Yash’s Toxic: ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಸಿನಿಮಾಗೆ ಹೊಸ ಧಾರ್ಮಿಕ ಸಂಕಷ್ಟ, ಏನದು
Yash Toxic: ನಟ ಯಶ್ ಅವರು ಅಭಿನಯಿಸಿರುವ ಹಾಗೂ ಸಂಭಾಷಣೆ ಬರೆದಿರುವ, ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಟಾಕ್ಸಿಕ್‌ಗೆ ಸಂಬಂಧಿಸಿದಂತೆ ಹೊಸ ಸಂಕಷ್ಟ ಎದುರಾಗಿದೆ. ನಟ ಯಶ್ ಅವರ ಟಾಕ್ಸಿಕ್ ಸಿನಿಮಾದ ಟೀಸರ್ ಬಿಡುಗಡೆಯಾದಾಗಲೇ ಭಾರೀ ವಿಮರ್ಶೆ ಹಾಗೂ ಟೀಕೆಗಳು ವ್ಯಕ್ತವಾಗಿದ್ದವು. ಇದೀಗ ಮತ್ತೊಂದು ಧಾರ್ಮಿಕ ಸಂಕಷ್ಟ ಎದುರಾಗಿದ್ದು, ಈ ಸವಾಲನ್ನು ಚಿತ್ರತಂಡವು ಹೇಗೆ ಎದುರಿಸಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ.
ನಟ ಯಶ್ ಅವರ ಬಹು ನಿರೀಕ್ಷಿತ ಸಿನಿಮಾ ಟಾಕ್ಸಿಕ್‌ಗೆ ಈಗಾಗಲೇ ಧುರಂಧರ್ 2ನಿಂದ ಭಾರೀ ಪೈಪೋಟಿ ಎದುರಾಗಿದೆ. ಟಾಕ್ಸಿಕ್ ಹಾಗೂ ಧುರಂಧರ್ ಸಿನಿಮಾ ಎರಡೂ ಒಂದೇ ದಿನ ಬಿಡುಗಡೆ ಆಗಲಿದೆ. ಈ ರೀತಿ ಇರುವಾಗ ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ಸಂಕಷ್ಟ ಶುರುವಾಗಿದೆ.

ನಟ ಯಶ್ ಅವರು ಅಭಿನಯಿಸಿರುವ ಬಹು ನಿರೀಕ್ಷಿತ ಚಿತ್ರ ಟಾಕ್ಸಿಕ್ ಸಿನಿಮಾಗೆ ಸವಾಲುಗಳು ಹೆಚ್ಚಾಗಿವೆ. ದೇಶದಾದ್ಯಂತ ಭಾರೀ ಸದ್ದು ಮಾಡಿರುವ ಹಾಗೂ ಕೆಜಿಎಫ್2ನ ನಂತರ ಬಿಡುಗಡೆ ಆಗುತ್ತಿರುವ ಬಹು ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಆಗಿದೆ. ಕೆಲವೇ ದಿನಗಳ ಹಿಂದಷ್ಟೇ ಟಾಕ್ಸಿಕ್ ಟೀಸರ್ ಬಿಡುಗಡೆಯಾಗಿತ್ತು. ಟಾಕ್ಸಿಕ್‌ನ ಟೀಸರ್ ಬಿಡುಗಡೆಯಾದಾಗಲೂ ಭಾರೀ ವಿರೋಧ ಹಾಗೂ ವಿಮರ್ಶೆಗಳು ನಡೆದಿದ್ದವು. ಅಲ್ಲದೇ ಟೀಸರ್‌ನ ವಿರುದ್ಧ ಕನ್ನಡಿಗರು ಹಾಗೂ ಕೆಲವು ಮಹಿಳಾ ಸಂಘಟನೆಗಳು, ಒಕ್ಕೂಟಗಳಿಂದಲೂ ವಿರೋಧ ವ್ಯಕ್ತವಾಗಿತ್ತು. ಮಕ್ಕಳ ಮೇಲೆ ಈ ದೃಶ್ಯಗಳು ಯಾವ ರೀತಿ ಪರಿಣಾಮ ಬೀರಲಿವೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು.
