Year End 2024: ಈ ವರ್ಷ ಟ್ರ್ಯಾಕ್‌ಗೆ ಇಳಿದ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳೆಷ್ಟು? ಮಾರ್ಗಗಳು

ಬೆಂಗಳೂರು, ಡಿಸೆಂಬರ್ 08: ಭಾರತೀಯ ರೈಲು ಸಾರಿಗೆಯಲ್ಲಿ ಮಹತ್ವದ ಹೆಗ್ಗುರುತು ಮೂಡಿಸಿರುವ ವೇಗ ಹಾಗೂ ಪ್ರಯಾಣಿಕರಿಗೆ ಐಶಾರಾಮಿ ಸೇವೆ ನೀಡುವ ವಂದೇ ಭಾರತ್ ರೈಲುಗಳು ಕಾರ್ಯಾಚರಣೆ ನಡೆಸುತ್ತಿವೆ. ಈ ವರ್ಷವು ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಹೊಸ ವಂದೇ ಭಾರತ್ ರೈಲುಗಳು ಬೇರೆ ಬೇರೆ ಮಾರ್ಗಗಳಲ್ಲಿ ಲೋಕಾರ್ಪಣೆಗೊಂಡು ಸೇವೆಗೆ ನಿಯೋಜನೆಗೊಂಡಿವೆ. ರೈಲು ಸಾರಿಗೆಯಲ್ಲಿ ಕ್ರಾಂತಿ ಉಂಟು ಮಾಡುತ್ತಿವೆ.

ಇನ್ನೇನು ಕೆಲವೇ ದಿನಗಳಲ್ಲಿ 2024 ವರ್ಷ ಮುಗಿಯಲಿದೆ. ಹಾಗಾದರೆ ಈ ವರ್ಷ ಎಷ್ಟು ವಂದೇ ಭಾರತ್ ರೈಲುಗಳು ಹಳಿಗೆ ಇಳಿದಿವೆ ಎಂದು ತಿಳಿಯೋಣ. ಭಾರತದಲ್ಲಿ ಸದ್ಯ 66 ಸೆಮಿ ಹೈಸ್ಪೀಡ್ ವಂದೇ ಭಾರತ್ ರೈಲುಗಳು ಟ್ರ್ಯಾಕ್‌ ಮೇಲಿವೆ. 2019ರ ಫೆಬ್ರವರಿಯಲ್ಲಿ ಮೊದಲ ವಂದೇ ಭಾರತ್ ರೈಲು ಸೇವೆ ದೆಹಲಿಯಿಂದ ವಾರಣಾಸಿವರೆಗೆ ಆರಂಭವಾಯಿತು. 'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮದ ಭಾಗವಾಗಿ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ಮೊದಲ ವಂದೇ ಭಾರತ್ ರೈಲು ನಿರ್ಮಾಣಗೊಂಡಿದೆ.

Year End 2024 India has 25 Vande Bharat Express Trains Introduced in 2024 Know Routes

ರೈಲ್ವೆ ಇಲಾಖೆ ಸದ್ಯ ವಂದೇ ಭಾರತ್ ಸ್ಲೀಪರ್ ರೈಲು ಪರಿಚಯಿಸುವ ತವಕದಲ್ಲಿದೆ. ಈ ರೈಲನ್ನು ಬೆಂಗಳೂರು ಮೂಲದ ಬೆಮೆಲ್ (BEML) ಕಂಪನಿಯು ತಯಾರಿಸಿತ್ತಿದೆ. ಆದರೆ ಇತ್ತೀಚಿನ ವರದಿ ಪ್ರಕಾರ, ಈ ರೈಲು ಟ್ರ್ಯಾಕ್‌ಗೆ ಇಳಿಯುವುದು ತುಸು ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಹೊಸದಾಗಿ 25 ವಂದೇ ಭಾರತ್ (ವಿಬಿ) ರೈಲುಗಳು

2019ರಿಂದ ಕ್ರಮೇಣ ರೈಲುಗಳ ಸಂಖ್ಯೆಯನ್ನು ಏರಿಕೆ ಮಾಡುತ್ತಾ ಬರಲಾಗಿದೆ. ವಾರ್ಷಿಕವಾಗಿಯು ಹೊಸ ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಸೇವೆ ಆರಂಭಿಸಲಾಗಿದೆ. ಈ ವರ್ಷ 2024ರಲ್ಲಿ ಬರೋಬ್ಬರಿ 25 ವಂದೇ ಭಾರತ್ ರೈಲುಗಳನ್ನು ವಿವಿಧ ಮಾರ್ಗಗಳಲ್ಲಿ ಪರಿಚಯಿಸಲಾಗಿದೆ.

