Liquor: ದೇಶದಲ್ಲಿ ಈ ಮದ್ಯಕ್ಕೆ ಭರ್ಜರಿ ಡಿಮ್ಯಾಂಡ್, ಕರ್ನಾಟಕವೇ ನಂ 1
Year Ender 2025: 2025 ನೇ ಸಾಲಿನಲ್ಲಿ ಹಲವು ಅಚ್ಚರಿಯ ಬೆಳವಣಿಗೆಗಳು ನಡೆದಿವೆ. ಅದರಲ್ಲೂ ಮುಖ್ಯವಾಗಿ ಈ ವರ್ಷ ಮದ್ಯ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಈ ವರ್ಷ ಮದ್ಯ ಖರೀದಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳು ಹಾಗೂ ಕರ್ನಾಟಕ ಮುಂಚೂಣಿಯಲ್ಲಿದೆ. ಅದರಲ್ಲೂ ಮುಖ್ಯವಾಗಿ ಈ ವರ್ಷ ವಿವಿಧ ಮದ್ಯಗಳಲ್ಲಿ ವಿಸ್ಕಿ ಮಾರಾಟವು ಹೊಸ ದಾಖಲೆಯನ್ನೇ ಬರೆದಿದೆ. 2025ನೇ ಸಾಲಿನಲ್ಲಿ ಮದ್ಯ ಮಾರಾಟ / ಖರೀದಿಯಲ್ಲಿ ಯಾವ ರಾಜ್ಯ ಮುಂಚೂಣಿಯಲ್ಲಿದೆ. ಕರ್ನಾಟಕ ಸೇರಿದಂತೆ ಯಾವ ರಾಜ್ಯದ ಮದ್ಯ ಪ್ರಿಯರು ಹೆಚ್ಚು ಮದ್ಯ ಖರೀದಿ ಮಾಡಿದ್ದಾರೆ ಹಾಗೂ ಎಷ್ಟು ಪ್ರಮಾಣದಲ್ಲಿ ಮಾಡಿದ್ದಾರೆ ಎನ್ನುವ ವಿವರ ಇಲ್ಲಿದೆ.
2025ನೇ ಸಾಲಿನಲ್ಲಿ ಭಾರತೀಯ ನಿರ್ಮಿತ ವಿದೇಶಿ ಮದ್ಯ (IMFL) ವಿಭಾಗದಲ್ಲಿ ₹40.17 ಕೋಟಿ ಕೇಸ್‌ಗಳ ವಿಸ್ಕಿ ಮಾರಾಟವಾಗಿದೆ ಎಂದು ಹೇಳಲಾಗಿದೆ. ಇದು ಭಾರೀ ಪ್ರಮಾಣದ ವಿಸ್ಕಿ ಮಾರಾಟ ಎಂದು ಅನಿಸಿದರೂ, ಇದು 2023 - 2024ನೇ ಸಾಲಿಗೆ ಹೋಲಿಕೆ ಮಾಡಿದರೆ, ಈ ವರ್ಷ 1.4% ರಷ್ಟು ವಿಸ್ಕಿ ಮಾರಾಟದಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಅಮೇರಿಕಾದ ಭಾರೀ ಸುಂಕ ಹಾಗೂ ಮಾರುಕಟ್ಟೆಯಲ್ಲಿನ ಏರುಪೇರು ಮುಖ್ಯವಾಗಿ ರಾಜ್ಯ ಸರ್ಕಾರಗಳು ನಿರಂತರವಾಗಿ ಮದ್ಯ ಮಾರಾಟ ಮಾಡಿರುವುದರ ಹೊರತಾಗಿಯೂ ಮದ್ಯ ಮಾರಾಟದಲ್ಲಿ ಭರ್ಜರಿ ದಾಖಲೆ ಸೃಷ್ಟಿಯಾಗಿದೆ.

ವಿಸ್ಕಿ ಖರೀದಿಯಲ್ಲಿ ಕರ್ನಾಟಕವು ಅಗ್ರಸ್ಥಾನದಲ್ಲಿ ಇದೆ. ಇನ್ನು ಭಾರತದಲ್ಲಿ ವಿಸ್ಕಿ ಮಾರಾಟದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಮುಂಚೂಣಿಯಲ್ಲಿವೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ದೇಶದ ಒಟ್ಟಾರೆ ವಿಸ್ಕಿ ಮಾರಾಟದಲ್ಲಿ ಶೇ 58% ರಷ್ಟು ಪಾಲು ಇದೆ. ಈ ಮೂಲಕ ಉತ್ತರ ಹಾಗೂ ಈಶಾನ್ಯ ಭಾರತದ ರಾಜ್ಯಗಳಿಗಿಂತಲೂ ದಕ್ಷಿಣ ಭಾರತದಲ್ಲೇ ವಿಸ್ಕಿ ಮಾರಾಟ ಹೆಚ್ಚಾಗಿದೆ. ಕರ್ನಾಟಕವೂ ಸೇರಿದಂತೆ ದೇಶದ 7 ಪ್ರಮುಖ ರಾಜ್ಯಗಳು ವಿಸ್ಕಿ ಮಾರಾಟದಲ್ಲಿ ಮುಂಚೂಣಿಯಲ್ಲಿವೆ. ಮೊದಲ ನಾಲ್ಕು ಸ್ಥಾನಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳೇ ಇವೆ.
