ಕುಸ್ತಿ ಫೆಡರೆಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ಶಕ್ತಿ ಪ್ರದರ್ಶನದ ರ‍್ಯಾಲಿ ಮುಂದೂಡಿಕೆ
ನವದೆಹಲಿ, ಜೂನ್ 2: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕುಸ್ತಿ ಸಂಸ್ಥೆಯ ಮುಖ್ಯಸ್ಥ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಶ್ರುಕ್ರವಾತರ ಅಯೋಧ್ಯೆಯಲ್ಲಿ ತನ್ನ ಬೆಂಬಲಕ್ಕಾಗಿ ನಡೆಸಲು ಉದ್ದೇಶಿಸಿದ್ದ ರ‍್ಯಾಲಿಯನ್ನು ಕೆಲವು ದಿನಗಳ ಕಾಲ ಮುಂದೂಡಲಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ಸಂಸದನೂ ಆಗಿರುವ ಬ್ರಿಜ್ ಭೂಷಣ್ ಸಿಂಗ್ ರ‍್ಯಾಲಿಗೆ ಅನುಮತಿ ಕೇಳಿಲ್ಲ ಎಂದು ಅಯೋಧ್ಯೆ ಆಡಳಿತದ ಮೂಲಗಳು ತಿಳಿಸಿವೆ. ಬದಲಾಗಿ ಬ್ರಿಜ್ ಭೂಷಣ್ ಸಾಮಾಜಿಕ ಮಾಧ್ಯಮದಲ್ಲಿ ಘೋಷಣೆ ಮಾಡಿದಾಗ ಸಭೆಯನ್ನು ನಡೆಸಲು ಶ್ರೀಗಳ ಗುಂಪಿನಿಂದ ವಿನಂತಿಯನ್ನು ಪರಿಗಣಿಸಲಾಗುತ್ತಿದೆ ಎನ್ನಲಾಗಿದೆ.

ಯುಪಿಯ ಕೈಸರ್‌ಗಂಜ್‌ನ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಸಾಧುಗಳ ಆಶೀರ್ವಾದದೊಂದಿಗೆ ಸೋಮವಾರ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುವುದಾಗಿ ಈ ಹಿಂದೆ ಘೋಷಿಸಿದ್ದರು. ಬಿಜೆಪಿಗೆ ಅವರನ್ನು ವಜಾಗೊಳಿಸಲು ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರ ರ‍್ಯಾಲಿ ಶಕ್ತಿ ಪ್ರದರ್ಶನವೆಂದು ವ್ಯಾಪಕವಾಗಿ ಗ್ರಹಿಸಲ್ಪಟ್ಟಿದೆ.
ರ‍್ಯಾಲಿಯ ಬದಲಾವಣೆಗೆ ಕಾರಣವೇನು ಎಂಬುದನ್ನು ಸಂಸದರು ನಿರ್ದಿಷ್ಟಪಡಿಸಿಲ್ಲ. ಇತ್ತೀಚೆಗೆ ಕುಸ್ತಿಪಟುಗಳಿಂದ ಅವರ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ಗಳಲ್ಲಿ ಪಟ್ಟಿ ಮಾಡಲಾದ ಅತಿರೇಕದ ಆರೋಪಗಳ ವಿವರಗಳು ಹೊರಹೊಮ್ಮುತ್ತಿದ್ದಂತೆ ಅವರು ಫೇಸ್‌ಬುಕ್ ಪೋಸ್ಟ್ ಹಾಕಿದ್ದರು. ಅವರನ್ನು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥರಾಗಿ ಅವರನ್ನು ತೆಗೆದುಹಾಕುವಂತೆ ತಿಂಗಳುಗಳಿಂದ ಪ್ರತಿಭಟನೆ ನಡೆಯುತ್ತಿದೆ.
ತಮ್ಮ ಮೇಲಿನ ಆರೋಪಗಳನ್ನು ಬ್ರಿಜ್ ಭೂಷಣ್ ಶರಣ್ ಸಿಂಗ್ ನಿರಾಕರಿಸಿದ್ದು, ಆರೋಪ ಸಾಬೀತಾದರೆ ತಾನು ನೇಣು ಹಾಕಿಕೊಳ್ಳುವುದಾಗಿ ಗುರುವಾರ ಹೇಳಿದ್ದಾರೆ. ಇಂದಿನ ಪೋಸ್ಟ್‌ನಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ರಾಜಕೀಯ ವಿರೋಧಿಗಳು ಮತ್ತು ಅವರ ಪಕ್ಷಗಳಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮತ್ತೊಮ್ಮೆ ಹೇಳಿದ್ದಾರೆ.

ನಿಮ್ಮ ಬೆಂಬಲದಿಂದ ಕಳೆದ 28 ವರ್ಷಗಳಿಂದ ಲೋಕಸಭೆ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ನಾನು ಅಧಿಕಾರ ಮತ್ತು ವಿರೋಧದಲ್ಲಿರುವಾಗ ಎಲ್ಲಾ ಜಾತಿ, ಸಮುದಾಯ ಮತ್ತು ಧರ್ಮದ ಜನರನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದೇನೆ. ನನ್ನ ರಾಜಕೀಯ ವಿರೋಧಿಗಳು ಮತ್ತು ಅವರ ಪಕ್ಷಗಳು ಸುಳ್ಳು ಆರೋಪ ಮಾಡಲು ಕಾರಣವೇ ನಾನು ಎಂದು ಸಂಸದ ಸಿಂಗ್ ಬರೆದಿದ್ದಾರೆ.












Click it and Unblock the Notifications