆ. ಮುಂದೆ ಏನಾಗುತ್ತದೆ ಎಂಬುದು ಗೊತ್ತಿಲ್ಲ, ಆದರೆ ಜೀವನವನ್ನು ಹೊಸದಾಗಿ ಕಟ್ಟುತ್ತೇನೆ' ಎಂದು ಯುವತಿ ತಿಳಿಸಿದ್ದಾಳೆ. ಅವರ ಈ ವಿಡಿಯೋ ಪೋಸ್ಟ್ ಆಗುತ್ತಿದ್ದಂತೆ ಆಕೆಯ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಕೆಲವರು ಆಕೆಯ ನಿರ್ಧಾರ ಪ್ರಶಂಸಿಸಿದ್ದಾರೆ. "ಇದು ಧೈರ್ಯಶಾಲಿ ನಿರ್ಧಾರ, ನಿನಗೆ ಭವಿಷ್ಯದಲ್ಲಿ ಒಳ್ಳೆಯದು ಆಗಲಿ' ಎಂದು ಬೆಂಬಲಿಸಿದ್ದಾರೆ.

ಇನ್ನು ಕೆಲವರು ಕೆಲಸ ಬಿಟ್ಟಿದ್ದಕ್ಕೆ ಸಂಶಯ ವ್ಯಕ್ತಪಡಿಸಿದ್ದಾರೆ. 22ನೇ ವಯಸ್ಸಿನಲ್ಲಿ ಹೇಗೆ ಆರ್ಥಿಕವಾಗಿ ಸುರಕ್ಷಿತಳಾದೆ. ಪೋಷಕರ ಹಣವಲ್ಲವೇ? ಎಂದು ಒಬ್ಬರು ಪ್ರಶ್ನಿಸಿದ್ದಾರೆ. 60 ಸಾವಿರ ಸಂಬಳ ಬಿಟ್ಟುಬಿಡುವಷ್ಟು ಸುಲಭವೇ? ನಮ್ಮ ಮನೆಗೆ ಹೀಗೆ ಸಾಧ್ಯವಿಲ್ಲ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

"ನಾನು ಕೂಡ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತೇನೆ. ಆರೋಗ್ಯ ಹಾಳಾಗುತ್ತಿದೆ. ಆದರೂ ಬಿಟ್ಟು ಬಿಡಲು ಸಾಧ್ಯವಾಗುತ್ತಿಲ್ಲ, ಏಕೆಂದರೆ ಹೀಗೆ ಬದುಕಲು ಅಭ್ಯಾಸವಾಗಿದೆ ಎಂದಿದ್ದಾರೆ. ಮತ್ತೊಬ್ಬರು ನೀವು 60 ಸಾವಿರ ವೇತನಕ್ಕೆ ಕೆಲಸ ಮಾಡಿದ್ದೀರಿ, ಇದೀಗ ಅದನ್ನು ಬಿಟ್ಟಿರುವುದು ನಮಗೆ ಅಚ್ಚರಿ ಮೂಡಿಸಿದೆ ಅಂತಲೂ ಕಾಮೆಂಟ್ ಮಾಡಿದ್ದಾರೆ. "60,000 ಕೆಲಸ ಬಿಟ್ಟಿದ್ದರೆ ನನ್ನ ಅಮ್ಮ-ಅಪ್ಪಾ ನನ್ನನ್ನೇ ಹೊಡೆದು ಕೊಲ್ಲುತ್ತಿದ್ದರು' ಎಂದು ಹಾಸ್ಯವಾಗಿ ಮತ್ತೊಬ್ಬರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+