1 ಕರ್ನಾಟಕ: 2025ನೇ ಹಣಕಾಸು ವರ್ಷದಲ್ಲಿ ಸುಮಾರು 6.83 ಕೋಟಿ ಕೇಸ್‌ಗಳ ವಿಸ್ಕಿ ಮಾರಾಟ ಕರ್ನಾಟಕದಲ್ಲಿ ಆಗಿದೆ. ಕರ್ನಾಟಕವು ವಿಸ್ಕಿ ಮಾರಾಟದಲ್ಲಿ 17% ಪಾಲನ್ನು ಹೊಂದಿದ್ದು ಮಾರುಕಟ್ಟೆಯಲ್ಲಿ ಅಗ್ರ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಹೆಚ್ಚು ಮದ್ಯ ಬೇಡಿಕೆ ಕಂಡು ಬಂದಿದೆ. ಕರ್ನಾಟಕದಲ್ಲಿ ಮದ್ಯ ಮಾರಾಟದಲ್ಲಿ ಬೆಂಗಳೂರು ನಗರವು ಮುಂಚೂಣಿಯಲ್ಲಿದೆ.
2. ತಮಿಳುನಾಡು: ಇನ್ನು ಮದ್ಯ ಮಾರಾಟದ ಎರಡನೇ ಸ್ಥಾನದಲ್ಲಿ ತಮಿಳುನಾಡು ಇದೆ. ಇಲ್ಲಿ ಮದ್ಯ ವಿತರಣಾ ವ್ಯವಸ್ಥೆಗಳು ರಾಜ್ಯ-ನಿಯಂತ್ರಣಕ್ಕೆ ಒಳಪಟ್ಟಿದ್ದು. ಮಾರುಕಟ್ಟೆ ಪಾಲಿನ 13% ವರೆಗೆ ಕೊಡುಗೆ ನೀಡಿದೆ. 2025 ರ ಹಣಕಾಸು ವರ್ಷದಲ್ಲಿ ಸುಮಾರು 5.22 ಕೋಟಿ ಬಾಕ್ಸಗಳ ವಿಸ್ಕಿಯನ್ನು ಮಾರಾಟ ಮಾಡಲಾಗಿದೆ. ತಮಿಳುನಾಡಿನ ವಿವಿಧ ಭಾಗದಲ್ಲಿ ವಿಸ್ಕಿ ಬೇಡಿಕೆಯು ಗಣನೀಯವಾಗಿ ಹೆಚ್ಚಳವಾಗಿದೆ.
3. ತೆಲಂಗಾಣ: ಕರ್ನಾಟಕದ ನೆರೆಯ ರಾಜ್ಯಗಳಾದ ತೆಲಂಗಾಣ ಹಾಗೂ ಆಂಧ್ರಪ್ರದೇಶ ಎರಡೂ ರಾಜ್ಯಗಳಲ್ಲೂ ವಿಸ್ಕಿಗೆ ಭಾರೀ ಡಿಮ್ಯಾಂಡ್ ಇದೆ. ದೇಶದಲ್ಲಿ ತೆಲಂಗಾಣ ಸುಮಾರು 9% ಮಾರುಕಟ್ಟೆ ಪಾಲನ್ನು ಹೊಂದಿದೆ. 2025 ರ ಹಣಕಾಸು ವರ್ಷದಲ್ಲಿ 3.61 ಕೋಟಿ ಬಾಕ್ಸ್ ವಿಸ್ಕಿ ಸೇಲ್ ಆಗಿದೆ. ತೆಲಂಗಾಣದ ರಾಜಧಾನಿ ಹೈದರಾಬಾದ್ ಪ್ರೀಮಿಯಂ ವರ್ಗದಲ್ಲಿ ವಿಸ್ಕಿ ಬೇಡಿಕೆ ಹೆಚ್ಚಳವಾಗಿದೆ.
4. ಆಂಧ್ರಪ್ರದೇಶ: ಇನ್ನು ಆಂಧ್ರಪ್ರದೇಶದಲ್ಲೂ ವಿಸ್ಕಿಗೆ ಭಾರೀ ಡಿಮ್ಯಾಂಡ್ ಇದ್ದು, ಆಂಧ್ರಪ್ರದೇಶವು ವಿಸ್ಕಿ ಡಿಮ್ಯಾಂಡ್‌ನಲ್ಲಿ 4ನೇ ಸ್ಥಾನದಲ್ಲಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿಸ್ಕಿ ಡಿಮ್ಯಾಂಡ್ ಹೆಚ್ಚಾಗಿದೆ. ತೆಲಂಗಾಣದ ಕೆಲವು ಕಡೆಗಳಲ್ಲಿ ಸಭೆ - ಸಮಾರಂಭ ಹಾಗೂ ಶುಭ ಸಮಾರಂಭಗಳಲ್ಲೂ ಮದ್ಯ ಸೇವನೆ ಮಾಡುವುದು ಇದೆ. ವಿಸ್ಕಿ ಮಾರಾಟದಲ್ಲಿ ಶೇ 8% ಮಾರುಕಟ್ಟೆ ಪಾಲನ್ನು ತೆಲಂಗಾಣ ಹೊಂದಿದೆ. 2025ರ ಹಣಕಾಸು ವರ್ಷದಲ್ಲಿ 3.21 ಕೋಟಿ ವಿಸ್ಕಿ ಬಾಕ್ಸ್‌ಗಳ ಸೇಲ್ ಈ ರಾಜ್ಯದಲ್ಲಿ ಆಗಿದೆ.
