ಈಜಿಪ್ಟ್ ನ ದಢೂತಿ ಮಹಿಳೆ, ಆಪರೇಷನ್ ನಂತರ ತೊಂದರೆಯಲ್ಲಿ?

6 ವರ್ಷದ ಎಮಾನ್ ಭಾರತಕ್ಕೆ ಬರುವ ಮುನ್ನ 500 ಕೆಜಿ ತೂಕವಿದ್ದರು. ಕೆಲ ದಿನಗಳ ಹಿಂದೆಯೇ ಭಾರತಕ್ಕೆ ಬಂದಿದ್ದ ಅವರಿಗೆ ಏ. 12ರಂದು ಶಸ್ತ್ರಚಿಕಿತ್ಸೆ ಮಾಡಿ ಸುಮಾರು 200 ಕೆಜಿಯಷ್ಟು ಕೊಬ್ಬು ಹೊರತಗೆಯಲಾಗಿತ್ತು.

ಮುಂಬೈ, ಏಪ್ರಿಲ್ 25: ವಿಶ್ವದ ಅತಿ ತೂಕದ ಮಹಿಳೆ ಎಂದೇ ಖ್ಯಾತಿ ಗಳಿಸಿದ್ದ, ತೂಕ ಕಳೆದುಕೊಳ್ಳಲೆಂದೇ ಈಜಿಪ್ಟ್ ನಿಂದ ಭಾರತಕ್ಕೆ ಬಂದು ಆಪರೇಷನ್ ಮಾಡಿಕೊಂಡ ಎಮಾನ್ ಅಹ್ಮದ್ ಅವರ ಪರಿಸ್ಥಿತಿ ಹೀಗಿದೆ...

ಅವರಿನ್ನೂ ವಿಶ್ರಾಂತಿಯಲ್ಲಿದ್ದು ಇನ್ನೂ ಸರಿಯಾಗಿ ಚೇತರಿಸಿಕೊಂಡಿಲ್ಲ ಎಂದು ಆಕೆಯ ಶುಶ್ರೂಷೆಯ ಹೊಣೆ ಹೊತ್ತಿರುವ ಸೈಮಾ ಸೇಲಿಯಂ ಅವರು ಅಳಲು ತೋಡಿಕೊಂಡಿದ್ದಾರೆ. ತನ್ನ ಸಹೋದರಿಯ ಯೋಗಕ್ಷೇಮ ನೋಡಿಕೊಳ್ಳುತ್ತಿರುವ ಡಾ. ಮುಫಾಜಲ್ ಲಾಖಡಾವಾಲಾ ಅವರು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಅವರು ದೂರಿದ್ದಾರೆ.[262 ಕೆಜಿ ತೂಕ ಕಳೆದುಕೊಂಡು ಹಗುರಾದ ಈಜಿಪ್ಟ್ ನ ಇಮಾನ್ ಅಹ್ಮದ್]

World’s heaviest woman’s sister denies recovery, says doctor is ‘fooling us’

36 ವರ್ಷದ ಎಮಾನ್ ಭಾರತಕ್ಕೆ ಬರುವ ಮುನ್ನ 500 ಕೆಜಿ ತೂಕವಿದ್ದರು. ಕೆಲ ದಿನಗಳ ಹಿಂದೆಯೇ ಭಾರತಕ್ಕೆ ಬಂದಿದ್ದ ಅವರಿಗೆ ಏ. 12ರಂದು ಶಸ್ತ್ರಚಿಕಿತ್ಸೆ ಮಾಡಿ ಸುಮಾರು 262 ಕೆಜಿಯಷ್ಟು ಕೊಬ್ಬು ಹೊರತಗೆಯಲಾಗಿತ್ತು. ಆಗಿನಿಂದಲೂ ಎಮಾನ್ ಮಲಗೇ ಇದ್ದಾರೆ. ಇವರಿನ್ನೂ ಎದ್ದು ನಡೆದಾಡುವ ಪರಿಸ್ಥಿತಿಯಲ್ಲಿಲ್ಲ.

ಈ ಬಗ್ಗೆ ಸೈಮಾ ಬೇಸರ ವ್ಯಕ್ತಪಡಿಸಿ, ನನ್ನ ಸಹೋದರಿಯನ್ನು ನೋಡಿಕೊಳ್ಳುತ್ತಿರುವ ಡಾ. ಮುಫಾಜಲ್ ಅವರು ನಮ್ಮ ಸಹೋದರಿಯನ್ನು ಚೆನ್ನಾಗಿ ಶುಶ್ರೂಷೆ ಮಾಡುತ್ತಿಲ್ಲ. ಅವರ ಬಗ್ಗೆ ನಿಖರವಾಗಿ ಏನನ್ನೂ ಹೇಳುತ್ತಿಲ್ಲ. ಎಷ್ಟೇ ಚಿಕಿತ್ಸೆ ಮಾಡುತ್ತಿದ್ದರೂ, ಎಮಾನ್ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣುತ್ತಿಲ್ಲ ಎಂದು ಅಲವತ್ತುಕೊಂಡರು.

ಆದರೆ, ಸೈಮಾ ಆರೋಪ ತಳ್ಳಿಹಾಕಿರುವ ವೈದ್ಯರು, ''ಆಪರೇಷನ್ ಗೂ ಮುನ್ನವೇ ಶೇ. 99ರಷ್ಟು ರಿಸ್ಕ್ ಇದೆ ಎಂದು ಹೇಳಿದ್ದೆವು. ಆದರೂ, ಸೈಮಾ ಆಪರೇಷನ್ ಗೆ ಸಮ್ಮತಿಸಿದ್ದರು. ಆಪರೇಷನ್ ಆದ ನಂತರ ಈಗ ಅವರ ಕಿಡ್ನಿ, ಹೃದಯ, ಮೇದೋಜೀರಕ ಮುಂತಾದ ಪ್ರಮುಖ ಅಂಗಗಳು ಉತ್ತಮವಾಗಿಯೇ ಕೆಲಸ ಮಾಡುತ್ತಿದೆ. ಆದರೆ, ಚೇತರಿಸಿಕೊಳ್ಳಲು ಅವರಿಗೆ ಸಮಯ ಬೇಕಿದೆ. ಸೂಕ್ತ ಫಿಸಿಯೋಥೆರಪಿಯಿಂದ ಅವರು ಮುಂದೆ ನಡೆಯುವ ಭರವಸೆಯಿದೆ'' ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+