ಜಗತ್ತಿನ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಗೆ ಅಗ್ರಸ್ಥಾನ

ನವದೆಹಲಿ, ಜನವರಿ 20: ವಿಶ್ವದ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅಗ್ರಸ್ಥಾನ ಪಡೆದಿದ್ದಾರೆ. ಜಾಗತಿಕ ನಾಯಕರಿಗೆ ಸಂಬಂಧಿಸಿದಂತೆ ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ಬಿಡುಗಡೆ ಮಾಡಿರುವ ಅನುಮೋದಿತ ರೇಟಿಂಗ್ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಶೇ 71ರಷ್ಟು ಅನುಮೋದಿತ ಅಂಕಗಳನ್ನು ಗಳಿಸಿಕೊಂಡಿದ್ದು, ಮೆಕ್ಸಿಕೋದ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಶೇಕಡಾ 66ರಷ್ಟು ಅನುಮೋದಿತ ರೇಟಿಂಗ್‌ನೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಇತರ ಪ್ರಮುಖ ಜಾಗತಿಕ ನಾಯಕರಲ್ಲಿ, ಯುಎಸ್ ಅಧ್ಯಕ್ಷ ಜೋ ಬೈಡೆನ್ ಶೇಕಡಾ 43ರ ಅನುಮೋದನೆ ರೇಟಿಂಗ್ ಹೊಂದಿದ್ದರೆ, ಯುಕೆ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಶೇಕಡಾ 26ರ ಅನುಮೋದನೆ ರೇಟಿಂಗ್ ಪಡೆದುಕೊಂಡಿದ್ದಾರೆ.

World Most popular leaders List: Prime Minister Narendra Modi in Top

ಜಗತ್ತಿನ ಜನಪ್ರಿಯ ನಾಯಕರ ಪಟ್ಟಿ ಹೀಗಿದೆ:

ಭಾರತದ ನರೇಂದ್ರ ಮೋದಿ - ಶೇ. 71
ಮೆಕ್ಸಿಕೋದ ಲೋಪೆಜ್ ಒಬ್ರಡಾರ್ - ಶೇ. 66
ಇಟಲಿಯ ಮಾರಿಯಾ ಡ್ರಾಘಿ - ಶೇ. 60
ಜಪಾನ್ ಫುಮಿಯೋ ಕಿಶಿಡ - ಶೇ. 48
ಜರ್ಮನಿಯ ಓಲಾಫ್ ಸ್ಕೋಲ್ಜ್ - ಶೇ.44
ಅಮೆರಿಕಾದ ಜೋ ಬೈಡೆನ್ - ಶೇ.43
ಕೆನಡಾದ ಜಸ್ಟಿನ್ ಟ್ರುಡೊ - ಶೇ.43
ಆಸ್ಟ್ರೇಲಿಯಾದ ಸ್ಕಾಟ್ ಮೊರಿಸನ್ - ಶೇ.41
ಸ್ಪೇನ್ ಸ್ಯಾಂಚೆಜ್ - ಶೇ.40
ದಕ್ಷಿಣ ಕೊರಿಯಾದ ಮೂನ್ ಜಾ-ಇನ್ - ಶೇ.38
ಬ್ರೆಜಿಲ್ ಜೈರ್ ಬೋಲ್ಸನಾರೊ - ಶೇ. 37
ಫ್ರಾನ್ಸ್ ಎಮ್ಯಾನುವಲ್ ಮ್ಯಾಕ್ರನ್ - ಶೇ.34
ಯುಕೆಯ ಬೋರಿಸ್ ಜಾನ್ಸನ್ - ಶೇ. 26

ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಅಗ್ರಸ್ಥಾನ:

ಮಾರ್ನಿಂಗ್ ಕನ್ಸಲ್ಟ್‌ನ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾದ ವಿವರವಾದ ಟ್ರೆಂಡ್‌ನಲ್ಲಿ, ಕಳೆದ 2020ರ ಮೇ ತಿಂಗಳಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅನುಮೋದನೆ ರೇಟಿಂಗ್ ಶೇಕಡಾ 84ರಷ್ಟಿದ್ದು ಅತ್ಯಧಿಕವಾಗಿತ್ತು. 2021ರ ಮೇ ತಿಂಗಳ ಹೊತ್ತಿಗೆ ಈ ಶೇಕಡಾವಾರ ಪ್ರಮಾಣವು 63 ಕ್ಕೆ ಕುಸಿಯಿತು. ಆದರೆ 2021ರ ಸಾಲಿನಲ್ಲಿ ಪ್ರಸ್ತುತ ಶೇಕಡಾ 71 ರಷ್ಟಿದೆ. ಪಿಎಂ ಮೋದಿ ಜಾಗತಿಕ ಅನುಮೋದನೆ ರೇಟಿಂಗ್‌ಗಳಲ್ಲಿ ಅಗ್ರಸ್ಥಾನ ಪಡೆದಿರುವುದು ಇದೇ ಮೊದಲಲ್ಲ. ಕಳೆದ ನವೆಂಬರ್ 2021ರಲ್ಲಿಯೂ ಪಿಎಂ ಮೋದಿ ವಿಶ್ವದ ಅತ್ಯಂತ 'ಅನುಮೋದಿತ' ನಾಯಕ ಎನಿಸಿಕೊಂಡಿದ್ದರು.

Recommended Video

      Indian Maharajas ತಮ್ಮ ಮೊದಲನೇ ಪಂದ್ಯದಲ್ಲೇ ಗೆದ್ದಿದ್ದು ಹೀಗೆ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+