• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ ವಿಶ್ವಾಬ್ಯಾಂಕ್ ಅಧ್ಯಕ್ಷ

|

ನವದೆಹಲಿ, ನವೆಂಬರ್ 02: ಪ್ರಧಾನಿ ಮೋದಿ ಅವರಿಗೆ ಇಂದು ವಿಶ್ವಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಕರೆ ಮಾಡಿದ್ದು, ಮೋದಿ ಅವರ ಆರ್ಥಿಕ ನೀತಿಗಳನ್ನು ಹಾಡಿ ಹೊಗಳಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

ಭಾರತದಲ್ಲಿ ವ್ಯವಹಾರ ಮಾಡಲು ರೂಪಿಸಿರುವ ಸರಳ ನೀತಿಗಳ ಬಗ್ಗೆ ವಿಶ್ವಬ್ಯಾಂಕ್ ಅಧ್ಯಕ್ಷ ಭಾರಿ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

MSMEಗಳಿಗೆ 1 ಗಂಟೆಯಲ್ಲಿ 1 ಕೋಟಿ ಸಾಲ ಸೇರಿ 12 ಯೋಜನೆ ಘೋಷಣೆ

ಐತಿಹಾಸಿಕ ರೀತಿಯಲ್ಲಿ ಭಾರತವು ಆರ್ಥಿಕ ನೀತಿಗಳನ್ನು ರೂಪಿಸಿದೆ. ವ್ಯವಹಾರ ಮಾಡಲು ಅತ್ಯಂತ ಸರಳವಾದ ನೀತಿಗಳನ್ನು ಭಾರತ ರೂಪಿಸಿದ್ದು, ಭಾರತವು ಹೊಸ ಆರ್ಥಿಕೆಗೆ ತೆರೆದುಕೊಂಡಿದೆ ಎಂದು ಜಿಮ್ ಯಾಂಗ್ ಕಿಮ್ ಹೇಳಿದ್ದಾರೆ.

ಸಣ್ಣ ಉದ್ಯಮಗಳಿಗೆ ದೀಪಾವಳಿ ಗಿಫ್ಟ್!: 59 ನಿಮಿಷದಲ್ಲಿ ಸಿಗಲಿದೆ ಸಾಲ

125 ಕೋಟಿ ಜನಸಂಖ್ಯೆ ಇರುವ ದೇಶವು ಕೇವಲ ನಾಲ್ಕು ವರ್ಷದಲ್ಲಿ 65 ಸ್ಥಾನ ಉನ್ನತಿ ಸಾಧಿಸಿರುವುದು ಸಾಮಾನ್ಯದ ವಿಷಯವಲ್ಲ ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಹೇಳಿದ್ದಾರೆ. ಇದೆಲ್ಲವೂ ಮೋದಿ ಅವರ ದೂರದೃಷ್ಟಿ ಮತ್ತು ಬದ್ಧತೆಯುಳ್ಳ ನಾಯಕತ್ವದಿಂದ ಮಾತ್ರವೇ ಸಾಧ್ಯವಾಗಿದೆ ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಹೇಳಿದ್ದಾರೆ.

English summary
World Bank president Jim Yong Kim called Prime minister Narendra Modi today and praised him for Indian economy. Jim Yong Kim congratulated Prime Minister for India’s historic rise in the Ease of Doing Business rankings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X