Year Ender 2022: ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಮಹಿಳೆಯರು
ನವದೆಹಲಿ, ಡಿಸೆಂಬರ್ 14: ಜಗತ್ತು ಮುಂದೆ ಸಾಗುತ್ತಿದೆ. ನೋಡ ನೋಡುತ್ತಿದ್ದಂತೆ 2022ರ ವರ್ಷ ಮುಗಿದು ಹೋಗುತ್ತಿದೆ. 2023ರ ಹೊಸ್ತಿಲಿಗೆ ಕಾಲಿಡುತ್ತಿರುವ ಜನರು ತಮ್ಮ ಹಳೆ ವರ್ಷದ ಸುದ್ದಿಗಳ ಬಗ್ಗೆ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
2022ರಲ್ಲಿ ತಾವು ನಡೆದು ಬಂದಿರುವ ಹಾದಿ, ದೇಶದಲ್ಲಿ ನಡೆದಿರುವ ಬೆಳವಣಿಗೆಗಳು, ಅದರ ಸುತ್ತಲೂ ಸುದ್ದಿ ಮಾಡಿದ ವ್ಯಕ್ತಿಗಳನ್ನು ಮತ್ತೊಂದು ಬಾರಿ ನೆನಪಿಸಿಕೊಳ್ಳುವತ್ತ ಜನರು ಲಕ್ಷ್ಯ ವಹಿಸಿದ್ದಾರೆ. ಬ್ರೇಕಿಂಗ್ ಸುದ್ದಿಗಳ ಹುಡುಕಾಟದಲ್ಲಿ ಸೋಷಿಯಲ್ ಮೀಡಿಯಾ ಇತ್ತೀಚಿನ ದಿನಗಳಲ್ಲಿ ಸಖತ್ ಟ್ರೆಂಟ್ ಕ್ರಿಯೇಟ್ ಮಾಡುತ್ತಿದೆ.
ಸಾಮಾಜಿಕ ಜಾಲತಾಣಕ್ಕೆ ಹೊಂದಿಕೊಂಡಿರುವ ಜನರು ಸಹ ಸುದ್ದಿಗಳಿಗೆ ಕೆದಕುತ್ತಾರೆ. ಹೀಗೆ 2022ರಲ್ಲಿ ಭಾರತದ ಯಾವ ಮಹಿಳೆಯರ ಬಗ್ಗೆ ಜನರು ಅತಿಹೆಚ್ಚು ಹುಟುಕಾಟ ನಡೆಸಿದ್ದಾರೆ. ಈ ಮಹಿಳೆಯರು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡಿದ್ದು ಏಕೆ? ಯಾವ ಕಾರಣಕ್ಕಾಗಿ ಈ ಮಹಿಳೆಯರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಕ್ರಿಯೇಟ್ ಆಯಿತು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಬಿಜೆಪಿ ಮಾಜಿ ನಾಯಕಿ ನೂಪುರ್ ಶರ್ಮಾ
ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಸಾಲಿನಲ್ಲಿ ನೂಪುರ್ ಶರ್ಮಾ ಹೆಸರು ಮೊದಲಿಗೆ ನಿಲ್ಲುತ್ತದೆ. ಭಾರತೀಯ ಜನತಾ ಪಕ್ಷದ ಮಾಜಿ ವಕ್ತಾರೆ ಆಗಿದ್ದ ನೂಪುರ್ ಶರ್ಮಾ, ಸುದ್ದಿ ವಾಹಿನಿಯೊಂದರ ಚರ್ಚೆ ಸಂದರ್ಭದಲ್ಲಿ ರಾಷ್ಟ್ರೀಯ ದೂರದರ್ಶನದಲ್ಲಿ ಪ್ರವಾದಿ ಮುಹಮ್ಮದ್ ಕುರಿತು ನೀಡಿದ ಹೇಳಿಕೆಯು ಭಾರೀ ವಿವಾದವನ್ನು ಸೃಷ್ಟಿಸಿತು. ಅವರ ಹೇಳಿಕೆಗಳು ಹಲವಾರು ಧಾರ್ಮಿಕ ಕ್ಷೇತ್ರಗಳ ನಡುವೆ ರಾಷ್ಟ್ರವ್ಯಾಪಿ ಚರ್ಚೆಯನ್ನು ಹುಟ್ಟುಹಾಕಿದವು. ನಾಗರಿಕರು ಈ ವಿಷಯದ ಬಗ್ಗೆ ಹಲವಾರು ಅಭಿಪ್ರಾಯಗಳೊಂದಿಗೆ ಟೀಕಾಪ್ರಹಾರ ನಡೆಸಿದರು. ಈ ಹಿನ್ನಡೆಯ ನಂತರ ಬಿಜೆಪಿಯು ನೂಪುರ್ ಶರ್ಮಾ ಅನ್ನು ಪಕ್ಷದಿಂದ ಅಮಾನತುಗೊಳಿಸಿತು. ಅದೇ ಕಾರಣಕ್ಕೆ ಗೂಗಲ್ ಅಂಗಳದಲ್ಲಿ ನೂಪುರ್ ಶರ್ಮಾ ಹೆಸರು ಅತಿಹೆಚ್ಚು ಹುಡುಕಾಡಲ್ಪಟ್ಟಿತು.

ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು ಈ ವರ್ಷ ಭಾರತದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಎರಡನೇ ವ್ಯಕ್ತಿಯಾಗಿದ್ದಾರೆ. ಇವರ ಕಥೆಯು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿತು. 64 ವರ್ಷದ ದ್ರೌಪದಿ ಮುರ್ಮು ಬುಡಕಟ್ಟು ಸಮುದಾಯದಿಂದ ಇಲ್ಲಿಯವರೆಗೆ ಬಂದು ರಾಷ್ಟ್ರಪತಿಯಾಗಿ ಬಂದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕಳೆದ ಜುಲೈ 25, 2022ರಂದು ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕರಿಸಿದರು. ಭಾರತದ 15ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆ ಮೂಲಕ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ನಂತರ ರಾಷ್ಟ್ರಪತಿಯಾಗಿ ಆಯ್ಕೆಯಾದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ನಟಿ ಸುಷ್ಮಿತಾ ಸೇನ್
ಮಾಜಿ ವಿಶ್ವ ಸುಂದರಿ ಸುಷ್ಮಿತಾ ಸೇನ್ 2022ರಲ್ಲಿ ಭಾರತದಲ್ಲಿ ಅಂತರ್ಜಾಲದಲ್ಲಿ ಐದನೇ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಯಾಗಿದ್ದಾರೆ. ಇವರು ವಿವಿಧ ಕಾರಣಗಳಿಗಾಗಿ ಸುದ್ದಿಯಲ್ಲಿ ಕಾಣಿಸಿಕೊಂಡಿದ್ದರು. ಹಾಟ್‌ಸ್ಟಾರ್ ಥ್ರಿಲ್ಲರ್ ಶೋ ಆರ್ಯ ಯಶಸ್ವಿ ಸೀಸನ್‌ಗಳಲ್ಲಿ ನಟಿಸಿದ ಸೇನ್, ಅವರ ಅತ್ಯುತ್ತಮ ಅಭಿನಯಕ್ಕಾಗಿ ಈ ವರ್ಷ ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ವರ್ಕಿಂಗ್ ವುಮೆನ್ ಪ್ರಶಸ್ತಿ ಮತ್ತು ಹಲವಾರು ಇತರ ಪುರಸ್ಕಾರಗಳನ್ನು ನೀಡಲಾಯಿತು. ಇವರ ಬಗ್ಗೆ ಭಾರತೀಯ ಪ್ರೇಕ್ಷಕರನ್ನು ಆಕರ್ಷಿಸಿದ ಮತ್ತೊಂದು ಸುದ್ದಿಯೆಂದರೆ, ಸಾಮಾಜಿಕ ಮಾಧ್ಯಮದ ಮೂಲಕ ಉದ್ಯಮಿ ಲಲಿತ್ ಮೋದಿ ಅವರೊಂದಿಗಿನ ಸಂಪರ್ಕದ ಬಗ್ಗೆ ಘೋಷಿಸಿದ್ದರು.
