ಶ್ರೀಮಂತರ ಪಟ್ಟಿಯಿಂದ ಸೋನಿಯಾ ಹೆಸರು ಮಾಯ

World 12th richest Congress CP Sonia Gandhi name removed Huffingtonpost,
ನವದೆಹಲಿ, ಡಿ.3- ಪ್ರಪಂಚದಲ್ಲಿ ಯಾರೆಲ್ಲಾ ದೊಡ್ಡ ದೊಡ್ಡ ಶ್ರೀಮಂತರಿದ್ದಾರೆ ಎಂದು ನಿನ್ನೆ ಪಟ್ಟಿಕಟ್ಟಿದ್ದ ಹಫಿಂಗ್ಟನ್ ಪೋಸ್ಟ್ ಇದೀಗ ಪಟ್ಟಿಯಿಂದ ಸೋನಿಯಾ ಗಾಂಧಿ ಅವರ ಹೆಸರನ್ನು ಕೈ ಬಿಟ್ಟಿದೆ.

ಸಮಾಕಾಲೀನ ವಿಶ್ವದ 20 ಮಂದಿ ಅತಿ ದೊಡ್ಡ ಶ್ರೀಮಂತರ ಪಟ್ಟಿಯಲ್ಲಿ ದೊರೆಗಳು, ಅಧ್ಯಕ್ಷರು, ಸುಲ್ತಾನರು ಮತ್ತು ರಾಣಿಯರು ಸಖತ್ ಸ್ಥಿತಿವಂತರು ಎಂದು ಸ್ಥಾನಪಡೆದಿದ್ದಾರೆ. ಅದರಲ್ಲಿ 12ನೆಯ ಸ್ಥಾನದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು HuffPost World ಪೋಸ್ಟ್ ಮಾಡಿತ್ತು.

ಆದರೆ ತನ್ನ ಪೋಸ್ಟ್ ಅನ್ನು ಒಂದೇ ದಿನದಲ್ಲಿ ದಿಢೀರನೆ ವಾಪಸ್ ಪಡೆದಿರುವ HuffPost World ಇದೀಗ ಲೇವಡಿಗೆ ತುತ್ತಾಗಿದೆ. ಜತೆಗೆ, ಖತಾರ್ ಅಮೀರ ಖತಾರ್ ಹಮೀದ್ ಬಿನ್ ಖಲೀಫಾ ಅಲ್ ಥಣಿ ಹೆಸರನ್ನೂ ಪಟ್ಟಿಯಿಂದ ತೆಗೆದುಹಾಕಿದೆ.

ಈ ಸಂಬಂಧ ಸಂಪಾದಕರು ಹೇಳಿಕೆಯನ್ನೂ ದಾಖಲಿಸಿದ್ದಾರೆ. ಯಾವುದೋ ವೆಬ್ ಸೈಟ್ ನೋಡಿಕೊಂಡು ಅದನ್ನೇ ನಾವೂ ವರದಿ ಮಾಡಿದೆವು. ಈ ನಾಯಕರಿಬ್ಬರ ಆಸ್ತಿಯ ವಿವರ ನಮಗೆ ಲಭ್ಯವಾಗಿಲ್ಲ. ಹಾಗಾಗಿ ನಮ್ಮ ಪೋಸ್ಟ್ ಅನ್ನು ತೆಗೆದುಹಾಕಿದ್ದು, ಓದುಗರಲ್ಲಿ ಯಾವುದೇ ಗೊಂದಲ ಉಂಟುಮಾಡಿದ್ದರೆ ಅದಕ್ಕಾಗಿ ಕ್ಷಮೆ ಯಾಚಿಸುತ್ತೇವೆ ಎಂದು ತಿಳಿಸಿದೆ.

2009ರಲ್ಲಿ ಸೋನಿಯಾ ಗಾಂಧಿ ಅವರು ಲೋಕಸಭಾ ಚುನಾವಣೆಯಲ್ಲಿ ಘೋಷಿಸಿಕೊಂಡಿದ್ದ ಮೊತ್ತಕ್ಕೂ HuffPost ಪಟ್ಟಿಯಲ್ಲಿನ 2 ಶತಕೋಟಿ ಡಾಲರ್ ಮೊತ್ತಕ್ಕೂ ಅಜಗಜಾಂತರವಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+