• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುಂಡಿಗೆಯ ಸ್ವಾಸ್ತ್ಯದ ಅರಿವು ಮೂಡಿಸೋಕೆ 'ಹೃದಯ ದಿನ'

|

ಢವ ಢವ ಎಂದು ನಾನ್ ಸ್ಟಾಪ್ ಬಡಿದುಕೊಳ್ಳುವ ಈ ಗುಂಡಿಗೆ ಅರೆಕ್ಷಣ ತನ್ನ ಡ್ಯೂಟಿ ಮರೆತರೆ ಏನಾದೀತು?! ಉಸ್ಸಪ್ಪಾ, ಅದನ್ನು ಯೋಚಿಸಿದರೇ ಗುಂಡಿಗೆ ನಿಂತು ಹೋಗುತ್ತೆ ಅಂತೀರಾ?!

ಖಂಡಿತ ಹೌದು, ಮನುಷ್ಯನ ದೇಹದಲ್ಲಿರುವ ನರಗಳಲ್ಲೆಲ್ಲ ರಕ್ತ ಪಸರುವಂತೆ ಮಾಡಿ ದೇಹವನ್ನು ಸುಸ್ಥಿತಿಯಲ್ಲಿಟ್ಟಿರುವುದು ಇದೇ ಹೃದಯ. ಆದರೆ ಇಂದಿನ ಒತ್ತಡದ ಬದುಕು, ಬದಲಾದ ಜೀವಶೈಲಿ, ಕ್ರಮಬದ್ಧವಲ್ಲದ ಆಹಾರಕ್ರಮ ಎಲ್ಲವೂ ಸೇರಿ ಹೃದಯದ ಆರೋಗ್ಯವನ್ನು ಹಾಳುಗೆಡವುತ್ತಿವೆ.

ವಯಸ್ಸಲ್ಲದ ವಯಸ್ಸಿನಲ್ಲಿ ಹೃದ್ರೋಗದಿಂದ ಉಸಿರುಮರೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ನೋಡದಿದರೆ ಹೃದಯದ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕೆಲಸ ತುರ್ತಾಗಿ ಆಗಬೇಕಿದೆ ಎಂಬುದು ತಿಳಿಯುತ್ತದೆ.

ಹೃದಯ ಆರೋಗ್ಯವಂತ ಆಗಿರಬೇಕಿದ್ದರೆ ಈ 5 ಲೇಖನ ತಪ್ಪದೆ ಓದಬೇಕು

ಅದಕ್ಕೆಂದೇ ಪ್ರತಿ ವರ್ಷ ಸೆಪ್ಟೆಂಬರ್ 29 ಅನ್ನು ವಿಶ್ ಹೃದಯ ದಿನವನ್ನಾಗಿ ಆವರಿಸುವ ಮೂಲಕ ಹೃದಯದ ಬಗೆಗೆ ಕಾಳಜಿ ಮೂಡಿಸಲಾಗುತ್ತದೆ. ಇಂದು ವಿಶ್ವ ಹೃದಯ ದಿನ. ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡಿಂಗ್ ಆಗಿರುವ, #WorldHeartDay, ಹ್ಯಾಶ್ ಟ್ಯಾಗ್ ನಲ್ಲಿ ನೂರಾರು ಜನ ವಿಶ್ವ ಹೃದಯ ದಿನವನ್ನು ನೆನಪಿಸಿಕೊಂಡಿದ್ದಾರೆ.

ಹೃದಯದ ಆರೋಗ್ಯವೇ ಸಂಪೂರ್ಣ ಆರೋಗ್ಯ!

'ಹೃದಯದ ಆರೋಗ್ಯ ಚೆನ್ನಾಗಿದ್ದರೆ ಸಮಗ್ರ ಆರೋಗ್ಯ ಚೆನ್ನಾಗಿರುತ್ತದೆ. ಈ ಹೃದಯದಿನದಂದು, 'ನಿಮ್ಮ ಹೃದಯಕ್ಕಾಗಿ, ನಮ್ಮೆಲ್ಲರ ಹೃದಯಕ್ಕಾಗಿ ನನ್ನ ಹೃದಯ ಎಂಬ ಸಂಕಲ್ಪ ಮಾಡೋಣ. ಆರೋಗ್ಯವಂತ ಹೃದಯವನ್ನು ಕಾಪಾಡಿಕೊಳ್ಳಲು ಮತ್ತು ಅದರ ಮಹತ್ವದ ಅರಿವು ಮೂಡಿಸಲು ನಾವೆಲ್ಲ ಒಂದಾಗೋಣ. ಆರೋಗ್ಯಕರ ಡಯಟ್ ಮತ್ತು ನಿಯಮಿತ ವ್ಯಾಯಾಮ ಉತ್ತಮ ಹೃದಯ ಆರೋಗ್ಯಕ್ಕೆ ಸೋಪಾನ' ಎಂದಿದ್ದಾರೆ ಮಲ್ಲೇಶ್ವರ ಶಾಸಕ ಡಾ.ಅಶ್ವತ್ಥ ನಾರಾಯಣ.