Yash's Toxic ಟಾಕ್ಸಿಕ್ ಸಿನಿಮಾಗೆ ಧಾರ್ಮಿಕ ಸಂಕಷ್ಟ
ಇನ್ನು ರಾಕಿಂಗ್ ಸ್ಟಾರ್ ಯಶ್ ಅವರು ಟಾಕ್ಸಿಕ್ ಸಿನಿಮಾಗೆ ಇದೀಗ ಧಾರ್ಮಿಕ ಸಂಕಷ್ಟ ಎದುರಾಗಿದೆ. ಹೌದು ರಾಷ್ಟ್ರೀಯ ಕ್ರೈಸ್ತರ ಒಕ್ಕೂಟ (christian association)ವು ಟಾಕ್ಸಿಕ್ ಟೀಸರ್‌ಗೆ ಸಂಬಂಧಿಸಿದಂತೆ ಆಕ್ಷೇಪ ವ್ಯಕ್ತಪಡಿಸಿದೆ. ಟಾಕ್ಸಿಕ್ ಸಿನಿಮಾ ಟೀಸರ್‌ನಲ್ಲಿ ಒಳಗೊಂಡಿರುವ ಅಥವಾ ಬಿಡುಗಡೆ ಆಗಿರುವ ದೃಶ್ಯಗಳಲ್ಲಿ ಕ್ರೈಸ್ತ ಧರ್ಮಕ್ಕೆ ಅಪಮಾನ ಮಾಡಲಾಗಿದ್ದು, ಕ್ರೈಸ್ತರಿಗೆ ಮುಜುಗರ ತರುವ ದೃಶ್ಯಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಿ, ನ್ಯಾಷನಲ್ ಕ್ರಿಶ್ಚಿಯನ್ ಫೆಡರೇಷನ್ (National christian Federation)ನಿಂದ ಚಲನಚಿತ್ರ ವಾಣಿಜ್ಯ ಮಂಡಳಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಗೃಹಸಚಿವರು ಮತ್ತು ಸೆನ್ಸಾರ್ ಬೋರ್ಡ್‌ಗೆ ದೂರು ನೀಡಲಾಗಿದೆ.
ಕ್ರೈಸ್ತರ ದೇವದೂತ ಸಂತ ಮಿಖಯೇಲ್ ಅವರಿಗೆ ಟಾಕ್ಸಿಕ್ ಸಿನಿಮಾದಲ್ಲಿ ಅಪಮಾನ ಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ. ದೇವದೂತರ ಮುಂದೆಯೇ ಅಶ್ಲೀಲ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. ಹೀಗಾಗಿ ಯೂಟ್ಯೂಬ್ ಪೋಸ್ಟ್‌ಗಳನ್ನ ತೆಗೆದುಹಾಕಬೇಕು. ಸಿನಿಮಾದಲ್ಲಿ ಚಿತ್ರೀಕರಣ ಮಾಡಿರುವ ದೃಶ್ಯಗಳನ್ನ ತೆಗೆಯುವಂತೆ ಸೂಚನೆ ನೀಡಬೇಕು ಎಂದು ರಾಷ್ಟ್ರೀಯ ಕ್ರೈಸ್ತರ ಒಕ್ಕೂಟದ ಅಧ್ಯಕ್ಷ ಪ್ರದೀಪ್ ಕುಮಾರ್ ಅವರು ಒತ್ತಾಯಿಸಿದ್ದಾರೆ.
ಮುಂದುವರಿದು ತಕ್ಷಣವೇ ಚಿತ್ರತಂಡ ಸಂತ ಮಿಖಯೇಲ್ ಮುಂದೆ ಚಿತ್ರೀಕರಿಸಿರುವ ದೃಶ್ಯಗಳನ್ನ ತೆಗೆಯಬೇಕು. ಅಪಮಾನ ಮಾಡಿದ್ದಕ್ಕಾಗಿ ಕ್ರೈಸ್ತರಲ್ಲಿ ಕ್ಷಮೆ ಕೇಳಬೇಕು ಎಂದೂ ಒತ್ತಾಯಿಸಲಾಗಿದೆ. ಅಲ್ಲದೇ ಒಂದೊಮ್ಮೆ ಪೋಸ್ಟ್‌ಗಳನ್ನ ತೆಗೆಯದಿದ್ದರೆ, ಕಾನೂನು ಹೋರಾಟ ಮಾಡುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.












Click it and Unblock the Notifications