ಚಿತ್ರಗಳು: ಹೈದರಾಬಾದ್‌ಗೆ ಬಂದ ವಿಶ್ವದ ಅತಿದೊಡ್ಡ ವಿಮಾನ

Written By:
Subscribe to Oneindia Kannada

ಹೈದರಾಬಾದ್, ಮೇ 14: ಹೈದರಾಬಾದ್ ಗೆ ವಿಶೇಷ ಅತಿಥಿಯೊಬ್ಬ ಬಂದಿಳಿದ್ದಾನೆ. ಅವನನ್ನು ನೋಡಿ ಎಲ್ಲರೂ ಸಂಭ್ರಮಿಸಿದ್ದಾರೆ. ಅವನ ಚಿತ್ರಗಳನ್ನು ನಾವು ನೋಡಿಕೊಂಡು ಅವನ ವಿಶೇಷಗಳನ್ನು ತಿಳಿದುಕೊಂಡು ಬರೋಣ .

ವಿಶ್ವದ ಅತೀ ದೊಡ್ದ ಸರಕು ವಿಮಾನ ಎಂದು ಖ್ಯಾತಿ ಪಡೆದಿರುವ ಆಂಟೊನೊವ್ ಎ ಎನ್ -225 ಶುಕ್ರವಾರ ಮುಂಜಾನೆ ತುರ್ಕ್‌ಮೇನಿಸ್ತಾನದಿಂದ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.[ಜಪಾನ್ ಬುಲೆಟ್ ರೈಲಿಗೆ ವಿಮಾನವೂ ಸಾಟಿಯಿಲ್ಲ!]

plane

276 ಅಡಿ ಉದ್ದದ ರೆಕ್ಕೆಗಳನ್ನು ಹೊಂದಿರುವ ಇದು, 32 ಚಕ್ರಗಳನ್ನು ಒಳಗೊಂಡಿದೆ. ಇದಕ್ಕೆ 6 ಟರ್ಬೋಫ್ಯಾನ್‌ಗಳನ್ನು ಅಳವಡಿಸಲಾಗಿದ್ದು, ವಿಮಾನ 640 ಟನ್ ಭಾರವಿದ್ದು, 200 ಟನ್‌ವರೆಗೆ ಭಾರವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಈ ಬೃಹತ್ ಉಕ್ಕಿನ ಹಕ್ಕಿಯನ್ನು ಉಕ್ರೇನ್ ನಿರ್ಮಿಸಿದೆ. ಭಾರತದಿಂದ ಸಿಡ್ನಿಯತ್ತ ಪ್ರಯಾಣ ಬೆಳೆಸಲಿದೆ. ಈ ವಿಮಾನ ತನ್ನ ಅಪಾರ ಸಾಮಥ್ಯ೯ದಿ೦ದಾಗಿ ಗಿನ್ನೆಸ್ ದಾಖಲೆಗೆ ಪಾತ್ರವಾಗಿದೆ. ವಿವಿಧ ಸ೦ದರ್ಭಗಳಲ್ಲಿ ಹಲವು ದೇಶಗಳು ತಮ್ಮ ಸೇನಾ ಕಾರ್ಯಕ್ಕೆ ಮತ್ತು ಸರಕು ಸಾಗಣೆಗೆ ಮ್ರಿಯಾವನ್ನು ಬಳಸಿಕೊ೦ಡ ದಾಖಲೆಗಳು ಇವೆ.[ಕ್ರೇನ್ ಮುರಿದು ಕೆಳಕ್ಕೆ ಬಿದ್ದ ವಿಮಾನ]

-
-
-
-
-
-
-
-

ಈ ವಿಮಾನದ ಲ್ಯಾಂಡಿಂಗ್ ಗೇರ್ ಬರೊಬ್ಬರಿ 32 ಚಕ್ರಗಳನ್ನು ಹೊಂದಿದೆ. 10 ಬ್ರಿಟಿಷ್ ಯುದ್ಧ ಟ್ಯಾ೦ಕರ್ ಗಳನ್ನು ಸೇರಿಸಿದರೆ ಆಗುವಷ್ಟು ವಿಸ್ತಾರದ ಜಾಗ ಹೊ೦ದಿದೆ. ಸರಕು ಸಾಗಣೆಗೆ ಪ್ರಪಂಚದ ಅನೇಕ ದೇಶಗಳು ಈ ವಿಮಾನವನ್ನು ಬಳಸಿಕೊಳ್ಳುತ್ತೇವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
World's largest aircraft, Antonov AN -225 Mriya -- or the Dream, has made its debut landing in India today at the Rajiv Gandhi International Airport in Hyderabad, the Ukraine company's collaborators in Mumbai said on Wednesday. The wide body aircraft is powered by 6 turbofan engines and is considered the longest and the heaviest airplane ever built.
Please Wait while comments are loading...