ಮಾಸ್ಟರ್ ಬ್ಲಾಸ್ಟರ್ ಟ್ವೀಟ್

ಮನುಷ್ಯನ ಜೀವಕ್ಕಿಂತ ಅಮೂಲ್ಯವಾದುದು ಯಾವುದೂ ಇಲ್ಲ. ಈ ವಿಶ್ವ ಹೃದಯದಿನದಂದು ನಾನು ಹೃದಯಾಘಾತದವಾದಾಗ ಏನು ಮಾಡಬೇಕು ಎಂಬ ಕುರಿತು ಅರಿವು ಮೂಡಿಸುವ ಕೆಲಸಕ್ಕೆ ಕೈಹಾಕಿದ್ದೇನೆ. ಹೃದಯ ಉಳಿಸಲು ನೀವೂ ಕೈಜೋಡಿಸಿ ಎಂದು ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಟ್ವೀಟ್ ಮಾಡಿದ್ದಾರೆ.

ಸತ್ಯವಾಗ್ಲೂ ಕಣ್ರೀ, ಹೃದ್ರೋಗಕ್ಕೆ ಅತ್ಯುತ್ತಮ ಪರಿಹಾರ ಮದುವೆಯಂತೆ!

ಉತ್ತಮ ಹೃದಯ, ಉತ್ತಮ ಆರೋಗ್ಯ

ಪ್ರತಿವರ್ಷ 17.5 ಶತಕೋಟಿ ಮಕ್ಕಳು ಕೇವಲ ಹೃದಯ ಸಂಬಂಧಿ ಕಾಯಿಲೆಯಿಂದಲೇ ಸಾವಿಗೀಡಾಗುತ್ತಿದ್ದಾರೆ. ಇಂದಿನಿಂದಲೇ ಹೃದಯದ ಬಗ್ಗೆ ಕಾಳಜಿ ತೆಗೆದುಕೊಳ್ಳಲು ಮುಂದಾಗೋಣ. ಉತ್ತಮ ಹೃದಯ, ಉತ್ತಮ ಆರೋಗ್ಯ ಎಂದಿದ್ದಾರೆ ಗುಜರಾತ್ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಡಾ. ಋತ್ವಿಜ್ ಪಟೇಲ್.

ಹೃದಯ ಆರೋಗ್ಯ ಸುರಕ್ಷತೆಗೆ 10 ಉಪಯುಕ್ತ ಸಲಹೆಗಳು

ಒಂದು ಸಣ್ಣ ಬದಲಾವಣೆ ನಿಮ್ಮ ಜೀವ ಉಳಿಸೀತು!

ನಿಮ್ಮ ಬದುಕಿನಲ್ಲಿ ಮಾಡಿಕೊಳ್ಳುವ ಸಣ್ಣ ಬದಲಾವಣೆಯೇ ನಿಮ್ಮ ಜೀವ ಉಳಿಸೀತು. ನಿಮ್ಮ ಹೃದಯದ ಆರೋಗ್ಯ ಕಾಪಾಡೀತು. ವಿಶ್ವ ಹೃದಯ ದಿನದಂದು, ಅಂಥ ಬದಲಾವಣೆಯನ್ನು ಮಾಡಿಕೊಳ್ಳಲು ಕಲಿಯೋಣ ಎಂದು ನಾನು ಆಶಿಸುತ್ತೇನೆ ಎಂದಿದ್ದಾರೆ ಬಾಬುಲ್ ಸುಪ್ರಿಯೋ.

ಮರುಹುಟ್ಟು ನೀಡಿದ ಪ್ರಿಯತಮೆಯ ಆ ಮೊದಲ 'ಮುತ್ತಿನ' ಮ್ಯಾಜಿಕ್!

ಅರ್ಧ ಗಂಟೆಯಾದರೂ ವ್ಯಾಯಾಮ ಮಾಡೋಣ

ಕನಿಷ್ಠ ವಾರದ ಐದು ದಿನವಾದರೂ ವ್ಯಾಯಾಮ ಮಾಡೋಣ. ನಮ್ಮ ಹೃದಯವನ್ನು ಸಮ್ಯೆಯಿಂದ ಹೊರಗಿಡಲು ಅಷ್ಟನ್ನಾದರೂ ಮಾಡೋಣ. ನಮ್ಮ ಹೃದಯದ ಕಾಳಜಿ ನಮ್ಮ ಕೈಲಿದೆ ಎಂದಿದ್ದಾರೆ ಜ್ಯೋತಿ.

ಶೇ.50ರಷ್ಟು ಹೃದ್ರೋಗ ಹೆಚ್ಚಳ, ಕಾರಣ ಇಲ್ಲಿವೆ

English summary
World heart day is celebrating all over the world on September 29th to create awareness about heart. Here are twitter reactions
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X