2016 ಹಿನ್ನೋಟ: ದೇಶದಲ್ಲಿ ನಡೆದ ಚುನಾವಣೆ ಮತ್ತು ಫಲಿತಾಂಶ

Posted By:
Subscribe to Oneindia Kannada

2016ರ ಇಸವಿ ದೇಶದ ರಾಜಕೀಯ ಪಕ್ಷಗಳಿಗೆ ತಮ್ಮ ಛಾಪು ಮೂಡಿಸಲು ನಿರ್ಣಾಯಕವಾದಂತಹ ವರ್ಷ. ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆ ರಾಷ್ಟ್ರೀಯ ಪಕ್ಷಗಳಿಗೆ ಜೊತೆಗೆ ಪ್ರಾದೇಶಿಕ ಪಕ್ಷಗಳಿಗೂ ಮಹತ್ವದ ಚುನಾವಣೆಯಾಗಿತ್ತು.

ತಮಿಳುನಾಡು, ಕೇರಳ, ಪುದುಚೇರಿ, ಪಶ್ಚಿಮಬಂಗಾಳ ಮತ್ತು ಅಸ್ಸಾಂ ರಾಜ್ಯಗಳ ವಿಧಾನಸಭೆಗೆ ವರ್ಷದ ಮೊದಲಾರ್ಥದಲ್ಲಿ ಚುನಾವಣೆ ನಡೆಯಿತು. (ಅಮ್ಮ ರಿಟರ್ನ್ಸ್, ತಮಿಳುನಾಡಿನಲ್ಲಿ ಎಐಎಡಿಎಂಕೆ ದಾಖಲೆ)

ಇದರ ಜೊತೆಗೆ ಲೋಕಸಭಾ ಕ್ಷೇತ್ರಕ್ಕೆ ಮತ್ತು ಹಲವು ರಾಜ್ಯಗಳ ಅಸೆಂಬ್ಲಿಗಾಗಿ ಉಪಚುನಾವಣೆ ನಡೆಯಿತು. ಇದರಲ್ಲಿ ನೋಟು ನಿಷೇಧದ ನಂತರ ನಾಲ್ಕು ಲೋಕಸಭಾ ಕ್ಷೇತ್ರಕ್ಕೆ ನಡೆದ ಬೈಎಲೆಕ್ಷನ್ ಪ್ರಮುಖವಾದದ್ದು.

ಇದರ ಜೊತೆಗೆ ಫೆಬ್ರವರಿ ತಿಂಗಳಲ್ಲಿ, ಕೋಮು ಗಲಭೆಯಿಂದ ರಾಷ್ಟ್ರ ಮಟ್ಟದಲ್ಲಿ ಕುಖ್ಯಾತಿ ಪಡೆದಿದ್ದ ಉತ್ತರಪ್ರದೇಶದ ಮುಜಫರ್ ನಗರ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಯೂ ಒಂದು, ಇದಲ್ಲದೇ ಕರ್ನಾಟಕದ ಮೂರು ಅಸೆಂಬ್ಲಿ ಸ್ಥಾನಕ್ಕೆ ಚುನಾವಣೆ ನಡೆಯಿತು.

2016ರಲ್ಲಿ ವಿಧಿವಶರಾದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಆರೋಗ್ಯದ ವಿಚಾರದಲ್ಲಿನ ಗೊಂದಲದ ನಡುವೆ ನಡೆದ ಮೂರು ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಯೂ ಪ್ರಮುಖವಾದದ್ದು.

2016ರಲ್ಲಿ ನಡೆದ ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆ ಮತ್ತು ಪ್ರಮುಖ ಲೋಕಸಭಾ, ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶದ ನೋಟ, ಮುಂದೆ ಓದಿ..

ಎಐಎಡಿಎಂಕೆ

ಎಐಎಡಿಎಂಕೆ

ನವೆಂಬರ್ 19ರಂದು ಅರಾವಕುರಿಚಿ, ತಂಜಾವೂರು ಮತ್ತು ತಿರುಪಾರಕುಂದ್ರಂ ಅಸೆಂಬ್ಲಿ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಎಲ್ಲಾ ಮೂರು ಕ್ಷೇತ್ರಗಳಲ್ಲಿ ಎಐಎಡಿಎಂಕೆ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಿದ್ದರು.