Year End 2024 India has 25 Vande Bharat Express Trains Introduced in 2024 Know Routes

2024ರ ಮಾರ್ಚ್ ತಿಂಗಳಲ್ಲಿ ಒಟ್ಟು 09 ವಂದೇ ಭಾರತ್ ರೈಲುಗಳು ಹೊಸದಾಗಿ ಸೇವೆ ಆರಂಭಿಸಿದವು. ಬಳಿಕ ಆಗಸ್ಟ್ ತಿಂಗಳಲ್ಲಿ ಒಟ್ಟು 03 ರೈಲುಗಳು ಹಾಗೂ ಸೆಪ್ಟಂಬರ್‌ ನಲ್ಲಿ ಬೇರೆ ಬೇರೆ ದಿನಗಳಲ್ಲಿ ಸೇರಿ ಒಟ್ಟು 12 ವಿಬಿ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಯಿತು.

ಇದರಲ್ಲಿ ಸೆಪ್ಟಂಬರ್ 15ರಂದು ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ 10 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದಾರೆ. ಇದರಲ್ಲಿ ಕರ್ನಾಟಕದ ಹುಬ್ಬಳ್ಳಿಯಿಂದ ಪುಣೆ ರೈಲು ಸೇವೆಯು ಇದೆ.

ಈ ವರ್ಷ 'ವಿಬಿ' ರೈಲುಗಳ ಮಾರ್ಗಗಳು

ಈ ವರ್ಷ ಆರಂಭವಾದ ವಂದೇ ಭಾರತ್ ರೈಲುಗಳ ಪೈಕಿ ಟಾಟಾನಗರ-ಪಾಟ್ನಾ, ಭಾಗಲ್ಪುರ-ದುಮ್ಕಾ-ಹೌರಾ,ಬ್ರಹ್ಮಪುರದಿಂದ ಟಾಟಾನಗರ, ಗಯಾ-ಹೌರಾ, ದಿಯೋಘರ್-ವಾರಣಾಸಿ, ರೂರ್ಕೆಲಾದಿಂದ ಹೌರಾ, ರಾಂಚಿ-ವಾರಣಾಸಿ, ಮಧುರೈ-ಬೆಂಗಳೂರು ಕಂಟೋನ್ಮೆಂಟ್, ಉದಯಪುರ್-ಆಗ್ರಾ ಕಂಟೋನ್ಮೆಂಟ್, ಹುಬ್ಬಳ್ಳಿ-ಪುಣೆ, ಬೆಂಗಳೂರು SMVT- ಕಲಬುರಗಿ ಮಾರ್ಗವು ಸೇರಿದಂತೆ ವಿವಿಧ ರಾಜ್ಯಗಳ ಅನೇಕ ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳು ಸೇವೆ ನೀಡುತ್ತಿವೆ.

ಮುಂದಿನ ವರ್ಷ 2025ರಲ್ಲಿ ಕೇಂದ್ರ ರೈಲ್ವೆ ಇಲಾಖೆಯು ಮತ್ತೆ 10 ವಂದೇ ಭಾರತ್ ರೈಲುಗಳನ್ನು ಲೋಕಾರ್ಪಣೆ ಮಾಡಲಿವೆ. ಅಲ್ಲದೇ ವಂದೇ ಭಾರತ್ ಸ್ಲೀಪರ್ ರೈಲುಗಳ ಸಹ ಇದರಲ್ಲಿರಲಿವೆ ಎನ್ನಲಾಗಿದೆ. ಇನ್ನೂ ದೇಶದಲ್ಲಿರುವ ಒಟ್ಟು 66 ವಂದೇ ಭಾರತ್ ರೈಲುಗಳಲ್ಲಿ 08, 12 ಕೋಚ್‌ಗಳ ರೈಲುಗಳು ಇವೆ.

2030ಕ್ಕೆ ವಂದೇ ಭಾರತ್ ರೈಲುಗಳು 800ಕ್ಕೆ ಏರಿಕೆ ಸಾಧ್ಯತೆ

ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ದೇಶದ ಮೂಲೆ ಮೂಲೆಗಳಿಗೂ ವಂದೇ ಭಾರತ್ ರೈಲು ಸಿಗುವಂತೆ ಮಾಡುವ ಉದ್ದೇಶ ದೊಂದಿದೆ. ಈ ಕಾರಣದಿಂದಲೇ ಪ್ರಸಕ್ತ 66 ಇರುವ ವಂದೇ ಭಾರತ್ ರೈಲುಗಳ ಸಂಖ್ಯೆಯನ್ನು 2030 ಹೊತ್ತಿಗೆ 800ಕ್ಕೆ ಏರಿಸುವ ಗುರಿ ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಹಾಗು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕಾರ್ಯ ಪ್ರವೃತ್ತರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+