Year Ender 2024: ಈ ವರ್ಷ ಸದ್ದು ಮಾಡಿದ ಮದುವೆಗಳಿವು
2024ರಲ್ಲಿ ಭಾರತದಲ್ಲಿ ಹಲವು ಶ್ರೀಮಂತ ಉದ್ಯಮಿಗಳು, ಸೆಲೆಬ್ರಿಟಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ದುಬಾರಿ ಮದುವೆ ವಿಶ್ವದ ಗಮನ ಸೆಳೆದರೆ, ಸೋನಾಕ್ಷಿ ಸಿನ್ಹಾ, ಶೋಭಿತಾ ಧೂಳಿಪಾ, ಕೀರ್ತಿ ಸುರೇಶ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೂಡ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಈ ವರ್ಷದ ಅದ್ದೂರಿ ಮದುವೆಯಾಗಿದೆ. ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದು, ಮುಂಬೈನಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ ದೇಶ ವಿದೇಶಗಳ ಗಣ್ಯರು ಭಾಗವಹಿಸಿದ್ದರು. ಹಾಗಾದರೆ 2024ರ ವರ್ಷದಲ್ಲಿ ಸಾಕಷ್ಟು ಸದ್ದು ಮಾಡಿದ ವಿವಾಹಗಳು ಯಾವುವು ಎನ್ನುವ ಮಾಹಿತಿ ಇಲ್ಲಿದೆ.

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್
ಜುಲೈ 12ರಂದು ಮುಂಬೈನಲ್ಲಿ ಹಿಂದೂ ಸಂಪ್ರದಾಯದಂತೆ ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಮದುವೆಯಾದರು. ಜುಲೈ 13ರಂದು ಶುಭ ಆಶೀರ್ವಾದ ಕಾರ್ಯಕ್ರಮ ನಡೆಯಿತು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ದಂಪತಿಗಳಿಗೆ ಶುಭ ಹಾರೈಸಿದ್ದರು. ಜುಲೈ 14ರಂದು ನಡೆದ ಅದ್ಧೂರಿ ಆರತಕ್ಷತೆಯಲ್ಲಿ ದೇಶ ವಿದೇಶಗಳ ಗಣ್ಯರು, ಸೆಲೆಬ್ರಿಟಿಗಳು ಭಾಗವಹಿಸಿದ್ದರು.
ಜಾನ್ ಸೀನಾ, ಟೋನಿ ಬ್ಲೇರ್, ಬೋರಿಸ್ ಜಾನ್ಸನ್, ಪ್ರಿಯಾಂಕ್ ಚೋಪ್ರಾ, ನಿಕ್ ಜೋನಾಸ್, ರಜನಿಕಾಂತ್, ಯಶ್, ಮಹೇಶ್ ಬಾಬು, ಶಾರುಖ್ ಖಾನ್, ಸಲ್ಮಾನ್ ಖಾನ್, ಅಜಯ್ ದೇವಗನ್, ವಿಕ್ಕಿ ಕೌಶಲ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಶಾಹಿದ್ ಕಪೂರ್, ರಣಬೀರ್ ಕಪೂರ್, ಆಲಿಯಾ ಭಟ್, ಕತ್ರಿನಾ ಕೈಫ್, ಮತ್ತು ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.
ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್
ಬಾಲಿವುಡ್ ನಟಿ, ಹಿರಿಯ ರಾಜಕಾರಣಿ ಶತ್ರುಜ್ಞ ಸಿನ್ಹಾ ಅವರ ಪುತ್ರಿ ಸೋನಾಕ್ಷಿ ಸಿನ್ಹಾ ತಮ್ಮ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್‌ರನ್ನು ಜೂನ್ 23ರಂದು ಮದುವೆಯಾದರು. ಮುಂಬೈನ ತಮ್ಮ ನಿವಾಸದಲ್ಲಿ ಆಪ್ತರ ಸಮ್ಮುಖದಲ್ಲಿ ಈ ಜೋಡಿ ಮದುವೆದರು. ಸಾಯಿರಾ ಬಾನು, ರೇಖಾ, ಸಲ್ಮಾನ್ ಖಾನ್, ವಿದ್ಯಾ ಬಾಲನ್ ಮತ್ತು ಸಿದ್ಧಾರ್ಥ್ ರಾಯ್ ಕಪೂರ್ ಮತ್ತಿತರ ನಟರು ಭಾಗವಹಿಸಿ ನವದಂಪತಿಗಳಿಗೆ ಶುಭ ಕೋರಿದ್ದರು.
ನಾಗ ಚೈತನ್ಯ - ಶೋಭಿತಾ ಧೂಳಿಪಾಲ
ಸಮಂತಾಗೆ ವಿಚ್ಛೇದನ ನೀಡಿದ ಬಳಿಕ ನಾಗ ಚೈತನ್ಯ ಎರಡನೇ ಮದುವೆಯಾದರು. ಡಿಸೆಂಬರ್ 4ರಂದು ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಶೋಭಿತಾ ಧೂಳಿಪಾಲ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಅದಿತಿ ರಾವ್ ಹೈದರಿ - ಸಿದ್ದಾರ್ಥ್
ತೆಲುಗು, ತಮಿಳು ಚಿತ್ರರಂಗದ ಜನಪ್ರಿಯ ನಟ ಸಿದ್ಧಾರ್ಥ್ ಸರಳವಾಗಿ ತಮ್ಮ ಬಹುಕಾಲದ ಗೆಳಗಿ ಅದಿತಿ ರಾವ್ ಹೈದರಿ ಅವರನ್ನು ಮದುವೆಯಾದರು. ಸರಳವಾಗಿ ಮದುವೆಯಾದ ಈ ಜೋಡಿ ಬಳಿ ಸೋಷಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಹಂಚಿಕೊಂಡಿತ್ತು.
ಮದುವೆಯಾದ ಕೀರ್ತಿ ಸುರೇಶ್
ಕೀರ್ತಿ ಸುರೇಶ್ ತಮ್ಮ ಬಹುಕಾಲದ ಗೆಳೆಯ ಆಂಥೋನಿ ತಟ್ಟಿಲ್‌ರ ಜೊತೆ ಮದುವೆಯಾದರು. ಬಾಲಿವುಡ್‌ನಲ್ಲಿ ಮೊದಲ ಸಿನಿಮಾ ಬಿಡುಗಡೆಯಾಗುತ್ತಿರುವ ಖುಷಿಯಲ್ಲಿರುವ ಕೀರ್ತಿ ಸುರೇಶ್ ಗೋವಾದಲ್ಲಿ ಸರಳವಾಗಿ ತಮ್ಮ ಆಪ್ತರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾದರು. ಬಳಿಕ ಕ್ರಿಶ್ಚಿಯನ್ ಸಂಪ್ರದಾಯದಂತೆ ಕೂಡ ಈ ಜೋಡಿ ಮದುವೆ ಮಾಡಿಕೊಂಡಿತು.












Click it and Unblock the Notifications