ಕರ್ನಾಟಕ ಮತ್ತು ಮುಜಫರ್ ನಗರ

ಕರ್ನಾಟಕ ಮತ್ತು ಮುಜಫರ್ ನಗರ

ಫೆಬ್ರವರಿ ತಿಂಗಳಲ್ಲಿ ಮೂರು ಕ್ಷೇತ್ರಕ್ಕೆ (ಬೆಂಗಳೂರು ಹೆಬ್ಬಾಳ, ದೇವದುರ್ಗ ಮತ್ತು ಬೀದರ್) ಉಪ ಚುನಾವಣೆ ನಡೆಯಿತು. ಇದರಲ್ಲಿ ಹೆಬ್ಬಾಳ ಮತ್ತು ದೇವದುರ್ಗ ಸ್ಥಾನವನ್ನು ಬಿಜೆಪಿ ಗೆದ್ದರೆ, ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಸಾಧಿಸಿತು. ಉತ್ತರಪ್ರದೇಶದ ಮುಜಫರ್ ನಗರ ಕ್ಷೇತ್ರದಲ್ಲಿ ಬಿಜೆಪಿ ತಮ್ಮ ಸಮೀಪದ ಎಸ್ಪಿ ಅಭ್ಯರ್ಥಿಯನ್ನು ಸೋಲಿಸಿದ್ದರು.

ನಾಲ್ಕು ಲೋಕಸಭಾ ಸ್ಥಾನ

ನಾಲ್ಕು ಲೋಕಸಭಾ ಸ್ಥಾನ

ಅಪನಗದೀಕರಣದ ನಂತರ ನಡೆದ ನಾಲ್ಕು ಲೋಕಸಭಾ ಸ್ಥಾನ ಮತ್ತು ವಿವಿಧ ರಾಜ್ಯಗಳ ಎಂಟು ರಾಜ್ಯಗಳ ಅಸೆಂಬ್ಲಿಗಾಗಿ ನವೆಂಬರ್ ತಿಂಗಳಲ್ಲಿ ಚುನಾವಣೆ ನಡೆದಿತ್ತು. ಇದರ ಫಲಿತಾಂಶದಲ್ಲಿ ಟಿಎಂಸಿ ಮತ್ತು ಬಿಜೆಪಿ ತಲಾ ಎರಡು ಲೋಕಸಭಾ ಸ್ಥಾನವನ್ನು ಗೆದ್ದರೆ, ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ, ಕಾಂಗ್ರೆಸ್, ಎಸ್ಪಿ, ಸಿಪಿಐ(ಎಂ), ಟಿಆರ್ಎಸ್ ಪಕ್ಷದ ಅಭ್ಯರ್ಥಿಗಳು ಜಯಸಾಧಿಸಿದರು.

ಅಸ್ಸಾಂ

ಅಸ್ಸಾಂ

ಮತದಾನದ ದಿನಾಂಕ: 4 ಏಪ್ರಿಲ್ 2016 ಮತ್ತು 11 ಏಪ್ರಿಲ್2016
ಒಟ್ಟು ಸ್ಥಾನಗಳು: 126
ಬಿಜೆಪಿ ನೇತೃತ್ವದ ಎನ್ಡಿಎ : 86
ಕಾಂಗ್ರೆಸ್ : 26
ಇತರರು : 14

ತಮಿಳುನಾಡು

ತಮಿಳುನಾಡು

ಮತದಾನದ ದಿನಾಂಕ: 16.05.16
ಒಟ್ಟು ಸ್ಥಾನಗಳು: 232
ಎಐಎಡಿಎಂಕೆ + - 134
ಡಿಎಂಕೆ + - 89
ಇತರರು : 09

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳ

ಮತದಾನದ ದಿನಾಂಕ: 4 ಏಪ್ರಿಲ್ 2016 ರಿಂದ 5 ಮೇ 2016
ಒಟ್ಟು ಸ್ಥಾನಗಳು: 294
ತೃಣಮೂಲ ಕಾಂಗ್ರೆಸ್ - 211
ಕಾಂಗ್ರೆಸ್ - 44
ಎಡಪಕ್ಷ - 32
ಬಿಜೆಪಿ - 06
ಇತರರು : 01

ಕೇರಳ

ಕೇರಳ

ಮತದಾನದ ದಿನಾಂಕ: 16.05.16
ಒಟ್ಟು ಸ್ಥಾನಗಳು: 140
ಎಲ್ಡಿಎಫ್ - 91
ಯುಡಿಎಫ್ - 47
ಇತರರು : 01

ಪುದುಚೇರಿ

ಪುದುಚೇರಿ

ಮತದಾನದ ದಿನಾಂಕ: 16.05.16
ಒಟ್ಟು ಸ್ಥಾನಗಳು: 30
ಕಾಂಗ್ರೆಸ್ - 15
ಡಿಎಂಕೆ - 2
AINRC - 8
ಎಐಎಡಿಎಂಕೆ - 4
ಇತರರು : 01

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Year 2016: Bypoll result of 4 Loksabha seat and bypoll of various assembly seats and results of Five state assembly held in year 2016.
Please Wait while comments are loading...