ತನ್ನನ್ನು ತಾನು ಕಂಡುಕೊಂಡ ಕೆಲವು ವಿವಾದಗಳ ನಡುವೆ ಯಾವಾಗಲೂ ತನ್ನ ಘನತೆಯನ್ನು ಇಟ್ಟುಕೊಂಡಿರುವ ಸುಷ್ಮಿತಾ ಸೇನ್, ತನ್ನ ಇಮೇಜ್ ಅನ್ನು ಕೆಡಿಸಿರುವ ಮತ್ತು ಅವರನ್ನು ಚಿನ್ನ ಅಗೆಯುವವಳು ಎಂದ ಟ್ರೋಲ್‌ಗಳಿಗೆ ತಿರುಗೇಟು ಕೊಟ್ಟರು. "ನಾನು ಚಿನ್ನಕ್ಕಿಂತ ಆಳಕ್ಕೆ ಅಗೆಯುತ್ತೇನೆ" ಎಂದು ಉಲ್ಲೇಖಿಸಿದ್ದರು.

ನರ್ತಕಿ ಅಂಜಲಿ ಅರೋರಾ
ಸೋಷಿಯಲ್ ಮೀಡಿಯಾದಲ್ಲಿ ನರ್ತಕಿ ಅಂಜಲಿ ಅರೋರಾ ಕೂಡ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದ್ದರು. ಆ ಮೂಲಕ ಭಾರತದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳಲ್ಲಿ ಆರನೇ ಸ್ಥಾನವನ್ನು ಗಳಿಸಿದ್ದಾರೆ. ಅಂಜಲಿ ಅರೋರಾ ಅವರು ಕಂಗನಾ ರಣಾವತ್ ಬೆಂಬಲಿತ ರಿಯಾಲಿಟಿ ಶೋ ಲಾಕ್ ಅಪ್‌ನಲ್ಲಿ ಭಾಗವಹಿಸಿದರು. ಅವರ ಸ್ಪರ್ಧಾತ್ಮಕ ಸಾಮರ್ಥ್ಯದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖವಾಗಿ ಗಮನ ಸೆಳೆದಿದ್ದರು.
ಹಾಲಿವುಡ್‌ನ ವಿಚ್ಛೇದನ ಪ್ರಕರಣಗಳಲ್ಲಿ ಒಂದಾದ ಅಂಬರ್ ಹರ್ಡ್ ಮತ್ತು ಜಾನಿ ಡೆಪ್ ದಂಪತಿಗಳು ನ್ಯಾಯಾಲಯದಲ್ಲಿ ಹೋರಾಡಿದ್ದರಿಂದ ಹಲವಾರು ತಿಂಗಳುಗಳ ಕಾಲ ಸುದೀರ್ಘ ಸುದ್ದಿಯಲ್ಲಿದ್ದರು. ಈ ನ್ಯಾಯಾಲಯದ ವಿಚಾರಣೆಯು ಮಾನನಷ್ಟ ಮೊಕದ್ದಮೆಯ ವಿಚಾರಣೆಯಾಗಿದ್ದೇ ವಿನಃ ವಿಚ್ಛೇದನ ಪ್ರಕರಣವಾಗಿರಲಿಲ್ಲ. ಈ ಹಂತದಲ್ಲಿ ಮಾಧ್ಯಮಗಳು ಮತ್ತು ಸಾರ್ವಜನಿಕ ವಿಚಾರಣೆಯು ಹರ್ಡ್ ಅನ್ನು ಗುರಿಯಾಗಿಟ್ಟುಕೊಂಡು ತೀರ್ಪು ಪ್ರಕಟಿಸುವ ಮೊದಲೇ ಅವಳನ್ನು ನಕಾರಾತ್ಮಕವಾಗಿ ಚಿತ್ರಿಸಿದವು.












Click it and Unblock the Notifications