Yash: ರಾಮಾಯಣ 400 ಕೋಟಿ ರೂ. ಸಿನಿಮಾ; ವಿಎಫ್‌ಎಕ್ಸ್‌ನಲ್ಲಿನ ಸಣ್ಣಪುಟ್ಟ ತಪ್ಪು ಹುಡುಕಬೇಡಿ ಎಂದ ರಾಕಿಂಗ್ ಸ್ಟಾರ್
ನಟ ಯಶ್ ಅವರು ದೊಡ್ಡ ಬಜೆಟ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ಇದೀಗ ವಿಎಫ್‌ಎಕ್ಸ್ ಬಗ್ಗೆ ಅಭಿಮಾನಿಗಳಿಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಯಶ್ ಅಭಿನಯದ ಟಾಕ್ಸಿಕ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಲಾಭ ಗಳಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಆದರೆ ನಟ-ನಿರ್ಮಾಪಕ ತಮ್ಮ ಮುಂದಿನ ಚಿತ್ರ ರಾಮಾಯಣದೊಂದಿಗೆ ಬಂದಿದ್ದಾರೆ. ಇನ್ನು ಈ ಚಿತ್ರವನ್ನು ಯಶ್ ಅವರು ನಮಿತ್ ಮಲ್ಹೋತ್ರಾ ಅವರೊಂದಿಗೆ ಸೇರಿ ನಿರ್ಮಿಸುತ್ತಿದ್ದಾರೆ.
ಯಶ್ ಅವರು ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ, ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ಮತ್ತು ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ. ರಾಮಾಯಣ ಬಿಡುಗಡೆಯಾಗಲು ಕೆಲವೇ ವಾರಗಳಷ್ಟೇ ಬಾಕಿ ಇದೆ. ಈ ಸಂದರ್ಭದಲ್ಲಿ ಯಶ್ ಅವರು ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಸಣ್ಣಪುಟ್ಟ ತಪ್ಪುಗಳಿದ್ದರೆ, ನಿರ್ಲಕ್ಷಿಸಿ ಎಂದಿದ್ದಾರೆ.

ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ರಾಮಾಯಣ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಯಶ್ ಅವರು ಮಾತನಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ, ಯಶ್ ತಮ್ಮ ಅಭಿಮಾನಿಗಳಿಗೆ ಸಿನಿಮಾದ ದೃಶ್ಯಗಳಲ್ಲಿನ ತಪ್ಪುಗಳನ್ನು ಹುಡುಕದೆ, ಮುಕ್ತ ಮನಸ್ಸಿನಿಂದ ಸಿನಿಮಾ ನೋಡುವಂತೆ ಅವರು ಹೇಳಿದ್ದಾರೆ. ವಿಎಫ್‌ಎಕ್ಸ್‌ನಲ್ಲಿ ಸಣ್ಣಪುಟ್ಟ ಕರೆಕ್ಷನ್‌ಗಳಿದ್ದರೆ ಅದನ್ನು ಹೈಲೆಟ್ ಮಾಡಬೇಡಿ ಇದು 4,000 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಸಿನಿಮಾ ಎಂದು ರಾಕಿಂಗ್ ಸ್ಟಾರ್ ಯಶ್ ಅವರು ಹೇಳಿದ್ದಾರೆ.
ಕೆಲವೊಮ್ಮೆ ಇಂತಹ ಕೆಲಸಗಳನ್ನು ಯಾರಾದರೂ ಮುಂದೆ ಬಂದಾಗ, ಅವರು ಆ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯೆಲು ತಮ್ಮ ಹೆಸರು ಮತ್ತು ಹಣವನ್ನು ಪಣಕ್ಕಿಟ್ಟಿರುತ್ತಾರೆ. ದಯವಿಟ್ಟು ಈ ಸಿನಿಮಾದಲ್ಲಿನ VFX ನಲ್ಲಿ ಸಣ್ಣ ದೋಷಗಳನ್ನು ಹುಡುಕಲು ಪ್ರಯತ್ನಿಸಬೇಡಿ. ನಮಿತ್ ಅವರಂತಹ ಜನರನ್ನು ನಾವು ಈಗ ಕಳೆದುಕೊಂಡರೆ, ಮತ್ತೆ ಇಂತಹ ಪ್ರಯತ್ನಗಳನ್ನು ಮಾಡಲು ಹಲವು ವರ್ಷಗಳೇ ಬೇಕಾಗಬಹುದು. ನಾವು ಮತ್ತೆ ಹಿಂದಿ ಸ್ಥಿತಿಗೆ ಹೋಗಬೇಕಾಗುತ್ತದೆ. ಹೀಗಾಗಿ, ಈ ಸಿನಿಮಾವನ್ನು ಮುಕ್ತ ಮನಸ್ಸಿನಿಂದ ನೋಡಿ.
ಮುಂದುವರಿದು ನಟ ಯಶ್ ಅವರು, ನಮಿತ್ ಅವರು ಯಾವಾಗಲೂ ಜನರ ಅಭಿಪ್ರಾಯ ಮತ್ತು ಟೀಕೆಗಳನ್ನು ಸ್ವೀಕರಿಸಿ, ಸಿನಿಮಾವನ್ನು ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನಿಸಿದ್ದಾರೆ. ನನ್ನ ಕಡೆಯಿಂದ ನಿಮ್ಮಲ್ಲಿ ಒಂದು ಮನವಿ ಮಾಡುತ್ತೇನೆ. ನಿಮಗೆ ಸಿನಿಮಾ ಇಷ್ಟವಾದರೆ, ಎಲ್ಲರೂ ಒಟ್ಟಾಗಿ ಅದನ್ನು ಬೆಂಬಲಿಸಿ, ಜಗತ್ತಿಗೆ ಪರಿಚಯಿಸೋಣ ಎಂದಿದ್ದಾರೆ.
ಈ ಸಿನಿಮಾದ ಎರಡು ಭಾಗಗಳನ್ನು ಒಟ್ಟು 4,000 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದೆ ಎಂದು ಈ ಹಿಂದೆ ಹೇಳಿಕೊಂಡಿದ್ದ ನಮಿತ್ ಅವರನ್ನು ಹೊಗಳಿದ ಯಶ್, ಯಾರಾದರೂ ಸಿನಿಮಾ ಮಾಡುವ ಕನಸು ಕಾಣಬಹುದು, ಆದರೆ ಕೆಲವೇ ಜನರಿಗೆ ಮಾತ್ರ ಆ ರೀತಿಯ ಉತ್ಸಾಹ, ಸಮರ್ಪಣೆ, ದೃಢನಿಶ್ಚಯ ಮತ್ತು ಹುಚ್ಚುತನ ಇರುತ್ತದೆ. ಒಬ್ಬ ಭಾರತೀಯನಾಗಿ, ನಾನು ನಿಮಗೆ ಹೇಳುತ್ತಿದ್ದೇನೆ, ನಾವು ಈ ವ್ಯಕ್ತಿಯನ್ನು ರಕ್ಷಿಸಬೇಕಾಗಿದೆ ಅಂತಲೂ ಹೇಳಿದದಾರೆ.


Click it and Unblock the Notifications