5. ಮಹಾರಾಷ್ಟ್ರ: ವಿಸ್ಕಿ ಮಾರಾಟದ ಐದನೇ ಸ್ಥಾನದಲ್ಲಿ ಮಹಾರಾಷ್ಟ್ರ ಇದೆ. ಮಹಾರಾಷ್ಟ್ರದಲ್ಲಿ ಒಟ್ಟಾರೆ ರಾಷ್ಟ್ರೀಯ ಮಾರಾಟದಲ್ಲಿ ಸರಾಸರಿ 7% ಮತ್ತು 2.81 ಕೋಟಿ ವಿಸ್ಕಿ ಬಾಕ್ಸ್‌ಗಳು ಸೇಲ್ ಆಗಿವೆ. ವಿಸ್ಕಿ ಮೇಲೆ ಹೆಚ್ಚಾದ ತೆರಿಗೆ ಹಾಗೂ ಮದ್ಯ ಮಾರಾಟದಲ್ಲಿ ಆಗಿರುವ ಕೆಲವೊಂದು ಪ್ರಮುಖ ಬದಲಾವಣೆಗಳಿಂದಾಗಿ ವಿಸ್ಕಿ ಮಾರಾಟದಲ್ಲಿ ಮಹಾರಾಷ್ಟ್ರ ಅಲ್ಪ ಪ್ರಮಾಣದಲ್ಲಿ ಹಿಂದುಳಿದಿದೆ ಎಂದು ಹೇಳಲಾಗಿದೆ. ನಗರ ಪ್ರದೇಶಗಳಾದ ಮುಂಬೈ - ಪುಣೆ ಮಾರುಕಟ್ಟೆ ಪ್ರದೇಶಗಳಲ್ಲಿ ವಿಸ್ಕಿ ಡಿಮ್ಯಾಂಡ್ ಹೆಚ್ಚಾಗಿದೆ.
6. ಉತ್ತರ ಪ್ರದೇಶ: ಉತ್ತರ ಪ್ರದೇಶ ಮದ್ಯ ಮಾರಾಟದಲ್ಲಿ ಪ್ರಮುಖ ಸ್ಥಾನದಲ್ಲಿದೆ. ಅದರಲ್ಲೂ ವಿಸ್ಕಿ ಸೇಲ್‌ನಲ್ಲಿ ಯುಪಿ ಆರನೇ ಸ್ಥಾನದಲ್ಲಿದೆ. ದೇಶದ ಶೇ 6% ಪ್ರತಿಶತ ಮತ್ತು 2.41 ಕೋಟಿ ಕೇಸ್ ವಿಸ್ಕಿ ಬಾಕ್ಸ್ ಇಲ್ಲಿ ಸೇಲ್ ಆಗಿದೆ. ಉತ್ತರ ಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ.
7. ಕೇರಳ: ಕೇರಳವು ಸುಮಾರು ಶೇ 6% ವಿಸ್ಕಿ ಸೇಲ್ 2.41 ಕೋಟಿ ವಿಸ್ಕಿ ಬಾಕ್ಸ್‌ಗಳ ಸೇಲ್ ಹೊಂದಿದೆ. ಮದ್ಯ ಮಾರಾಟವು ಕೇರಳದಲ್ಲಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಒಟ್ಟಾರೆ ವಿಸ್ಕಿ ಸೇಲ್ ಹೆಚ್ಚಾಗಿರುವ ಭಾರತದ ರಾಜ್ಯಗಳ ಪಟ್ಟಿಯಲ್ಲಿ ಟಾಪ್ 10ರಲ್ಲೇ ದಕ್ಷಿಣ ಭಾರತದ ಐದು ರಾಜ್ಯಗಳು ಸಹ ಇವೆ.
ವಿಶೇಷ ಸೂಚನೆ: ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ
-
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ಬೆಂಗಳೂರಿನಲ್ಲಿ ಇಂದು ಶ್ರೀ ಎಂ ಅವರ "ಉಪನಿಷತ್ತುಗಳು ಮತ್ತು ಜೆ.ಕೃಷ್ಣಮೂರ್ತಿ" ಹೊಸ ಕೃತಿ ಬಿಡುಗಡೆ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ











Click it and Unblock the Notifications