ಬಜೆಟ್ 2021: ಚಿನ್ನದ ಮೇಲಿನ ಆಮದು ಸುಂಕ ಇಳಿಕೆಗೆ ವಿಶ್ವ ಚಿನ್ನ ಮಂಡಳಿ ಸ್ವಾಗತ
ನವದೆಹಲಿ,ಫೆಬ್ರವರಿ 01: ಚಿನ್ನದ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ವಿಶ್ವ ಚಿನ್ನ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಸೋಮಸುಂದರಂ ಪಿಆರ್ ಸ್ವಾಗತಿಸಿದ್ದಾರೆ.
ಚಿನ್ನದ ಮೇಲಿನ ಆಮದು ಸುಂಕವನ್ನು ಶೇ.12.5 ರಿಂದ 10.75 ಇಳಿಸಿರುವುದು ಸ್ವಾಗತಾರ್ಹ, ಇದು ಚಿನ್ನದ ಮಾರುಕಟ್ಟೆಯ ಬಹುದಿನದ ಬೇಡಿಕೆಯಾಗಿತ್ತು. ಆಮದು ಸುಂಕದ ಮೇಲಿನ ಈ ಕಡಿತವು ಭವಿಷ್ಯದಲ್ಲಿ ಇನ್ನಷ್ಟು ಮುಂದುವರೆಯಲಿದೆ ಎಂದು ಚಿನ್ನದ ಮಾರುಕಟ್ಟೆ ನಿರೀಕ್ಷಿಸುತ್ತಿದೆ.
ಇದು ಮಾರುಕಟ್ಟೆಗೆ ಅಗತ್ಯ ಹಾಗೂ ಅನಿವಾರ್ಯದ ಕ್ರಮವೂ ಆಗಿತ್ತು, ಇವತ್ತಿನ ಘೋಷಣೆಯಿಂದ ಭಾರತದಲ್ಲಿನ ಹೂಡಿಕೆ ಹಾಗೂ ಜಾಗತಿಕ ಮಾರುಕಟ್ಟೆಯ ಮೇಲೂ ಧನಾತ್ಮಕ ಪರಿಣಾಮ ಬೀರಲಿದೆ ಎಂದರು.

ಇದರ ಜತೆಗೆ ಜಪ್ತಿ ಮಾಡಲಾಗಿರುವ ಬಂಗಾರದ ತುರ್ತು ವಿಲೇವಾರಿ ಕೂಡ ಈ ಕ್ಷಣದ ಅಗತ್ಯದ ಕ್ರಮವಾಗಿದೆ ಇದಕ್ಕೆ ಕೇಂದ್ರ ಸರ್ಕಾರ ಕ್ರಮವಹಿಸಬೇಕು. ಇದರೊಂದಿಗೆ ಗ್ರಾಮೀಣ ಮೂಲ ಸೌಕರ್ಯಕ್ಕೆ ಒತ್ತು ನೀಡಿರುವುದು ಚಿನ್ನದ ವ್ಯಾಪಾರದ ಮೇಲೂ ಧನಾತ್ಮಕ ಪರಿಣಾಮ ಬೀರಲಿದೆ ಎಂದು ಸುಂದರಂ ತಿಳಿಸಿದ್ದಾರೆ.
ಯಾವ್ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಮೀಸಲು
- ರೈಲ್ವೇ ಇಲಾಖೆಗೆ 1,10,055 ಕೋಟಿ
- ಉತ್ಪಾದನಾ ವಲಯಕ್ಕೆ 1.94 ಕೋಟಿ ರೂಪಾಯಿ ಅನುದಾನ
- ಮೀನುಗಾರಿಕೆ: 2 ಸಾವಿರ ಕೋಟಿ
- ಸಂಶೋಧನಾ ವಲಯ: ರೂ.50 ಸಾವಿರ ಕೋಟಿ
- ರಕ್ಷಣಾ ಇಲಾಖೆ: ರೂ.4.78 ಲಕ್ಷ ಕೋಟಿ
- ಗೃಹ ಇಲಾಖೆ: ರೂ.1.66 ಕೋಟಿ
- ಕೃಷಿ ಕ್ಷೇತ್ರ: ಕೃಷಿ ಉತ್ಪನ್ನ ಖರೀದಿಗಾಗಿಯೇ 1.72 ಲಕ್ಷ ಕೋಟಿ
- ರೈಲ್ವೇ ವಲಯಕ್ಕೆ: 1,10,055 ಕೋಟಿ












Click it and Unblock the Notifications